".

Header Ads

ನಾಲಾಸೋಪಾರದಲ್ಲಿ, ಪಟ್ಲ ಸತೀಶ್ ಶೆಟ್ರ ಸಾರಥ್ಯದ ಪಾವಂಜೆ ಯಕ್ಷಗಾನ ಮೇಳದ ಮುಂಬಯಿ ಪ್ರವಾಸದ ಪ್ರಥಮ ಪ್ರದರ್ಶನ


(ಚಿತ್ರ, ವರದಿ : ದಿನೇಶ್ ಕುಲಾಲ್)

ನಾಲಾಸೋಪಾರಾ : ಮುಲ್ಕಿಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಹೆಸರಿನಲ್ಲಿ . ಪಟ್ಲ ಸತೀಶ್‌ ಶೆಟ್ಟಿ ಅವರ ಸಾರಥ್ಯದಲ್ಲಿ  ಪ್ರಾರಂಭಗೊಂಡ.  ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮುಂಬೈ ಪ್ರವಾಸ ದ ಪ್ರಥಮ ಪ್ರದರ್ಶನ ನಾಲಾಸೋಪಾರ  ಗ್ಯಾಲಕ್ಸಿ ಹೊಟೇಲ್‌ ಸಭಾಂಗಣ ತುಳುಕುಟ ಫೌಂಡೇಶನ್  ನಾಲಾಸೋಪಾರಾ ಆಶ್ರಯದಲ್ಲಿ ಶ್ರೀರಂಗ ಸಂಗಮ ಮುಂಬಯಿಯ ಸಂಚಾಲಕತ್ವದಲ್ಲಿ  ತಾ.8-10-2022 ನೇ ಶನಿವಾರ ಈ ವರ್ಷದ ಪ್ರಚಂಡ ಯಶಸ್ವೀ ಪ್ರಸಂಗ ಧರ್ಮ ಸಿಂಹಾಸನ.. ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಿತು.

