ಮಕ್ಕಳ ಉತ್ಸವ ಯುವ ಸಂಘಟನೆಗಳಿಗೆ ಮಾದರಿ - ಶಶಿಧರ ಕೆ. ಶೆಟ್ಟಿ ಇನ್ನಂಜೆ
ಮುಂಬಯಿ : ಆಧುನಿಕ ತಂತ್ರಜ್ಞಾನದ ಮಧ್ಯೆ ಯುವ ಜನಾಂಗವನ್ನು ಒಂದೆಡೆ ಸೇರಿಸಿ ಇಂತಹ ಅದ್ದೂರಿಯ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ನಿಜಕ್ಕೂ ಇದು ಒಂದು ಸಾಧನೆಯಾಗಿದೆ. ವಿವಿಧ ಯುವ ಸಂಘಟನೆಗಳ ಪ್ರಮುಖರನ್ನು ಒಂದೆಡೆ ಸೇರಿಸಿ ನಡೆಸುತ್ತಿರುವ ಈ ಮಕ್ಕಳ ಉತ್ಸವವು ಇತರ ಯುವ ಸಂಘಟನೆಗಳಿಗೆ ಹೆಚ್ಚಿನ ಸ್ಪೂರ್ತಿಯನ್ನು ತರಲಿ ಎಂದು ತುಳು ಕೂಟ ಫೌಂಡೇಶನ್ ನಲಾಸೋಪಾರ ದ ಅಧ್ಯಕ್ಷರಾದ ಶಶಿಧರ ಕೆ. ಶೆಟ್ಟಿ ಇನ್ನಂಜೆಯವರು ನುಡಿದರು.
ಮಲಾಡ್ ಪೂರ್ವದ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಯುವ ವಿಭಾಗದ ಆಶ್ರಯದಲ್ಲಿ ಅ. 30ರಂದು ಮಲಾಡ್ ಪೂರ್ವದ ಚಿಲ್ಡ್ರನ್ಸ್ ಅಕಾಡೆಮಿ ಶಾಲೆಯ ಸಭಾಂಗಣದಲ್ಲಿ ಪೂಜಾ ಸಮಿತಿಯ ಅಧ್ಯಕ್ಷರಾದ ನ್ಯಾ. ಜಗನ್ನಾಥ್ ಎನ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಯುವ ವಿಭಾಗದ ಕಾರ್ಯಧ್ಯಕ್ಷೆ ರಶ್ಮಿ ಎಸ್. ಪೂಜಾರಿ ಯವರ ನೇತೃತ್ವದಲ್ಲಿ ನಡೆದ ಮಕ್ಕಳ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಂದ ನಡೆಸಲ್ಪಡುವ ಕಾರ್ಯಕ್ರಮದಲ್ಲಿ ತಪ್ಪುಗಳು ಆಗುವ ಸಾಧ್ಯತೆಯಿದೆ. ತಪ್ಪು ಆದರೂ ಅದನ್ನು ತಿದ್ದುಪಡಿ ಮಾಡಿ ಮಕ್ಕಳನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ. ಇದರಿಂದ ಮಕ್ಕಳು ಮುಂದೆ ಸರಿಯಾದ ದಾರಿಯಲ್ಲಿ ಮುಂದುವರಿಯಲು ಸಾಧ್ಯ ಎಂದರು.
