".

Header Ads

ಕಾರದ ಪುಡಿ ಎರಚಿ ಒನಕೆಯಿಂದ ಹಲ್ಲೆ ನಡೆಸಿ ಮಾವನನ್ನು ಕೊಂದ ಸೊಸೆ

 


ರಾ
ಜ್ಯದ ದಾವಣಗೆರೆಯಲ್ಲಿ ಸೊಸೆ ಮಾವನನ್ನೇ ಕೊಂದಿರುವ ಘಟನೆ ನಡೆದಿದೆ,
ಕೌಟುಂಬಿಕ ಕಲಹ ಹಿನ್ನೆಲೆ ಮೈ ಮೇಲೆ ಬಿಸಿನೀರು, ಕಾರದ ಪುಡಿ ಎರಚಿ ಒನಕೆಯಿಂದ ಹಲ್ಲೆ ನಡೆಸಿ ಮಾವನನ್ನು ಸೊಸೆ ಕೊಲೆ ಮಾಡಿರುವ ಭಯಾನಕ ಘಟನೆ ದಾವಣಗೆರೆ ಜಿಲ್ಲೆ ಹರಿಹರ ನಗರದ ವಿದ್ಯಾನಗರದಲ್ಲಿ ನಡೆದಿದೆ.

ಬಿ.ಎಂ.ಜ್ಯೋತಿ(28) ಎಂಬ ಮಹಿಳೆ ತನ್ನ ಮಾವ ಪಿ.ಶಿವಕುಮಾರ್​​(70) ಅವರನ್ನು ಕೊಲೆ ಮಾಡಿದ್ದಾಳೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಮೂಲದ ಕುಟುಂಬ ಕಳೆದ ಆರು ತಿಂಗಳಿಂದ ಹರಿಹರದಲ್ಲಿ ವಾಸವಾಗಿತ್ತು. ಕೊಲೆಯಾದ ಶಿವಕುಮಾರ ಪುತ್ರ ಪಿ.ವೀರೇಶ ಹರಿಹರದ ಕಾರ್ಗೀಲ್ ಕಂಪನಿಯ ಉದ್ಯೋಗಿಯಾಗಿದ್ದಾರೆ. ಆರೋಪಿ‌ ಸೊಸೆಯನ್ನು ಬಂಧಿಸಿ ಶಿವಮೊಗ್ಗ ಜೈಲಿಗೆ ರವಾನಿಸಲಾಗಿದೆ.

Powered by Blogger.