ಪೌರಾಣಿಕ ಯಕ್ಷಗಾನ ಯಕ್ಷಗಾನದಿಂದ ಧಾರ್ಮಿಕತೆ ಜಾಗೃತಿ : ಶಶಿಧರ್ ಕೆ ಶೆಟ್ಟಿಇನ್ನಂಜೆ

ಮುಂಬೈ ಪ್ರವಾಸದ ಪ್ರಪ್ರಥಮ ಯಕ್ಷಗಾನ ಪ್ರದರ್ಶನವನ್ನು ತುಳುಕೂಟ ಪೌಂಡೇಶನ್ ನಾಲಾಸೋಪಾರ ಅಧ್ಯಕ್ಷರಾದ ಶಶಿಧರ್ ಕೆ ಶೆಟ್ಟಿ ಇನ್ನಂಜೆ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ, ನಮಗೆಲ್ಲ ಮಾರ್ಗದರ್ಶಕರಾಗಿರುವ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿರುವ ಐಕಳ ಹರೀಶ್ ಶೆಟ್ಟಿ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಬೇಕಾಗಿತ್ತು, ಆದರೆ ಅವರ ಅನುಪಸ್ಥಿತಿಯಲ್ಲಿ ಈ ಯಕ್ಷಗಾನದ ಮುಂಬೈ ಪ್ರವಾಸಕ್ಕೆ ಚಾಲನೆಯನ್ನು ನೀಡಿದ್ದೇನೆ. ನಾಗನ ಪವಿತ್ರ ಕ್ಷೇತ್ರವಾಗಿರುವ ಪಾವಂಜೆ ಯಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ  ನಲಸಪುರ ಈ ಪವಿತ್ರ ಮಣ್ಣಿಗೆ ಇವರ ಪೆಟ್ಟಿಗೆಯೊಂದಿಗೆ ಆಗಮಿಸಿರುವುದು ನಮಗೆ ಆಶೀರ್ವದಿಸಿದ ಪುಣ್ಯಪ್ರಾಪ್ತಿವಾಗಿದೆ ಅದರಲ್ಲೂ ನನ್ನ ಮಾಲಕತ್ವದ ಈ ಸಭಾಂಗಣಕ್ಕೆ ದೇವರ ಸಾನಿಧ್ಯ ಪ್ರಾಪ್ತಗೊಂಡಿರುದರಿಂದ ನನಗೆ ಅತಿಯಾದ ಆನಂದವಾಗಿದೆ. ಸತೀಶ್ ಶೆಟ್ಟಿ ಅವರು ಯಕ್ಷಗಾನ ಕ್ಷೇತ್ರಕ್ಕೆ ಹೊಸ ಚೈತನ್ಯದ ಶಕ್ತಿ ತುಂಬಿದವರು ಅವರ ಅಭಿಮಾನಿಗಳು ಅನುವಾಯಿಗಳು ಸಹಕಾರದಿಂದ ಕಲಾವಿದರಿಗೆ ಕಲೆಗೆ ಅಪಾರವಾದ ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದಾರೆ. ಸಮಾಜಕ್ಕೆ ಐಕಳ ಹರೀಶ್ ಶೆಟ್ಟಿ ಅವರು ಆರ್ಥಿಕ ನೆರವು ನೀಡುತ್ತಾ ಬಂದಿದ್ದರೆ ಪಟ್ಲಾ ಸತೀಶ್ ಶೆಟ್ಟಿ ಅವರು ಕಲಾವಿದರಿಗೆ ಕಲೆಗೆ ದೊಡ್ಡ ಮಟ್ಟದ ದೇನಿಗೆಯನ್ನು ಸಹಕಾರ ನೀಡುತ್ತಾ ಬಂದಿದ್ದಾರೆ. ಸತೀಶ್ ಶೆಟ್ಟಿ ಅವರ ಸಂಕಷ್ಟದ ಸಂದರ್ಭದಲ್ಲಿ ಕೂಡ ಬಂಟರ ಸಂಘದ  ವಸಾಯಿ-ಡಹಾಣು ಪ್ರಾದೇಶಿಕ  ದಸಮಾನೋತ್ಸವ ಉತ್ಸವ ಸಂದರ್ಭದಲ್ಲಿ  ಆಗಮಿಸಿ ನಮ್ಮ ಕಾರ್ಯಕ್ರಮಕ್ಕೆ ಶೋಭೆ ತಂದಿರುವರು ಈ ನೆನಪು ನಮ್ಮ ಸಮಿತಿಯಲ್ಲಿ ಮತ್ತು ನನ್ನಲ್ಲಿ ಸದಾ ಚಿರಕಾಲದಲ್ಲಿ ಉಳಿಯುತ್ತದೆ ಪಾವಂಜೆ ಯಕ್ಷಗಾನ ಮೇಳದ ಪ್ರಭುತ್ವ ಕಲಾವಿದರು ಸೇರಿಕೊಂಡು ಪೌರಾಣಿಕ ಯಕ್ಷಗಾನವನ್ನು ಪ್ರದರ್ಶಿಸುವದರಿಂದ ನಮ್ಮಲ್ಲಿ , ಧಾರ್ಮಿಕತೆಯ  ಜಾಗೃತಿಯಪ್ರಜ್ಞೆ ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ನುಡಿದರು.

ಮುಖ್ಯ ಅತಿಥಿ ವಸಾಯಿ  ಮಣಿಕಂಠ.ಯ ಸಮಿತಿಯ ಗೌರವ ಅಧ್ಯಕ್ಷ ಶಂಕರ್‌ ಆಳ್ವ ಕರ್ನೂರು   ಮಾತನಾಡುತ್ತಾ  ಕರುನಾಡಿನ ಪವಿತ್ರ ದೇವರಂದರೆ ನಾಗದೇವರು ನಾಗದೇವರ ಸಾನ್ವಿಧಿಯಲ್ಲಿ ಪ್ರಾರಂಭಗೊಂಡ ಯಕ್ಷಗಾನ ತಂಡ ಯಶಸ್ವಿಯಾಗಿ ಜಿಲ್ಲೆಯಲ್ಲಿ ಯಕ್ಷಗಾನ ಗಳನ್ನು ನೀಡುತ್ತಿದೆ ಬಾಳ ಶಾಂತಸಭಾದಿಂದ ಅಪ್ರತಿಮ ಪ್ರತಿಭೆಯಿಂದ ಪರ ಸಹಕಾರದಿಂದ ಯಕ್ಷಗಾನವನ್ನು ಜಗತ್ತಿನಾದ್ಯಂತ ಮತ್ತೆ ವೈಭವಿಕರಿಸುವ ಕಾರ್ಯಕ್ಕೆ  ಪಟ್ಲ ಸತೀಶ ಶೆಟ್ಟಿ  ಅಂಬಿನದನೆ ಸಲ್ಲಿಸಬೇಕಾಗಿದೆ. .