ಮಕ್ಕಳ ಉತ್ಸವ ಉದ್ಘಾಟನಾ ಸಮಾರಂಭದಲ್ಲಿ ಬಂಟರ ಸಂಘ ಮುಂಬಯಿಯ ಯುವ ವಿಭಾಗದ ಕಾರ್ಯಾಧ್ಯಕ್ಷ ಸಾಗರ್ ಡಿ. ಶೆಟ್ಟಿ, ಬಾಂಬೆ ಬಂಟ್ಸ್ ಅಸೋಷಿಯೇಶನಿನ ಯುವ ವಿಭಾಗದ ಕಾರ್ಯಾಧ್ಯಕ್ಷ ಶಶಿಕಾಂತ್ ರೈ, ಬಿಲ್ಲವರ ಅಸೋಷಿಯೇಶನ್ ಮುಂಬಯಿಯ ಯೂತ್ ವೆಲ್ಫೇರ್ ಉಪಸಮಿತಿಯ ಕಾರ್ಯಾಧ್ಯಕ್ಷ ನೀಲೇಶ್ ಪೂಜಾರಿ ಪಲಿಮಾರು, ಬಾಂಬೆ ಸೌತ್ ಕೇಂದ್ರ ಬ್ರಾಹ್ಮಿಣ್ಸ್ ಅಸೋಷಿಯೇಶನ್ ನ ಯುವ ವಿಭಾಗದ ಕಾರ್ಯಾಧ್ಯಕ್ಷ ದೀಪಕ್ ಶಿವತಾಯ, ಸಾಫಲ್ಯ ಸೇವಾ ಸಂಘ ಯುವ ವಿಭಾಗದ ಕಾರ್ಯಧ್ಯಕ್ಷೆ ಸಂಧ್ಯಾ ಪುತ್ರನ್, ಕರ್ನಾಟಕ ವಿಶ್ವಕರ್ಮ ಅಸೋಷಿಯೇಶನಿನ ಯುವ ವಿಭಾಗದ ಕಾರ್ಯಾಧ್ಯಕ್ಷ ರಾಜೇಶ್ ಆಚಾರ್ಯ, ಕುಲಾಲ ಸಂಘ ವಿದ್ಯಾರ್ಥಿ ಬಳಗದ ಕಾರ್ಯಾಧ್ಯಕ್ಷ ಸಂಜೀವ ಎನ್. ಬಂಗೇರ, ಹೆಗ್ಡೆ ಸೇವಾ ಸಂಘದ ಯುವ ವಿಭಾಗದ ಕಾರ್ಯಧ್ಯಕ್ಷ ಸಾಗರ್ ಹೆಗ್ಡೆ, ಪದ್ಮಶಾಲಿ ಸಮಾಜ ಸೇವಾ ಸಂಘದ ಯುವ ವಿಭಾಗದ ಕಾರ್ಯಧ್ಯಕ್ಷ ಜಯೇಶ್ ಶೆಟ್ಟಿಗಾರ್, ಕರ್ನಾಟಕ ವಿಶ್ವಕರ್ಮ ಅಸೋಷಿಯೇಶನ್ ನ ಅಧ್ಯಕ್ಷರಾದ ಸದಾನಂದ ಆಚಾರ್ಯ, ಕುಲಾಲ ಸಂಘ ಮುಂಬಯಿಯ ಮಾಜಿ ಅಧ್ಯಕ್ಷರಾದ ಗಿರೀಶ್ ಸಾಲ್ಯಾನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಯುವ ವಿಭಾಗದ ಕಾರ್ಯದರ್ಶಿ ಸೌಮ್ಯ ಜೆ ಮೆಂಡನ್ ಸ್ವಾಗತಿಸಿದರು.
ಕಾರ್ಯಕ್ರಮವನ್ನು ಪ್ರಣೀತ ಶೆಟ್ಟಿ ನಿರೂಪಿಸಿದರು. ಅತಿಥಿಗಳನ್ನು ವಿಕ್ರಂ ಪಾಟ್ಕರ್, ದಿಶಾ ಕರ್ಕೇರ, ಪ್ರಥಮ್ ಪೂಜಾರಿ, ರುತ್ವಿ ಕುಂದರ್, ಶಿವಾನಿ ಪ್ರಭು, ನಿಧಿ ನಾಯಕ್ ಫೋನ್, ವೈಷ್ಣವಿ ಸಫಲಿಗ, ಸೌಮ್ಯ ಪ್ರಭು, ಶ್ವೇತಾ ಪೂಜಾರಿ ,ನಿಶಾ ಸುವರ್ಣ, ರೋನಿತ ಪೂಜಾರಿ, ಪ್ರೀತಿ ಪೂಜಾರಿ, ಯೋಗೀಶ್ವರಿ ಗೌಡ, ಪವನ್ ರಾವ್, ಲಾಸ್ಯ ಕುಲಾಲ್, ನಿಧಿ ಶೆಟ್ಟಿ, ಸಾಕ್ಷಿ ಶೆಟ್ಟಿ, ಡಾ| ಶಶಿನ್ ಆಚಾರ್ಯ, ಐಶ್ವರ್ಯ ಪೂಜಾರಿ, ಪ್ರಜ್ಞ ಕುಂದರ್ ಪರಿಚಯಿಸಿದರು.
ವೇದಿಕೆಯಲ್ಲಿ ಉಪಸಮಿತಿಗಳ ಪ್ರಮುಖರು, ಸಮಿತಿಯ ಪದಾಧಿಕಾರಿಗಳು, ಯುವ ವಿಭಾಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಂತರ ಯುವ ವಿಭಾಗದವರಿಂದ ಸ್ವಾಗತ ನೃತ್ಯ, ಯಕ್ಷಗಾನ ನೃತ್ಯ, ಮಕ್ಕಳಿಂದ ಕನ್ನಡದಲ್ಲಿ ಭಾಷಣ ನಡೆಯಿತು.
