".

Header Ads

ಕಾರ್ಕಳ,ಸುದ್ದಿ: - ನಡೆದಾಡಲು ಸಮಾಜದ ಬೆಂಬಲದ ನಿರೀಕ್ಷೆಯಲ್ಲಿ ಅಣ್ಣ -ತಂಗಿ : ವಿಶು ಶೆಟ್ಟಿ *ನೇತೃತ್ವದಲ್ಲಿ 60,000 ನೆರವು

 


ಬಾಲ್ಯದಿಂದಲೇ ಅಂಗವೈಕಲ್ಯ ಹೊಂದಿ ತೆವಲಿ ಕೊಂಡೇ ಜೀವನ ನಡೆಸುತ್ತಿದ್ದರೂ,ಛಲಬಿಡದೆ ಮನೆಯಲ್ಲಿಯೇ ಕೂತು ಪದವಿ ಶಿಕ್ಷಣ ಮುಗಿಸಿರುವ ನಿಟ್ಟೆಯ ಅಣ್ಣ -ತಂಗಿಇದೀಗ ತಮ್ಮ ಕಾಲ ಮೇಲೆಯೇ ನಿಲ್ಲಲು ಸಮಾಜದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಸಮಾಜ ಸೇವಕ ವಿಶುಶೆಟ್ಟಿ ಅಂಬಲಪಾಡಿಅವರು

60 000 ರೂ. ಮೊತ್ತದನೆರವನ್ನುನೀಡಿ ಪ್ರೋತ್ಸಾಹಿಸಿದ್ದಾರೆ.

 ನಿಟ್ಟೆಯ ನಿವಾಸಿ ಶೇಖರ್ ಸಾಲಿಯಾನ್ ಹಾಗೂ ಜ್ಯೋತಿ ದಂಪತಿಯ ಪುತ್ರ ಪ್ರಜ್ವಲ್ (23) ಹಾಗೂ ಆತನ ತಂಗಿ ಪ್ರತೀಕ್ಷಾ (21) ಬಾಲ್ಯದಿಂದಲೇ ಸೊಂಟದ ಕೆಳಗೆ ಬಲವಿಲ್ಲದೆ ನಡೆದಾಡಲು ಸಾಧ್ಯವಾಗದೆ ತೆವಲಿಕೊಂಡೇ ಬದುಕನ್ನು ಸಾಗಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಈ ನೋವಿನ ನಡುವೆಯೇ ಮನೆಯಲ್ಲಿಯೇ ಓರ್ವ ಶಿಕ್ಷಕಿ ಹಾಗೂ ಓರ್ವ ಶಿಕ್ಷಕರಿಂದ ಪಾಠ ಹೇಳಿಸಿಕೊಂಡು ಪದವಿ ಮುಗಿಸಿದ್ದಾರೆ.

ಎಲ್ಲರಂತೆ ನಾವಾಗಬೇಕು ಎನ್ನುವ ತುಡಿತ ಹೊಂದಿರುವ ಪ್ರಜ್ವಲ್ ಹಾಗೂ ಪ್ರತೀಕ್ಷಾ ವಾರಕ್ಕೆ ನಾಲ್ಕು ಬಾರಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ತೆರಳಿ ಅಲ್ಲಿ ಫಿಸಿಯೋಥೆರಪಿ ಹಾಗೂ ಆಧುನಿಕ ಚಿಕಿತ್ಸೆಯ ಮೂಲಕ ತಮ್ಮ ಕಾಲಿನಲ್ಲಿಯೇ ನಿಲ್ಲುವ, ನಡೆದಾಡುವ ಪ್ರಯತ್ನ ಮಾಡುತ್ತಿದ್ದಾರೆ. ಸುಮಾರು 3 ತಿಂಗಳ ಕಾಲ ನಡೆಯುವ ಈ ಚಿಕಿತ್ಸೆಗೆ ಈ ಬಡ ಕುಟುಂಬ ದಾನಿಗಳ ನೆರವನ್ನು ನಿರೀಕ್ಷಿಸುತ್ತಿದೆ.

 

