".

Header Ads

ಚೆಂಡು ಕೈಯಿಂದ ಜಾರುತ್ತಿತ್ತು : ಗಬ್ಬರ್


ಇಬ್ಬನಿಯಿಂದಾಗಿ  ಚೆಂಡು ಕೈಯಿಂದ ಜಾರುತ್ತಿತ್ತು.  ಈ ಸನ್ನಿವೇಶದಲ್ಲಿ ಬ್ಯಾಟ್‌ ಫುಟ್‌ ಶಾಟ್ಸ್‌ ಅನ್ನು ಸುಲಭವಾಗಿ ಕಾರ್ಯಗತಗೊಳಿಸಬಹುದಿತ್ತು. ಚೆನ್ನಾಗಿ ಬ್ಯಾಟ್‌  ನ ಕೆಳಗಡೆ ಬರುತ್ತಿದ್ದ ಕಾರಣ ಮೊದಲ 10 ಓವರ್‌ಗಳಲ್ಲಿಯೇ ಎದುರಾಳಿ ಬೌಲರ್‌ಗಳನ್ನು ದಂಡಿಸುವುದು ನಮ್ಮ ಯೋಜನೆಯಾಗಿತ್ತು ಎಂಬುದಾಗಿ ಪ್ರವಾಸಿ ದ. ಆಫ್ರಿಕಾ ವಿರುದ್ಧ ಭಾರತ ತಂಡವು ದ್ವಿತೀಯ ಏಕದಿನ ಗೆದ್ದ ಬಳಿಕ ತಮ್ಮ ಗೇಮ್ ಪ್ಲಾನ್ ಬಗ್ಗೆ ಗಬ್ಬರ್ ಖ್ಯಾತಿಯ ನಾಯಕ ಶಿಖರ್‌ ಧವನ್ ತಿಳಿಸಿದರು.

 ಶ್ರೇಯಸ್‌ ಅಯ್ಯರ್‌ (ಅಜೇಯ 113) ಅವರ ಆಕರ್ಷಕ ಶತಕ ಹಾಗೂ ಇಶಾನ್ ಕಿಶನ್ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ನಿನ್ನೆ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ 7 ವಿಕೆಟ್ ಗಳ ಅಂತರದ ಜಯ ದಾಖಲಿಸಿತ್ತು. ಹಾಗೆಯೇ ಮೂರು ಪಂದ್ಯಗಳ ಸರಣಿಯಲ್ಲಿ 1 -1  ರಿಂದ ಸಮಬಲ ಸಾಧಿಸಿತ್ತು.

 

ಶ್ರೇಯಸ್‌ ಅಯ್ಯರ್‌ 

ಶ್ರೇಯಸ್‌ ಅಯ್ಯರ್‌ (111 ಎಸೆತ 15 ಫೋರ್‌) ಅಜೇಯ 113 ರನ್‌ ಹಾಗೂ ಇಶಾನ್ ಕಿಶನ್ (93 ರನ್, 84 ಎಸೆತ, 4 ಫೋರ್‌ ಮತ್ತು 7 ಸಿಕ್ಸರ್‌) ಇಬ್ಬರ ಅಬ್ಬರದ ನಡುವೆ ಪುಟಿದೆದ್ದ ಟೀಮ್ ಇಂಡಿಯಾ  279 ರನ್‌ಗಳ ಗುರಿಯನ್ನು 25 ಎಸೆತಗಳು ಬಾಕಿ ಇರುವಂತೆಯೇ ತಲುಪಿತು. ಇದಕ್ಕೂ ಮೊದಲು ಶುಭ್ ಮನ್ ಗಿಲ್ (28  ರನ್), ಕಳೆದ ಪಂದ್ಯದ ಹೀರೋ ಸಂಜು ಸ್ಯಾಮ್ಸನ್ (ಅಜೇಯ 30) ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು.

