".

Header Ads

ದೊಡ್ಡಣ ಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರಕ್ಕೆ ಪ್ರಮೋದ್ ಮುತಾಲಿಕ್ ಭೇಟಿ

ಉಡುಪಿ. ದೊಡ್ಡಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರಕ್ಕೆ ಹಿಂದುತ್ವವಾದಿ ಶ್ರೀರಾಮಸೇನೆಯ ರಾಷ್ಟ್ರೀಯ ಸಂಸ್ಥಾಪಕ ಶ್ರೀ ಪ್ರಮೋದ್ ಮುತಾಲಿಕ್ ಭೇಟಿ ನೀಡಿ ದುರ್ಗಾ ಆದಿಶಕ್ತಿ ದೇವಿಗೆ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು.

ಆಧ್ಯಾತ್ಮಿಕ ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ರಮಾನಂದ ಗುರೂಜೀಯವರ ಕಾರ್ಯ ಸಾಧನೆಯನ್ನು ಶ್ಲಾಘಿಸಿ ಸಾಮಾಜಿಕವಾಗಿ ಜನರಲ್ಲಿ ಮಾತೃಭೂಮಿಯ ಬಗ್ಗೆ ಪ್ರೀತಿ ಭಕ್ತಿ ಭಾವವನ್ನು ತುಂಬುವಲ್ಲಿ ಗುರುಗಳ  ಪಾತ್ರ ಮಹತ್ವದ್ದು ಎಂದರು.

 ಕ್ಷೇತ್ರದ ಜೀರ್ಣೋದ್ಧಾರ ಕಾರ್ಯವನ್ನು ವೀಕ್ಷಿಸಿ ವಿಶೇಷ ಸೇವೆಯಾದ ನೃತ್ಯ ಸೇವೆಯಲ್ಲೂ ಪಾಲ್ಗೊಂಡು ಅನ್ನ ಸಂತರ್ಪಣೆಯನ್ನು ಸ್ವೀಕರಿಸಿ  ಕ್ಷೇತ್ರದ ಶಕ್ತಿ ಚೈತನ್ಯದ ಬಗ್ಗೆ ತಮಗಾದ ಅನುಭವವನ್ನು ನೆರೆದ ಭಕ್ತರಲ್ಲಿ ವಿವರಿಸಿದರು.

 ತುಳು ಶಿವಳ್ಳಿ ಬ್ರಾಹ್ಮಣ ಒಕ್ಕೂಟದ ವತಿಯಿಂದ ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ಹಮ್ಮಿಕೊಂಡ ಉಡುಪಿ ಶ್ರೀ ಮಧ್ವಾಚಾರ್ಯರ ಸಂಕೀರ್ತನ ಪ್ರಚಾರ ಮಾಲಿಕೆಯಾದ ಮಧ್ವಯಾನ....ಗಾನ  ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಕ್ಷೇತ್ರದ ವತಿಯಿಂದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ದುರ್ಗಾ ಆದಿಶಕ್ತಿ ದೇವಿಯ ಅನುಗ್ರಹ ಪ್ರಸಾದವನ್ನು ನೀಡಿ ಶಾಲುವದಿಸಿ ಗೌರವಿಸಿ ಸನ್ಮಾನಿಸಿದರು.

ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶ್ರೀ ರಾಮಸೇನೆ ಮಂಗಳೂರು ಮತ್ತು ಉಡುಪಿ ವಿಭಾಗ ಅಧ್ಯಕ್ಷರು. ಮೋಹನ್ ಭಟ್,  ಜಿಲ್ಲಾಧ್ಯಕ್ಷರು ಜಯರಾಮ್ ಅಂಬೇಕಲ್ಲು, ಪ್ರ. ಕಾರ್ಯದರ್ಶಿ. ಶರತ್. ಕೆ, ರಾಜ್ಯ ಪ್ರ. ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್, ಸುಧರ್ಶನ್ ಹಾಗೂ ಸುದೀಪ್ ನಿಟ್ಟೂರ್ ಮುಂತಾದ ಜಿಲ್ಲಾ ಮುಖಂಡರು ಹಾಗೂ ಪದಾಧಿಕಾರಿಗಳು ಹಾಗುಾ ಕ್ಷೇತ್ರದ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿ ಆಂಗ್ಲ ಮಾಧ್ಯಮ ಶಾಲೆಯ ಶ್ರೀಮತಿ ಉಷಾ ರಮಾನಂದ, ಕ್ಷೇತ್ರದ ಭಕ್ತರು ಉಪಸ್ಥಿತರಿದ್ದರು.

- ದಿನೇಶ್ ಕುಲಾಲ್

Powered by Blogger.