".

Header Ads

ಸುದ್ದಿ : ವೃದ್ಧೆಯ ಕಾಲುಂಗರ ಕದಿಯಲು ಪಾದವನ್ನೇ ಕತ್ತರಿಸಿದ ದರೋಡೆಕೋರರು !

ಜೈಪುರ: 108 ವರ್ಷ ವಯಸ್ಸಿನ ವೃದ್ಧೆಯೊಬ್ಬರು ಧರಿಸಿದ್ದ ಕಾಲುಂಗುರ ಕದಿಯುವ ಸಲುವಾಗಿ ದರೋ ಡೆಕೋರರು ವೃದ್ಧೆಯ ಪಾದವನ್ನೇ ಕತ್ತರಿಸಿದ ಹೃದಯ ವಿದ್ರಾವಕ ಘಟನೆ ಜೈಪುರದಲ್ಲಿನಡೆದಿದೆ.

ಜಮುನಾ ದೇ ವಿ ಎಂಬ ಮಹಿಳೆ ಯನ್ನು ರವಿವಾರ ನಸುಕಿನಲ್ಲಿ ಮನೆಯಿಂದ ಹೊರಕ್ಕೆ ಎಳೆ ದು ಹರಿತವಾದ ಆಯುಧದಿಂದ ಪಾದ ಕತ್ತರಿಸಿ ಕಾಲುಂ ಗುರದೊಂದಿಗೆ ದರೋಡೆಕೋರರು ಪರಾರಿಯಾಗಿದ್ದಾರೆ ಎಂದು ಗಲ್ಟಾ ಗೇಟ್ ಪೊಲೀಸ್ ಠಾಣಾಧಿಕಾರಿ ಮಖೇಶ್ ಕುಮಾರ್ ವಿವರ ನೀಡಿದ್ದಾರೆ. ಮನೆಯ ಹೊರಗೆ ನಿರ್ಮಿಸಲಾಗಿದ್ದ ಬಾತ್‍ರೂಂನಲ್ಲಿ ರಕ್ತದ ಮಡುವಿನಲ್ಲಿ ವೃದ್ಧೆಬಿದ್ದಿದ್ದರು. ಮಗಳು ಮಮತಾ ಈ ಬಗ್ಗೆಕುಟುಂಬದವರಿಗೆ ಮಾಹಿತಿ ನೀಡಿದ್ದಾಗಿ ಸಂತ್ರಸ್ತೆಯ ಮಗಳು ಗೋ ವಿಂದಿ ದೇವಿ (45) ಹೇಳಿದ್ದಾರೆ. "ವೃದ್ಧತಾಯಿ ಮನೆಯ ಹೊರಗೆ ನೋ ವಿನಿಂದ ನರಳುತ್ತಿದ್ದುದು ಕೇಳಿಸಿತು ಎಂದು ಪುತ್ರಿ ಹೇಳಿದ್ದಾಳೆ . ತಕ್ಷಣ ಸವಾಯಿ ಮಾನ್‍ಸಿಂಗ್ ಆಸ್ಪತ್ರೆಗೆ ದಾಖಲಿಸಿದ್ದೇವೆ. ಅವರ ಸ್ಥಿತಿ ಚಿಂತಾಜನಕವಾಗಿದೆ" ಎಂದು ವಿವರಿಸಿದ್ದಾರೆ. ಎಲ್ಲರೂ ನಿದ್ರಿಸುತ್ತಿದ್ದಾಗ ಮುಂಜಾನೆ 5 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಮುಂಜಾನೆ 6 ರ ಸುಮಾರಿಗೆ ಅಜ್ಜಿಹಾಸಿಗೆಯಲ್ಲಿ ಇಲ್ಲ ಎನ್ನುವುದು ಮಮತಾ ಅವರ ಗಮನಕ್ಕೆ ಬಂತು. ಹೊರಬಂದು ನೋಡಿದಾಗ ಪಾದವನ್ನು ಕತ್ತರಿಸಿದ ಸ್ಥಿತಿಯಲ್ಲಿಅವರು ಬಿದ್ದಿದ್ದರು ಎಂದು ತಿಳಿಸಿದ್ದಾರೆ. ಈ ಬಗ್ಗೆ hindustantimes.com ವರದಿ ಮಾಡಿದೆ.

Powered by Blogger.