".

Header Ads

ಕಾರ್ಕಳ ಸುದ್ದಿ: ಕಾರ್ಕಳದ ನಿಟ್ಟೆಯ ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷನ ಕೊಲೆ ಯತ್ನ.

ನಿಟ್ಟೆಯ ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷನ ಕೊಲೆ ಯತ್ನ, ಮಸೀದಿಯ ಅಧ್ಯಕ್ಷನಾಗಿದಕ್ಕೆ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ವರದಿಯಾಗಿದೆ, ನಿಟ್ಟೆ ಗ್ರಾಮದ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ
ಅಹಮದ್‌ ಹುಸೈನ್‌ ಅವರು ಈದ್‌ ಮಿಲಾದ್‌ ಕಾರ್ಯಕ್ರಮದ ಪೂರ್ವಾಬಾವಿಯಾಗಿ ನಡೆಸುವ ಮಿಲಾದ್‌ ಪೆಸ್ಟ್‌ ಕಾರ್ಯಕ್ರಮವನ್ನು ಮಸೀದಿಯಲ್ಲಿ ಪ್ರಾರಂಭ ಗೊಳಿಸಿದ್ದರು,ಈ ವೇಳೆ  ಕಾರಿನಲ್ಲಿ ಬಂದ ಜಮಾತಿನ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಮಹಮ್ಮದ್‌ ಹಾಳೆಕಟ್ಟೆ ಎಂಬಾತನು ಅಹಮದ್‌ ಹುಸೈನ್‌ ಅಹಮದ್‌ ಹುಸೈನ್‌ ರವರನ್ನು ಹಾಗೂ ಕಾರ್ಯದರ್ಶಿಯಾದ ಅಬ್ದುಲ್‌ ಜಬ್ಬಾರ್‌ ನನ್ನು ತಡೆದು ನಿಲ್ಲಿಸಿ ಹಲ್ಲೆ ಮಾಡಿ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಈ ಬಗ್ಗೆ ಅಹಮದ್‌ ಹುಸೈನ್‌ ಅವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
.

Powered by Blogger.