ಮಂಗಳೂರು ಸುದ್ದಿ : ನವ ವಿವಾಹಿತ ದಂಪತಿಗಳ ಮೃತದೇಹ ,ನೇಣು ಬಿಗಿದುಕೊಂಡು ಆತ್ಮಹತ್ಯೆ
ನವ ವಿವಾಹಿತ ದಂಪತಿಗಳ ಮೃತ ದೇಹ ನೇಣು ಬಿಗಿದುಕೊಂಡು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಮಂಗಳೂರು ನಗರದ ಆಡುಮರೋಳಿಯ ಅಪಾರ್ಟ್ಕೆಂಟ್ ನಲ್ಲಿ ಪತ್ತೆಯಾಗಿದೆ. ಬೆಳಗಾವಿ ಮೂಲದವರುರಾದ ಮಂಗಳೂರಿನಲ್ಲಿ ನೆಲೆಸಿದ್ದ ಮಲ್ಲಿಕಾರ್ಜುನ (34) ಪತ್ನಿ ಸೌಮ್ಯ(35) ಮೃತಪಟ್ಟವರು.ಈ ಪೈಕಿ ಮಲ್ಲಿಕಾರ್ಜುನ್ ಫ್ರಿಲಾನ್ಸ್ ವೆಬ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದ ಯುವತಿ ನಗರದ ಖಾಸಗಿ ಐಟಿಐ ಕಾಲೇಜಿನಲ್ಲಿ ಲೆಕ್ಟರ್ ಆಗಿದ್ದರು. ಒಂದು ವರ್ಷದ ಹಿಂದೆಯಷ್ಟೆ ಅವರು ಮಂಗಳೂರಿಗೆ ಬಂದು ನೆಲೆಸಿದ್ದರು ಎಂದು ತಿಳಿದು ಬಂದಿದೆ. ದಂಪತಿಯ ಮೃತದೇಹ ತಾವು ವಾಸಿಸುತ್ತಿದ್ದ ಅಪಾರ್ಟ್ ಮೆಂಟ್‌ನ ಕೋಣೆಯಲ್ಲಿ ಫ್ಯಾನ್ ಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿವೆ. ಇವರು ಒಂದೂವರೆ ವರ್ಷದ ಹಿಂದ ವಿವಾಹ ಆಗಿದ್ದರು ಎನ್ನಲಾಗಿದೆ.ಇಬ್ಬರು ಎರಡು ದಿನಗಳ ಹಿಂದೆ ಕೊಡಗಿಗೆ ಪ್ರವಾಸ ಹೋಗಿದ್ದರು, ನಿನ್ನೆ ರಾತ್ರಿ ವಾಪಸ್ಸು ಮನೆಗೆ ಬಂದಿದ್ದಾರೆ. ಮೊದಲು ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ನಂತರ ಯುವತಿ ತನ್ನ ಸಂಬಂಧಿಕರಿಗೆ ವಿಷಯ ಫೋನ್ ಮಾಡಿ ತಿಳಿಸಿದ್ದಾರೆ. ಸಂಬಂಧಿಕರು ಬರುವುದರೊಳಗೆ ಆಕೆ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Post a Comment