ಇಶಾನ್ ಕಿಶನ್ 

 ಇದೇ ವೇಳೆ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಶ್ರೇಯಸ್‌ ಅಯ್ಯರ್‌ ಹಾಗೂ ಇಶಾನ್‌ ಕಿಶನ್ ರನ್ನು ಧವನ್ ಹೊಗಳಿದರು.  ಅವರ ಬಗ್ಗೆ ನಾನು ಮಾತನಾಡಲೇಬೇಕು. ಈ ಇಬ್ಬರ ಜೊತೆಯಾಟವನ್ನು ನೋಡುವುದೇ ಒಂದು ಆನಂದವಾಗಿತ್ತು"  ಎಂದು ಹೇಳಿದರು.

ಶಹಬಾಝ್ ಅಹ್ಮದ್‌ 

ಇದೇ ವೇಳೆ 10 ಓವರ್‌ಗಳಿಗೆ 54 ರನ್ ನೀಡಿ ಒಂದು ವಿಕೆಟ್‌ ಕಬಳಿಸಿದ ಪದಾರ್ಪಣ ಆಟಗಾರ ಶಹಬಾಝ್ ಅಹ್ಮದ್‌ ನಾಯಕ ಧವನ್‌ ಮುಕ್ತಕಂಠದಿಂದ ಗುಣಗಾನ ಮಾಡಿದರು. "ಬೌಲರ್‌ಗಳಿಂದ ನನಗೆ ತುಂಬಾ ಖುಷಿಯಾಗುತ್ತಿದೆ, ಅದರಲ್ಲೂ ವಿಶೇಷವಾಗಿ ಶಹಬಾಝ್ ಅಹ್ಮದ್‌! ಅವರು ಮೊದಲು 10 ಓವರ್‌ಗಳಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ್ದರು. ಆ ಮೂಲಕ ನಮಗೆ ಮೇಲುಗೈ ಸಾಧಿಸಲು ನೆರವಾಗಿದ್ದರು," ಎಂದು ಶ್ಲಾಘಿಸಿದರು.

ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಶ್ರೇಯಸ್‌ ಅಯ್ಯರ್‌ " ನಾನು ಬ್ಯಾಟಿಂಗ್‌ಗೆ ತೆರಳಿದ ಬಳಿಕ ಇಶಾನ್‌ ಕಿಶನ್‌ ಬಳಿ ಮಾತನಾಡಿದೆ. ಬೌಲರ್‌ಗಳನ್ನು ಸಮರ್ಪಕವಾಗಿ ಎದುರಿಡಸುವುದು ತಮ್ಮ ಮೈಂಡ್‌ ಸೆಟ್  ಅವರು ನನಗೆ ಹೇಳಿದರು. ಹಾಗಾಗಿ ನಾವಿಬ್ಬರೂ ಎಸೆತಕ್ಕೆ ತಕ್ಕಂತೆ ಆಡಬೇಕೇಂದು ನಿರ್ಧರಿಸಿದೆವು," ಎಂದು ಹೇಳಿದರು.

ಸಂಕ್ಷಿಪ್ತ ಸ್ಕೋರ್‌

ದಕ್ಷಿಣ ಆಫ್ರಿಕಾ: 278 /7 ರನ್‌ (50 ಓವರ್)

(ರೀಝಾ ಹೆಂಡ್ರಿಕ್ಸ್‌ 74, ಏಡೆನ್‌ ಮಾಕ್ರಮ್ 79, ಡೇವಿಡ್‌ ಮಿಲ್ಲರ್‌ 35*; ಮೊಹಮ್ಮದ್‌ ಸಿರಾಜ್‌ 38/3).

ಭಾರತ:  282 /3  (ಇಶಾನ್‌ ಕಿಶನ್‌ 93, ಶ್ರೇಯಸ್‌ ಅಯ್ಯರ್‌ 113*, ವೇಯ್ನ್ ಪಾರ್ನೆಲ್ 44/1).

Powered by Blogger.