".

Header Ads

ತೀಯಾ ಸಮಾಜ ಯು.ಎ.ಇ. : ವಾರ್ಷಿಕ ಶ್ರೀ ದುರ್ಗಾ ಪೂಜೆ


ದುಬಾಯಿ : ತೀಯಾ ಸಮಾಜ ಯು.ಎ.ಇ., ಇದರ 18 ನೆಯ ವಾರ್ಷಿಕ ಶ್ರೀ ದುರ್ಗಾ ಪೂಜೆಯು ದುಬಾಯಿಯ ಪೋರ್ಚೂನ್ ಪ್ಲಾಜಾ ಹೋಟೀಲಿನ ಬ್ಯಾಂಕ್ವಿಟ್ ಹಾಲ್ ನಲ್ಲಿ ನೆರವೇರಿತು. 

ಪೂಜಾ ವಿಧಿಯನ್ನು ಪುರೋಹಿತರಾದ ರಘು ಭಟ್ ನೆರವೇರಿಸಿದ್ದು ತೀಯಾ ಸಮಾಜದ ಅಧ್ಯಕ್ಷರಾದ ರಾಜೇಶ್ ಪಳ್ಳಿಕೆರೆ ಮತ್ತು ಗೀತಾ ರಾಜೇಶ್ ದಂಪತಿಯವರು ಪೂಜೆಯಲ್ಲಿ ಪಾಲ್ಗೊಂಡಿದ್ದರು.


ರಾಜೇಶ್ವರಿ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮವು ನಡೆಯಿತು. ಪ್ರಧಾನ ಕಾರ್ಯದರ್ಶಿ ಜಸ್ಮಿತಾ ವಿವೇಕ್ ಅವರ ಮಾರ್ಗದರ್ಶನದಲ್ಲಿ ಮಹಿಳೆಯರಿಂದ ಕುಣಿತಾ ಭಜನೆಯು ನಡೆಯುತು. ನಂತರ ಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಿತು.  ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಟ್ಟದ ಪುರೋಹಿತರೂ, ಜ್ಯೋತಿಷ್ಯರೂ ಆದ ಮುಂಬಯಿಯ ಡಾ. ಎಂ. ಜೆ. ಪ್ರವೀಣ್ ಭಟ್, ಸ್ಥಳೀಯ ಸಮಾಜ ಸೇವಕ ಸತೀಶ್ ಪೂಜಾರಿ, ಸುವರ್ಣ ಸತೀಶ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.


ರಾಜೇಶ್ ಕುತಾರ್ ಅವರು ಪೂಜಾ ಮಂಟಪವನ್ನು ಅಲಂಕರಿಸಿದ್ದು, ಮಕ್ಕಳು ದುರ್ಗಾ ಮಾತೆಯ ಚಿತ್ರ ಬಿಡಿಸಿ ಬಣ್ಣ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದು ಅವರಿಗೆ ಬಹುಮಾನ ವಿತರಿಸಲಾಯಿತು. ಈ ಕಾರ್ಯದಲ್ಲಿ ಶ್ರೀನಿವಾಸ ಕೋಟ್ಯಾನ್ ಸಹಕರಿಸಿದರು.

ಹಿರಿಯ ಸದಸ್ಯರಾದ ಧರ್ಮೇಂದ್ರ ಬಂಗೇರ ಕಾರ್ಯಕ್ರಮ ನಿರ್ವಹಿಸಿದ್ದು ರಾಜೇಶ್ ಪಳ್ಳಿಕೆರೆ ವಂದಿಸಿದರು.

Powered by Blogger.