 3 ತಿಂಗಳ ಚಿಕಿತ್ಸೆ : ಹೇಗಾದರೂ ತಮ್ಮ ಮಕ್ಕಳನ್ನು ನಡೆಯುವಂತೆ ಮಾಡಬೇಕು ಎಂದು ಪಣ ತೊಟ್ಟಿರುವ ತಂದೆ ಶೇಖರ್ ಸಾಲಿಯಾನ್ ಸೂಕ್ತ ಉದ್ಯೋಗವಿಲ್ಲದೆ ಬಳಲಿದ್ದಾರೆ. ಅವರ ದುಡಿಮೆಯ ಗಳಿಕೆ ಎಲ್ಲಾ ಈ ಮಕ್ಕಳ ಸೇವೆಗೆ ಖರ್ಚಾಗಿದೆ. ಕಾಲಿಗೆ ಬೆಲ್ಟ್ಕಟ್ಟಿಕೊಂಡು ವಾಕರ್ ಮೂಲಕ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡಲು ಪ್ರಯತ್ನಿಸುತ್ತಿರುವ ಈ ಅಣ್ಣ -ತಂಗಿಗೆ ಫಿಸಿಯೋಥೆರಪಿ ಹಾಗೂ ಆಧುನಿಕ ಸೌಲಭ್ಯ ನೀಡಿ ನಡೆಯಲು ಕಲಿಸಲಾಗುತ್ತಿದೆ. ಮಗಳು ಪ್ರತೀಕ್ಷಾ ಈ ಪ್ರಯತ್ನದಲ್ಲಿ ಕೊಂಚ ಯಶಸ್ಸು ಕಂಡಿದ್ದಾಳೆ. ಆಸ್ಪತ್ರೆಯ ವೆಚ್ಚವಲ್ಲದೆ ದಿನವೊಂದಕ್ಕೆ ಓಮ್ನಿಗೆ 2,000 ರೂ. ವೆಚ್ಚವಾಗುತ್ತಿದ್ದು, ಮುಂದೇನು ಎಂಬ ಚಿಂತೆಯಲ್ಲಿ ಈ ಬಡ ಕುಟುಂಬ ಮುಳುಗಿದೆ. 

 ಈ ಬಗ್ಗೆ ಮಾಹಿತಿ ಪಡೆದ ಸಮಾಜ ಸೇವಕ ವಿಶು ಶೆಟ್ಟಿ ಅವರು ಸ್ವತ: 10,000ರೂ. ಹಾಗೂ ಅವರ ಕೋರಿಕೆ ಮೇರೆಗೆ ಅಜ್ಜರಕಾಡು ಮಹೇಶ್ ಹೆಗ್ಡೆ ಕಂಪೌAಡ್‌ನ ದಿ.ವಾರಿಜಾ ಹೆಗ್ಡೆ ಅವರ ಮಗಳು ನಯಾ ಶೆಟ್ಟಿ ಅವರು 50,000 ರೂ. ಸೇರಿದಂತೆ ಒಟ್ಟು 60,000 ರೂ. ನೆರವನ್ನು ಕುಟುಂಬಕ್ಕೆ ಹಸ್ತಾಂತರಿಸಿ ಅಣ್ಣ-ತಂಗಿಯ ಬಾಳಿಗೆ ಶಕ್ತಿ ತುಂಬುವ ಕಾರ್ಯ ಮಾಡಿದ್ದಾರೆ.

 ಈ ಕುಟುಂಬಕ್ಕೆ ನೆರವಾಗ ಬಯಸುವ ಮಂದಿ ಮಕ್ಕಳ ತಾಯಿ ಜ್ಯೋತಿ ಅವರ ನಿಟ್ಟೆ ಕೆನರಾ ಬ್ಯಾಂಕ್ ಅಕೌಂಟ್ ನಂ.110003683272, ಐಎಫ್‌ಎಸ್‌ಸಿ ಕೋಡ್ ಸಿಎನ್‌ಆರ್‌ಬಿ0010115 ನೆರವು ನೀಡಬಹುದು ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ.

 

 ಈ ಹಿಂದೆಯೂ ಕೂಡ ಈ *ಮಕ್ಕಳ ವಿದ್ಯಾಭ್ಯಾಸ, ಅನಾರೋಗ್ಯಕ್ಕೆ ಸಂಬಂಧಿಸಿ ಹಲವಾರು ಸಹೃದಯಿಗಳು

 ಸಹಾಯಹಸ್ತ ನೀಡಿರುತ್ತಾರೆ.

ಮುಂದೆಯೂ ಈ ಕುಟುಂಬದ ಮಕ್ಕಳ ಭವಿಷ್ಯಕ್ಕೆ ದಾನಿಗಳು ನೆರವಿನ ಅಗತ್ಯ ಹೆಚ್ಚಿದೆ . ಅಣ್ಣ -ತಂಗಿಗೆ ನಡೆದಾಡುವ ಶಕ್ತಿಯನ್ನು ತುಂಬುವ ಕಾರ್ಯಕ್ಕೆ ಸಮಾಜ ಪ್ರೋತ್ಸಾಹ ನೀಡಬೇಕು. ಸ್ವಾಭಿಮಾನದ ಬಾಳನ್ನು ಬಾಳ ಬಯಸುವ ಇವರಿಗೆ ಸೂಕ್ತ ಉದ್ಯೋಗ ನೀಡಲು ಸರಕಾರ ಮುಂದೆ ಬರಬೇಕು. 

ವಿಶು ಶೆಟ್ಟಿ ಅಂಬಲಪಾಡಿ

 

Powered by Blogger.