ಚಳಿಗಾಲದಿಂದಾಗಿ ಕಡಿಮೆ ಆಗಿರುವ ಬಳಕೆ: ಕುಸಿಯುತ್ತಲೇ ಇದೆ ಕೊಬ್ಬರಿ ಬೆಲೆ
ಆಗ ರೈತರ ಮುಖದಲ್ಲಿ ಮಂದಹಾಸ ಮೂಡಿತ್ತು. ಆದರೆ, ಈ ನಗು ಹೆಚ್ಚು ಕಾಲ ಉಳಿಯಲಿಲ್ಲ. ತಿಂಗಳು ಕಳೆದಂತೆ ದರ ಕುಸಿಯತೊಡಗಿತು. ಪ್ರತಿ ತಿಂಗಳೂ ಇಳಿಕೆಯಾಗುತ್ತ ಸಾಗಿದ ಕೊಬ್ಬರಿ ಜೂನ್ ವೇಳೆಗೆ ₹13 ಸಾವಿರಕ್ಕೆ ಬಂದು ತಲುಪಿತು. ಪ್ರಸ್ತುತ ಕ್ವಿಂಟಲ್ ದರ ₹12,500ಕ್ಕೆ ಕುಸಿದಿದೆ.
ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಆವಕ ಹೆಚ್ಚಾಗಿದ್ದು ಬೆಲೆ ಕುಸಿದಿದೆ. ಒಂದು ತೆಂಗಿನಕಾಯಿ ಸಗಟು ಮಾರುಕಟ್ಟೆಯಲ್ಲಿ ₹7ರಿಂದ 9ಕ್ಕೆ ಮಾರಾಟವಾಗುತ್ತಿದೆ. ಕಳೆದ ಮೇ, ಜೂನ್ ಸಮಯದಲ್ಲಿ ₹15-16ರ ವರೆಗೂ ಏರಿಕೆಯಾಗಿತ್ತು.
ಎರಡು ವರ್ಷದಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಇದರಿಂದ ಇಳುವರಿ ಹೆಚ್ಚಾಗಿದ್ದು ಬೆಲೆ ಇಳಿದಿದೆ
Post a Comment