ಆರೋಗ್ಯದ ಬಗ್ಗೆ ಮನೋರೋಗ ತಜ್ಞ ಡಾ. ಹರೀಷ್ ಶೆಟ್ಟಿ ಯವರು ಮಕ್ಕಳಿಗೆ ಸೂಕ್ತ ಸಲಹೆ ನೀಡಿದರು. ಬಂಟರ ಸಂಘ ಮುಂಬಯಿ ಎಸ್. ಎಂ. ಶೆಟ್ಟಿ ಕಾಲೇಜು ಪೊವಾಯಿ ಇದರ ಪ್ರಾಂಶುಪಾಲರಾದ ಡಾ. ಶ್ರೀಧರ ಶೆಟ್ಟಿ ಇವರು ಶಿಕ್ಷಣದ ಮಹತ್ವ ದ ಬಗ್ಗೆ ಮಾತನಾಡಿದರು.
ಮಹಿಳಾ ವಿಭಾಗದ ಕಾರ್ಯಕ್ರಮ, ಫ್ಯಾಷನ್ ಶೋ, ಸಮಿತಿಯ ಸದಸ್ಯರಿಂದ ಬಾಬಾ ಪ್ರಸಾದ ಅರಸ ನಿರ್ದೇಶನದ, ವಿಶ್ವನಾಥ ಶೆಟ್ಟಿಯವರ ತುಳು ಸ್ಕಿಟ್ "ಒಂಜಿ ಗಳಿಗೆ", ನೃತ್ಯ ಮತ್ತು ಮಹಿಷ ಮರ್ಧಿನಿ ಯಕ್ಷಗಾನ ನೃತ್ಯ ರೂಪಕ, ನಾದಸ್ವರಂ ಮತ್ತು ಸೆಕ್ಸೋಫೋನ್ ಕಲಾವಿದ ಜರಿಮರಿ ದಿನೇಶ್ ಕೋಟ್ಯಾನ್ ಪ್ರಾಯೋಜಕತ್ವದಲ್ಲಿ ನವೀನ್ ಅಂಚನ್ ಇವರಿಂದ ಪಿಲಿ ನಲಿಕೆ ನಡೆಯಿತು. ಮೆಕ್ ಕೋಯ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಲಕ್ಕೀ ಡಿಪ್ ನಡೆಸಲಾಯಿತು.
ಕಾರ್ಯಕ್ರಮದ ಯಶಸ್ಸಿಗೆ ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಯ ಕೋಶಾಧಿಕಾರಿ ಜಗನ್ನಾಥ ಮೆಂಡನ್, ಸಂಚಾಲಕ ಬಿ ದಿನೇಶ್ ಕುಲಾಲ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷ ಭಾರತಿ ಎಸ್. ವಾಗ್ಲೆ ಮತ್ತು ಎಲ್ಲಾ ಸದಸ್ಯರುಗಳು, ಯುವ ವಿಭಾಗದ ಪರವಾಗಿ ಸಂಚಾಲಕಿ ಪ್ರಣಿತಾ ಶೆಟ್ಟಿ, ಕಾರ್ಯದರ್ಶಿ ಸೌಮ್ಯ ಜೆ ಮೆಂಡನ್, ಉಪಕಾರ್ಯಾಧ್ಯಕ್ಷರುಗಳಾದ ದಿವ್ಯ ಪೂಜಾರಿ, ಸುದೀಪ್ ಪೂಜಾರಿ, ನವೀನ್ ಸಾಲ್ಯಾನ್, ಜೊತೆ ಕಾರ್ಯದರ್ಶಿಗಳಾದ ದಿಶಾ ಕರ್ಕೇರ, ಯೋಗೇಶ್ವರಿ ಗೌಡ, ಸಮಿತಿಯ ಸಮನ್ವಯಕರುಗಳಾದ ಡಾ. ಶಶಿನ್ ಆಚಾರ್ಯ, ಪವನ್ ರಾವ್, ದೀಕ್ಷಿತ್ ಪೂಜಾರಿ, ವಿಕ್ರಮ್ ಪಾಟ್ಕರ್, ಲಾಸ್ಯಾ ಕುಲಾಲ್, ಶ್ವೇತಾ ಪೂಜಾರಿ, ರುಥ್ವಿ ಕುಂದರ್, ರಥನ್ ಪೂಜಾರಿ, ಹರೀಶ್ ಕುಂದರ್, ರಾಜೇಶ್ ಮೂಲ್ಯ, ವಿನಿತ್ ಪೂಜಾರಿ, ಪ್ರಥಮ್ ಪೂಜಾರಿ, ರೋನಿತ್ ಪೂಜಾರಿ, ಶಿವಾನಿ ಪ್ರಭು, ನಿಧಿ ನಾಯ್ಕ್, ಸಾಕ್ಷಿ ಶೆಟ್ಟಿ, ವೈಷ್ಣವಿ ಸಾಫಲ್ಯ, ಪೂರ್ಣಿಮಾ ಸಾಲ್ವನ್ಕರ್, ಶ್ರುತಿ ನಾಯಕ್, ಡಾ. ನವಿತ ಸುವರ್ಣ, ನಿಧಿ ಶೆಟ್ಟಿ, ಐಶ್ವರ್ಯ ಪೂಜಾರಿ ಸದಸ್ಯರುಗಳಾದ ಸೌಮ್ಯ ಪ್ರಭು, ಲಹರಿ ಸಾಲ್ಯಾನ್, ಸ್ಮ್ರುತಿ ವಾಗ್ಲೆ, ಅಕ್ಷಯ ನಾಯಕ್, ಪ್ರಿಯಾಂಕ ಮರಕಳ, ದರ್ಶನ್ ಸಾಲ್ಯಾನ್, ನಿಶಾ ಸುವರ್ಣ, ಆದಿತ್ಯ ಸುವರ್ಣ, ಮಿತೇಶ್ ಸಾಲ್ಯಾನ್, ಆಶ್ಮಿಕಾ ಪೂಜಾರಿ, ಪ್ರಜ್ವಲ್ ನಾಯಕ್, ಸಾಕ್ಷಿ ಆಚಾರ್ಯ, ಸುಪಾಶ್ ಕುಲಾಲ್, ರಕ್ಷಿತಾ ಸುವರ್ಣ, ಪ್ರಾಜ್ಞ ಕುಂದರ್, ಆದಿತ್ಯ ಅಂಚನ್, ಅಶಿಶ್ ಪೂಜಾರಿ ಸಮಿತಿಯ ಸದಸ್ಯರಾದ ಸತೀಶ್ ಭಟ್, ಕುಮರೇಶ್ ಆಚಾರ್ಯ, ಮಹಾಬಲ ಪೂಜಾರಿ, ಸುಂದರ ಪೂಜಾರಿ, ದಿನೇಶ್ ಪೂಜಾರಿ, ಸನತ್ ಪೂಜಾರಿ, ಸಿದ್ದರಾಮ ಗೌಡ, ಸುರೇಂದ್ರ ಆಚಾರ್ಯ, ಚಂದ್ರಶೇಖರ ಶೆಟ್ಟಿ, ನಿತ್ಯಾನಂದ ಕೋಟ್ಯಾನ್, ಶೈಲೇಶ್ ಪೂಜಾರಿ, ದಿನೇಶ್ ಕುಂಬ್ಳೆ, ಗೋಪಾಲ್ ಎಂ. ಪೂಜಾರಿ, ಹರೀಶ್ ಶೆಟ್ಟಿ ಪೆರಾರ, ಸುರೇಂದ್ರ ಶೆಟ್ಟಿ, ರಾಮ ಪೂಜಾರಿ, ಜಯ ಪೂಜಾರಿ, ಸೋಮನಾಥ್ ವಾಗ್ಲೆ, ಹರೀಶ್ ಪೂಜಾರಿ ಕಾರ್ನಾಡ್, ಸದಾನಂದ ಕೋಟ್ಯಾನ್, ದಿನೇಶ್ ಕಾಮತ್, ಸದಾನಂದ ರಾವ್, ಸೂರಪ್ಪ ಕುಂದರ್, ಮಂಜು ಗೌಡ, ಉಮೇಶ್ ಸಿ. ಪೂಜಾರಿ, ಶಶಿಧರ್ ಹೆಗ್ಡೆ, ಮೃತ್ಯುಂಜಯ ಪಲ್ಲಿ, ರವಿ ಮೂಲ್ಯ, ಲಕ್ಷಣ ರಾವ್, ಈಶ್ವರ ಕುಲಾಲ್, ಮಹಿಳಾ ವಿಭಾಗದ ಸಂಚಾಲಕಿ ಮೋಹಿನಿ ಜೆ. ಶೆಟ್ಟಿ, ಉಪ ಕಾರ್ಯಾಧ್ಯಕ್ಷರುಗಳಾದ ಶೀಲಾ ಎಂ. ಪೂಜಾರಿ, ರತ್ನ ಡಿ. ಕುಲಾಲ್, ಲಲಿತ ಎಸ್ ಗೌಡ, ಕಾರ್ಯದರ್ಶಿ ಶ್ರೀಮತಿ ಕೆ ಆಚಾರ್ಯ, ಜೊತೆ ಕಾರ್ಯದರ್ಶಿಗಳಾದ ಗೀತಾ ಜೆ ಮೆಂಡನ್, ಕೃಪಾ ಜೆ. ಮೂಲ್ಯ ಹಾಗೂ ಇತರ ಎಲ್ಲಾ ಸದಸ್ಯರುಗಳು ಸಹಕರಿಸಿದರು. ದಿವ್ಯ ಪೂಜಾರಿ ವಂದನಾರ್ಪಣೆಮಾಡಿದರು.
