".

Header Ads

ಉದ್ಯಮಿ ಕುಂಟಾಡಿ ರಡ್ಸಾಲು ಮನೆ ಜಯರಾಮ್ ಶೆಟ್ಟಿ ನಿಧನ


ಮುಂಬಯಿಯ ಪ್ರತಿಷ್ಠಿತ ಉದ್ಯಮಿ, ಚೆಂಬೂರು ಸೌಮ್ಯ ಟವರ್ ನಿವಾಸಿ  ಜಯರಾಮ್ ಶೆಟ್ಟಿಯವರು(75) ಸ್ವಗೃಹದಲ್ಲಿ ನ. 21 ರಂದು ನಿಧನರಾದರು.

ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಂಟಾಡಿ ರಡ್ಸಾಲು ನಿವಾಸಿ  ಜಯರಾಮ್ ಶೆಟ್ಟಿಯವರು  ಪೆಸ್ಟ್ ಮಾರ್ಟಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಸಂಸ್ಥಾಪಕರು ಹಾಗೂ ಆಡಳಿತ ನಿರ್ದೇಶಕರಾಗಿದ್ದರು. ಹಲವಾರು ಶಾಖೆಗಳನ್ನು ಹೊಂದಿರುವ ಪೆಸ್ಟ್ ಮಾರ್ಟಮ್ ಇಂಡಿಯಾ ಇದರ ಮೂಲಕ ಶೆಟ್ಟಿಯವರು ನೂರಾರು ಮಂದಿಗೆ ಉದ್ಯೋಗದಾತರಾಗಿದ್ದರು. 

ಜನಪ್ರಿಯ ಸಮಾಜ ಸೇವಕ, ಧಾರ್ಮಿಕ ಕ್ಷೇತ್ರಗಳಿಗೆ ಅಪಾರ ಕೊಡುಗೆಯನ್ನು ಸಲ್ಲಿಸಿದ್ದ ಶೆಟ್ಟಿಯವರು ಇನ್ನಿತರ ಸೇವಾ ಕಾರ್ಯದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡು ದೇಣಿಗೆಯನ್ನು ನೀಡಿ ಸಹಕರಿಸುತ್ತಿದ್ದರು. ಪರೋಪಕಾರಿಯಾಗಿದ್ದ  ಜಯರಾಮ್ ಶೆಟ್ಟಿಯವರು ಪತ್ನಿ ವಿನೋದಾ ಜೆ .ಶೆಟ್ಟಿ, ಓರ್ವ ಪುತ್ರ, ಇಬ್ಬರು ಪುತ್ರಿಯರು, ಅಳಿಯಂದಿರು, ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.


ಇವರ ನಿಧನಕ್ಕೆ ಕುಂಟಾಡಿ ಗ್ರಾಮಸ್ಥರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

Powered by Blogger.