ತ್ರಿರಂಗ ಸಂಗಮದ ಈ ತಂಡ ಇನ್ನಷ್ಟು ಉತ್ತಮ ಯಕ್ಷಗಾನ ನಾಟಕ ತಂಡಗಳನ್ನು ನಗರಕ್ಕೆ ತರುವಲ್ಲಿ ಸಹಕಾರಿ ನಾವೆಲ್ಲರಾಗುವ. ಶಶಿಧರ್ ಶಟ್ಟಿ  ಅವರು ದಾನಿಗಳು  ಈ ಪರಿಸರದ ಕಲಾಪೋಷಕರು ನಮ್ಮೂರಿನ ಕಲೆ ಕಲಾವಿದರಿಗೆ ಸದಾ ನೀಡುವ ಎಂದು ನುಡಿದರು.

ವಸಾಯಿ ಆಶೋಕ್ ಇಂಡಸ್ಟ್ರೀಸ್ ಮಾಲಕ ಅಶೋಕ್ ಶೆಟ್ಟಿ ಪೆರ್ಮುದ್ ಕಲ್ಪವೃಕ್ಷ ಯವರ ಯಕ್ಷಗಾನ ತಂಡಕ್ಕೆ ನಮ್ಮೆಲ್ಲರ ಸಹಕಾರ ನೀಡುವ  ಪಟ್ಲಸತೀಶ ಶೆಟ್ಟಿ ಅವರಂತ ಶ್ರೀಮಂತ ಮನಸ್ಸಿನ ಕಲಾವಿದರ ರಿಂದಾಗಿ ಆರ್ಥಿಕವಾಗಿ ಹಿಂದುಳಿದ ಕಲಾವಿದರಿಗೆ ಎಂದು ವಿವಿಧ ರೀತಿಯಲ್ಲಿ ಸಹಕಾರಿಯಾಗುತ್ತಿದೆ ಮುಂದಿನ ದಿನಗಳಲ್ಲಿ ಈ ನಗರದಲ್ಲಿ ವಿವಿಧ ಕಡೆಗಳಲ್ಲಿ ಈ ತಂಡದ ಯಕ್ಷಗಾನ ನಡೆಯಲಿದೆ ಅದಕ್ಕೆ ನಮ್ಮ ಸಹಕಾರ ನೀಡುವ ಎಂದು ಮತ್ತೋರ್ವ ಅತಿಥಿ ವಸಯಿ - ಡಹಾಣು ಪ್ರಾದೇಶಿಕ ಸಮಿತಿ. ಗೌರವ ಕಾರ್ಯದರ್ಶಿ ನವ ತರುಣ ಮಿತ್ರ ಮಂಡಳಿ, ಮೀರಾ ಭಯಂ ಧರ್ ಅಧ್ಯಕ್ಷ  ಗುತ್ತಿ ನಾರು ರವೀಂದ್ರ ಶೆಟ್ಟಿ ಕೊಟ್ರಪಾಡಿ. ಮಾತನಾಡುತ್ತಾ ಪಟ್ಲ ಸತೀಶ್ ಶೆಟ್ಟಿ ಅವರ ಬಗ್ಗೆ ಈ ಹಿಂದೆ ಹಲವಾರು ಮಾತುಗಳು ಕೇಳಿ ಬಂದವು. ಇದಕ್ಕೆಲ್ಲ ಸಮರ್ಥ ರೀತಿಯಲ್ಲಿ ಸತೀಶ್ ಶೆಟ್ಟಿಯವರು ಉತ್ತರಿಸಿದ್ದಾರೆ. ಪುಣ್ಯದ ಕ್ಷೇತ್ರವಾಗಿರುವ ನಾಗ ನಡೆ  ಇರುವ ಪಾವಂಜೆ ಶ್ರೀ  ಸುಬ್ರಹ್ಮಣ್ಯ ಸ್ವಾಮಿ ಯನ್ನು ಜಗತ್ತಿಗೆ ತಿಳಿಯಪಡಿಸುವ ಕಾರ್ಯವನ್ನು ತೊಡಗಿಕೊಂಡಿದ್ದಾರೆ ಯಕ್ಷಗಾನದ ಮೂಲಕ ಕಟೀಲಿನ ಮಹಾತಾಯಿ ವಿಶ್ವ ವ್ಯಾಪ್ತಿಯಾಗಿದ್ದಾರೆ ಹಾಗೆ ಆ ಮಹಾತಾಯಿಯ ಸುಪುತ್ರ ಸುಬ್ರಹ್ಮಣ್ಯ ಮುಂದಿನ ದಿನಗಳಲ್ಲಿ ವಿಶ್ವ ವ್ಯಾಪ್ತಿಯಾಗಲಿ. ಯಕ್ಷಗಾನ ನಮ್ಮಲ್ಲಿ ಧಾರ್ಮಿಕತೆ ಆಧ್ಯಾತ್ಮಿಕದ ಚಿಂತನೆಯನ್ನು ಹೆಚ್ಚು ವೃದ್ದಿಗೊಳಿಸಲಿ ಎಂದು ನುಡಿದರು.

