".

Header Ads

ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ಜಿಯೋ ಲ್ಯಾಪ್ ಟಾಪ್

ಲ್ಯಾಪ್‌ಟಾಪ್ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಕಾತುರವಾಗಿರುವ ಜಿಯೋವಿನ ಮೊಟ್ಟ ಮೊದಲ ಲ್ಯಾಪ್‌ಟಾಪ್ 'ಜಿಯೋಬುಕ್' ದೇಶದಲ್ಲಿ ಮಾರಾಟಕ್ಕೆ ಬಂದಿದೆ. ತನ್ನದೇ ಒಡೆತನದ ಈ ಕಾಮರ್ಸ್ ವೆಬ್ಸೈಟ್ ರಿಲಯನ್ಸ್ ಡಿಜಿಟಲ್‌ ನಲ್ಲಿ ಜಿಯೋಬುಕ್ ಲ್ಯಾಪ್‌ಟಾಪನ್ನು ಮಾರಾಟಕ್ಕಿಡಲಾಗಿದ್ದು, 15,000 ರೂ. ಬೆಲೆಯಲ್ಲಿ ಇದೀಗ ಲಭ್ಯವಿದೆ. 

ರಿಲಯನ್ಸ್ ಡಿಜಿಟಲ್‌ನ ವೆಬ್‌ಸೈಟ್ ಮೂಲಕ ಭಾರತೀಯ ಗ್ರಾಹಕರಿಗೆ ಲಭ್ಯವಾಗುವಂತೆ ಜಿಯೋಬುಕ್ ಸಾಧನವನ್ನು ಮಾರಾಟಕ್ಕಿಡಲಾಗಿದ್ದು, ಗ್ರಾಹಕರು ಇದೀಗ 15,799 ರೂ. ಗಳ ಬೆಲೆಯಲ್ಲಿ ಖರೀದಿಸಬಹುದಾಗಿದೆ.

 19,500 ರೂ. ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದ್ದ ಈ ಲ್ಯಾಪ್‌ಟಾಪ್ ಅನ್ನು ಗ್ರಾಹಕರು ಇದೀಗ 15,799 ರೂ. ಗಳ ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಜಿಯೋ ಲ್ಯಾಪ್ ಟಾಪ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ವಿದ್ಯಾರ್ಥಿಗಳಿಗೆ ಹೆಚ್ಚು ಉಪಯುಕ್ತ ಎನಿಸುವ ಬಜೆಟ್ ಪ್ರೈಸ್‌ನ ಲ್ಯಾಪ್‌ಟಾಪ್‌ ಇದಾಗಿದ್ದು, ಜಾಗತಿಕ ಟೆಕ್ ದೈತ್ಯ ಕಂಪೆನಿಗಳಾದ ಕ್ವಾಲ್ಕಾಮ್  ಮತ್ತು ಮೈಕ್ರೋಸಾಫ್ಟ್ ಸಹಭಾಗಿತ್ವದಲ್ಲಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಸಂಸ್ಥೆಯು ಈ ಜಿಯೋ ಲ್ಯಾಪ್‌ಟಾಪ್‌ ಅನ್ನು ಅಭಿವೃದ್ಧಿಪಡಿಸಿದೆ. 

11.6 ಇಂಚಿನ HD ಡಿಸ್‌ಪ್ಲೇಯನ್ನು ಹೊಂದಿರುವ ಈ ಲ್ಯಾಪ್ ಟಾಪ್  Qualcomm Snapdragon 665 SoC ಪ್ರೊಸೆಸರ್ ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಜೊತೆಗೆ ಅಡ್ರಿನೊ 610 GPU ಸಪೋರ್ಟ್ ಪಡೆದಿದೆ. ತನ್ನದೇ ಆದ JioOS ನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಲ್ಯಾಪ್ ಟಾಪ್ 2GB RAM ಮತ್ತು 32GB eMMC ಸಂಗ್ರಹಣೆ ಸಾಮರ್ಥ್ಯ ಹೊಂದಿದ್ದು, ಮೈಕ್ರೋ SD ಕಾರ್ಡ್ ಮೂಲಕ 128GB ವರೆಗೆ ಮೆಮೊರಿಯನ್ನು ಹೆಚ್ಚಿಸಿಕೊಳ್ಳಬಹುದು. ಅಲ್ಲದೆ  ಜಿಯೋಬುಕ್ ಲ್ಯಾಪ್‌ಟಾಪ್‌ 4G ಸಿಮ್ ಕಾರ್ಡ್‌ ಸಪೋರ್ಟ್ ಹೊಂದಿದೆ. ಮತ್ತು ಬ್ಲೂಟೂತ್ 5.0, HDMI ಮಿನಿ ಪೋರ್ಟ್ ಮತ್ತು ವೈ-ಫೈ ಸಂಪರ್ಕ ಆಯ್ಕೆಗಳನ್ನು ನೀಡಲಿದೆ.  5,000mAh ಬ್ಯಾಟರಿ ಇರುವ ಲ್ಯಾಪ್ ಟಾಪ್ ಸ್ಪೀರ್ ಸಹಿತ 2 ಮೆಗಾ ಪಿಕ್ಸೆಲ್ ವೆಬ್ ಕ್ಯಾಮೆರಾ ವನ್ನೂ ಹೊಂದಿದೆ.



Powered by Blogger.