----------
ನಾವು ನಮ್ಮ ಸಂಸ್ಕೃತಿಯನ್ನು ಪ್ರೀತಿಸೋಣ :ರಶ್ಮಿ ಎಸ್ ಪೂಜಾರಿ
ಯುವ ವಿಭಾಗದ ಕಾರ್ಯಧ್ಯಕ್ಷೆ ರಶ್ಮಿ ಎಸ್. ಪೂಜಾರಿಯವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಇಂದಿನ ಯುವ ಜನಾಂಗವು ಆಧುನೀಕರಣದ ಬದುಕು ರೂಪಿಸುವಲ್ಲಿ ಸಮಯದ ಅಭಾವದ ಮಧ್ಯೆಯೂ ಇಂದಿಲ್ಲಿ ವಿವಿಧ ಸಂಘಟನೆಗಳ ಯುವ ವಿಭಾಗದ ಪ್ರಮುಖರು ಒಂದೇ ವೇದಿಕೆಯಲ್ಲಿ ಸೇರಿದ್ದು ನಿಜಕ್ಕೂ ಅಭಿನಂದನೀಯ. ಈ ಎಲ್ಲಾ ಸಂಘಟನೆಗಳು ಯುವ ಜನಾಂಗವನ್ನು ಒಗ್ಗೂಡಿಸಿ ನಮ್ಮ ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮೆಚ್ಚಬೇಕಾಗಿದೆ. ಈ ರೀತಿ ನಾವು ನಮ್ಮ ಸಂಸ್ಕೃತಿಯನ್ನು ಪ್ರೀತಿಸೋಣ. ಮಾತೆ ವರಮಹಾಲಕ್ಷ್ಮಿಯು ನಮ್ಮೆಲ್ಲರನ್ನೂ ಆಶೀರ್ವದಿಸಲಿ ಎಂದರು.
----------------
ಮಕ್ಕಳ ಕಾರ್ಯಕ್ರಮ ಪ್ರೋತ್ಸಾಹದಾಯಕ : ನ್ಯಾ| ಜಗನ್ನಾಥ್ ಎನ್. ಶೆಟ್ಟಿ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನ್ಯಾ. ಜಗನ್ನಾಥ್ ಎನ್ ಶೆಟ್ಟಿ ಯವರು ಮಾತನಾಡುತ್ತಾ ಜಾತಿ ಬೇದ ಮರೆತು ಎಲ್ಲಾ ಸಮಾಜ ಬಾಂದವರ ಯುವ ಜನಾಂಗವನ್ನು ಒಂದೆಡೆ ಸೇರಿಸಿ ಮಾಡುತ್ತಿರುವ ಈ ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸುತ್ತಿರುವೆನು. ಮಕ್ಕಳ ಕಾರ್ಯಕ್ರವನ್ನು ದಿನಪೂರ್ತಿ ನಡೆಸುವ ನಮ್ಮ ಕನಸು ಇಂದು ನೆನಸಾಗುತ್ತಿದೆ. ಮಕ್ಕಳನ್ನು ಒಂದೆಡೆ ಸೇರಿಸಿ ದಿನಪೂರ್ತಿ ಮಾಡುವ ಕಾರ್ಯಕ್ರಮ ಸುಲಭ ಕೆಲಸವಲ್ಲ. ಬಾಲ್ಯದಿಂದಲೇ ಈ ಮಕ್ಕಳು ನಮ್ಮ ಸಮಿತಿಯ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದು ಇಂದು ಅವರೇ ಬಹಳ ಧೈರ್ಯದಿಂದ ಕಾರ್ಯಕ್ರಮವನ್ನು ನಡೆಸುತ್ತಿದ್ದು ಎಲ್ಲರೂ ಸಹಕರಿಸಿ ಪ್ರೋತ್ಸಾಹಿಸಬೇಕು ಎಂದರು.






Post a Comment