ಇಂದು ಭಾರತ್ ಕೋ-ಅಪರೇಟಿವ್ ಬ್ಯಾಂಕಿನ ನಿರ್ದೇಶಕರು ಹಾಗೂ ಮಾಜಿ ಕಾರ್ಯಾಧ್ಯಕ್ಷರಾಗಿದ್ದ ದಿ. ವಾಸುದೇವ ಆರ್ ಕೋಟ್ಯಾನ್ ಅವರ ಶ್ರದ್ಧಾಂಜಲಿ ಸಭೆ
ಸದ್ದಿಲ್ಲದೆ ತನ್ನನ್ನು ಸಮಾಜ ಸೇವೆಗೆ ಅರ್ಪಿಸಿಕೊಂಡ ನಿಷ್ಟಾವಂತ ಸಮಾಜ ಸೇವಕ, ಧೀಮಂತ ವ್ಯಕ್ತಿತ್ವದ ವಾಸುದೇವ ಆರ್ ಕೋಟ್ಯಾನ್ ಅವರು ನವೆಂಬರ್ 8 ರಂದು ದೈವಾಧೀನರಾಗಿದ್ದಾರೆ.
ವಿ. ಆರ್. ಕೋಟ್ಯಾನ್ ಅವರು ಬಿಲ್ಲವರ ಅಸೋಸಿಯೇಷನ್ನಿನಲ್ಲಿ ಕೋಶಾಧಿಕಾರಿಕಾರಿಯಾಗಿ, ಉಪಾಧ್ಯಕ್ಷರಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಐದು ವರ್ಷಗಳ ಕಾಲ ಭಾರತ್ ಬ್ಯಾಂಕ್ ನ ಕಾರ್ಯಾಧ್ಯಕ್ಷರಾಗಿ, ಹತ್ತು ವರ್ಷಗಳ ಕಾಲ ಉಪಾಧ್ಯಕ್ಷರಾಗಿ, ಜೀವಿತಾವಧಿಯವರೆಗೂ ನಿರ್ಧೇಶಕರಾಗಿ ಸೇವೆ ಸಲ್ಲಿಸಿ ಭಾರತ್ ಕೋ-ಅಪರೇಟಿವ್ ಬ್ಯಾಂಕ್ ಪ್ರಗತಿಪಥದತ್ತ ಸಾಗಲು ಕಾರಣಕರ್ತರಾದವರು.
ವಾಸುದೇವ ಆರ್ ಕೋಟ್ಯಾನ್ ಅವರು ಎಷ್ಟೋ ಮಂದಿ ಅಸಹಾಯಕರಿಗೆ ಜೀವದಾನ ಮಾಡಿದ ಪುಣ್ಯಾತ್ಮರು. ಅವರು ತಾನು ಹುಟ್ಟಿದ ಊರಾದ ಹೆಜಮಾಡಿಯನ್ನು ಊರವರ ನಿರೀಕ್ಷೆಗೂ ಮೀರಿ ಅಭಿವೃದ್ಧಿಗೊಳಿಸಿದ ಹರಿಕಾರರು.
ನವೆಂಬರ್ 15 ರಂದು ಸಂಜೆ 5 ಗಂಟೆಗೆ ಗೋರೆಗಾಂವ್ ಪೂರ್ವದಲ್ಲಿರುವ ಜಯಲೀಲಾ ಬಂಕ್ವೆಟ್ ಹಾಲ್ ನಲ್ಲಿ ವಾಸುದೇವ ಆರ್ ಕೋಟ್ಯಾನ್ ಅವರ ಶ್ರದ್ಧಾಂಜಲಿ ಸಭೆಯನ್ನು ಏರ್ಪಡಿಸಿದ್ದಾರೆ.
ಈ ಸಭೆಯಲ್ಲಿ ಸಹೃದಯ ಅಭಿಮಾನಿಗಳು, ಹಿತೈಷಿಗಳು ಬಂಧು ಬಳಗದವರೆಲ್ಲರ ಉಪಸ್ಥಿತಿಯನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಮುಂಬಯಿ ಬಿಲ್ಲವರ ಹಿತಚಿಂತಕರು ಮತ್ತು ಜಯ ಸಿ. ಸುವರ್ಣ ಅಭಿಮಾನಿಗಳ ಬಳಗ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Post a Comment