ವೇದಿಕೆಯಲ್ಲಿ  ಮಂಜುನಾಥ್ ಶೆಟ್ಟಿ ಕೊಡ್ಲಾಡಿ (ಉಪ ಕಾರ್ಯಾಧ್ಯಕ್ಷರು: ಬಂಟರ ಸಂಘ ಮುಂಬೈಯ ವಸಯಿ - ಡಹಾಣು ಪ್ರಾದೇಶಿಕ ಸಮಿತಿ)ರವೀಂದ್ರ ಶೆಟ್ಟಿ ಕೊಟ್ರಪಾಡಿ (ಅಧ್ಯಕ್ಷರು, ನವತರುಣ ಮಿತ್ರ ಮಂಡಳಿ ಮೀರಾ-ಭಾಯಂದರ್), ಪ್ರವೀಣ್ ಶೆಟ್ಟಿ ಕಣಂಜಾರು (  ಕಾರ್ಯಾಧ್ಯಕ್ಷರು:  ಬಂಟರ ಸಂಘ ಮುಂಬೈಯ ವಸಾಯಿ - ಡಹಾಣು ಪ್ರಾದೇಶಿಕ ಸಮಿತಿ), ರಮೇಶ್‌ ಶೆಟ್ಟಿ, ಸಿದ್ದಕಟ್ಟೆ (ಜತೆ ಕೋಶಾಧಿಕಾರಿ, ಬಂಟರ ಸಂಘ ಮುಂಬೈಯ ಮೀರಾ ಭಯಂದರ್ ಪ್ರಾದೇಶಿಕ ಸಮಿತಿ .), ಹರೀಶ್ ಪಾಂಡು ಶೆಟ್ಟಿ (ಕಾರ್ಯಾಧ್ಯಕ್ಷರು, ವಸಾಯಿ- ಡಹಾಣು ಪ್ರಾದೇಶಿಕ ಸಮಿತಿ)ಅಶೋಕ್ ಶೆಟ್ಟಿ ಪರ್ಮುದ (ಆಶೋಕ್ ಇಂಡಸ್ಟ್ರೀಸ್ ವಸಾಯಿ),ಜಗನ್ನಾಥ್ ಡಿ. ಶೆಟ್ಟಿ ಪಳ್ಳಿ (ಕಾರ್ಯದರ್ಶಿ, ವಸಾಯಿ-ಡಹಾಣು ಪ್ರಾದೇಶಿಕ ಸಮಿತಿ)ಜಯಂತ್ ಪಕ್ಕಳ(ಸಂಚಾಲಕರು: ಬಂಟರ ಸಂಘ ಮುಂಬೈಯ ವಸಾಯಿ ಡಹಾಣು ಪ್ರಾದೇಶಿಕ ಸಮಿತಿ), ದೇವೇಂದ್ರ ಬುನ್ನನ್ (ಅಧ್ಯಕ್ಷರು, ಶ್ರೀ ಕಟೀಲು ಯಕ್ಷ ಕಲಾ ವೇದಿಕೆ ವಸಾಯಿ), ಶಂಕರ್‌ ಆಳ್ವ ಕರ್ನೂರು (ಗೌ ಅಧ್ಯಕ್ಷರು, ಮಣಿಕಂಠ ಸೇವಾ ಸಮಿತಿ, ವಸಾಯಿ), ಸುರೇಶ್ ಶೆಟ್ಟಿ ಕೊಪ್ಪ, , ಸತೀಶ್ ಶೆಟ್ಟಿ ರೋಯಲ್ ಮಾರ್ಕೆಟಿಂಗ್, ಮೋಹನ್ ಬಿ. ಶೆಟ್ಟಿ ಸರೋವರ್,  ಕೃಷ್ಣಯ್ಯ ಹೆಗ್ಗಡೆ,  ಸುಭಾಶ್ ಶೆಟ್ಟಿ ಎರ್ಮಾಳ್, ಮತ್ತಿತರರು ಉಪಸ್ಥಿತ ರಿದ್ದರು.

