ನವಂಬರ್ 20 ರಂದು ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್, ಇದರ ಕರ್ನಾಟಕ ರಾಜ್ಯೋತ್ಸವ ಮತ್ತು 20 ನೇ ವಾರ್ಷಿಕೋತ್ಸವ
ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್, ಇದರ ಕರ್ನಾಟಕ ರಾಜ್ಯೋತ್ಸವ ಮತ್ತು 20 ನೇ ವಾರ್ಷಿಕೋತ್ಸವ ನವಂಬರ್ 20 ರ ರವಿವಾರ ಸಂಜೆ 3.00 ಗಂಟೆಯಿಂದ ಕಲ್ಯಾಣ್ ಪಶ್ಚಿಮದ ಜೋಕರ್ ಪ್ಲಾಜ ಕಾಂಪ್ಲೆಕ್ಸ್ ನ ಗಿರಿಜಾ ಪಯ್ಯಡೆ ಹಾಲ್ ನಲ್ಲಿ ನಡೆಯಲಿದೆ.
ಖ್ಯಾತ ಬರಹಗಾರ ಡಾ. ಕೋಲ್ಚಪ್ಪೆ ಗೋವಿಂದ್ ಭಟ್ ಇವರ ಅಧ್ಯಕ್ಷತೆಯಲ್ಲಿ ಜರಗುವ ಸಭಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ, ಗೌರವ ಅತಿಥಿಗಳಾಗಿ ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಉಷಾ ಕೆ ಶೆಟ್ಟಿ, ಬಂಟರ ಸಂಘದ ಮಹಿಳಾ ವಿಭಾಗದ ಮಾಜಿ ಜೊತೆ ಕಾರ್ಯದರ್ಶಿ ಮನೋರಮಾ ಎನ್ ಬಿ ಶೆಟ್ಟಿ, ಉಪಸ್ಥಿತರಿರುವರು.
2022 ನೇ ಕಲ್ಯಾಣ ಕಸ್ತೂರಿ ಪ್ರಶಸ್ತಿಯನ್ನು ಖ್ಯಾತ ಹಿರಿಯ ಬರಹಗಾರ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಡಾ ಸುನಿತಾ ಎಂ ಶೆಟ್ಟಿ ಅವರಿಗೆ ಪ್ರದಾನಿಸಲಾಗುವುದು.
ಈ ಸಂದರ್ಭದಲ್ಲಿ ಕನ್ನಡ ಸಂಘ ಮುಂಬಯಿಯ ಅಧ್ಯಕ್ಷ ಜಿ ಎಸ್ ನಾಯಕ್, ಹಾಗೂ ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್ ನ ಮಾಜಿ ಅಧ್ಯಕ್ಷ ಸುಬ್ಬಯ್ಯ ಶೆಟ್ಟಿ ಯವರನ್ನು ಸನ್ಮಾನಿಸಲಾಗುವುದು.
ಕಲ್ಯಾಣ ಕಸ್ತೂರಿ 2022 ಸ್ಮರಣಿಕೆ ಹಾಗೂ ಕುಮುದಾ ಡಿ ಶೆಟ್ಟಿ ಯವರ ಪುಸ್ತಕ ಬಿಡುಗಡೆ ಗೊಳಿಸಲಾಗುವುದು.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಕನ್ನಡಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಅಧ್ಯಕ್ಷೆ ಜ್ಯೋತಿ ಪ್ರಕಶ್ ಹೆಗ್ಡೆ ಕುಂಠಿನಿ, ಗೌರವ ಅಧ್ಯಕ್ಷ ಮಂಜುನಾಥ್ ಎನ್ ರೈ, ಉಪಾಧ್ಯಕ್ಷ ಉಮಾ ಎಸ್ ಹುನ್ಸಿಮರ್, ಗೌರವ ಪ್ರಧಾನ ಕಾರ್ಯದರ್ಶಿ ಪ್ರಕಶ್ ಹೆಗ್ಡೆ ಕುಂಠಿನಿ ಗೌರವ ಕೋಶಾಧಿಕಾರಿ ಪ್ರಕಾಶ್ ಎಸ್ ನಾಯ್ಕ್, ಜೊತೆ ಕಾರ್ಯದರ್ಶಿ ಕುಮುದಾ ಡಿ ಶೆಟ್ಟಿ, ಜೊತೆ ಕೋಶಾಧಿಕಾರಿ ಚನ್ನವೀರಪ್ಪ ಅಡಿಗಣ್ಣವರ್, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಭಾರತಿ ಬಿ ಶೆಟ್ಟಿ, ಸಾಂಸ್ಕೃತಿಕ ವಿಭಾಗದ ಕಾರ್ಯಧ್ಯಕ್ಷೆ ಸರೋಜ ಎಸ್. ಅಮಥಿ ಹಾಗೂ ಎಲ್ಲ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.




Post a Comment