ಕಾರ್ಯಕ್ರಮವನ್ನು ಶ್ರೀರಂಗ ಸಂಗಮ ಮುಂಬಯಿಯ ಸಂಘಟಕರಾದ ಕರ್ನೂರು ಮೋಹನ್ ರೈ ನಿರೂಪಿಸಿದರು, ಅಶೋಕ್  ಪಕ್ಕಳ ಶೆಟ್ಟಿ ಮತ್ತು ನವೀನ್ ಇನ್ನ ಬಾಳಿಕೆ ಅತಿಥಿಗಳನ್ನು ಗೌರವಿಸಿದರು.

ಯಕ್ಷಗಾನ ಪ್ರದರ್ಶನವಾಗುವ ಮುನ್ನ ಶಶಿಧರ್ ಶೆಟ್ಟಿ ಮತ್ತು ಅವರ ಪತ್ನಿ ಶಶಿಕಲಾ ಶೆಟ್ಟಿ ಅವರು ವಿಶೇಷವಾಗಿ  ನಾಗ ದೇವರ ಸೇವೆಯನ್ನು ಮಾಡಿದರು. 

 ಕಾರ್ಯಕ್ರಮದ ಪ್ರದರ್ಶನದ ಕೊನೆಗೆ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

----------------

ಸತ್ಯ ಧರ್ಮದಲ್ಲಿ ನಡೆದಾಗ ಶ್ರೀ ದೇವರು ನಮ್ಮನ್ನು ಅನುಗ್ರಹಿಸುತ್ತಾನೆ: ಪಟ್ಲ ಸತೀಶ್ ಶೆಟ್ಟಿ

ನನ್ನ ಬದುಕಿನಲ್ಲಿ ಸತ್ಯ ಧರ್ಮದಲ್ಲಿ ನಾನು ನಡೆದ ನಮ್ಮೊಂದಿಗೆ ದಿವ್ಯ ಶಕ್ತಿ ಅನುಗ್ರವಾಗುತ್ತದೆ ಎನ್ನುವುದು ನನ್ನ ಬದುಕಿನಲ್ಲಿ ನಾನು ನಂಬಿಕೊಂಡವನು ಯಾವುದೇ ಒಂದು ಘಟನೆಗಳು. ಕಾರ್ಯಗಳು . ಒಳ್ಳೆಯದಕ್ಕೆ ಆಗುತ್ತದೆ ಎಂಬ ನಂಬಿಕೆ ನಮ್ಮಲ್ಲಿರಬೇಕು ಆದ್ದರಿಂದ ನಮ್ಮ ಬದುಕು   ಸಾರ್ಥಕತೆ ಸಾರ್ಥಕತೆಯಾಗಲು ಸಾಧ್ಯವಾಗುತ್ತದೆ. ಇತರದ ಎಲ್ಲರಿಗೂ ಸುಬ್ರಹ್ಮಣ್ಯನ ಅನುಗ್ರಹವಾಗಿದೆ. ಸುಬ್ರಹ್ಮಣ್ಯನ ಸೇವೆಯನ್ನು ಮಾಡಿದವರಿಗೂ ನೋಡಿದವರಿಗೂ ವಿಶೇಷವಾದ ಅನುಗ್ರವಾಗುತ್ತದೆ. ಭೂಮಿಯ ಅಧಿಪತ್ಯ ಆಗಿರುವವರು ನಾಗದೇವರು ಇಂತಹ ಪವಿತ್ರವಾದ ನಮ್ಮ ನಾಡಿನ ಮಣ್ಣಿಗೆ ದೇಶದ ಪ್ರಮುಖರು ಆಗಮಿಸಿ, ನಾಗನಿಗೆ ಸೇವೆ ಮಾಡುತ್ತಾರೆ. ಅಂತ ಪವಿತ್ರವಾಗಿರುವ ನಾಗನ ಸಾನಿಧ್ಯ ಈ ಪರಿಸರಕ್ಕೆ ಆಗಮಿಸಿರುವುದು ಶಶಿಧರ್ ಶೆಟ್ಟಿ ಅವರ ಸಹಕಾರದಿಂದ ಸಾಧ್ಯವಾಗಿದೆ ಮುಂದಿನ ದಿನಗಳಲ್ಲಿ ನಡೆಯಲಿರುವ ನಮ್ಮ ಯಕ್ಷಗಾನ ಪ್ರದರ್ಶನಕ್ಕೆ ನಿಮ್ಮೆಲ್ಲರ ಸಹಕಾರವಿರಲಿ ಎಂದು ನುಡಿದರು.

Powered by Blogger.