".

Header Ads

ವಿಶ್ವ ಯೂತ್‌ ಬಾಕ್ಸಿಂಗ್‌: ಫೈನಲ್ ಗೆ ಲಗ್ಗೆಯಿಟ್ಟ ಭಾರತದ 7 ಬಾಕ್ಸರ್ ಗಳು

ಸ್ಪೇನ್‌ನ ಲಾ ನೂಸಿಯಾದಲ್ಲಿ ನಡೆಯುತ್ತಿರುವ ವಿಶ್ವ ಯೂತ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ೭ ಬಾಕ್ಸರ್ ಗಳು ಫೈನಲ್ ಪ್ರವೇಶಿಸಿದ್ದಾರೆ. 

ಬಾಕ್ಸರ್‌ಗಳ ಉತ್ತಮ ಪ್ರದರ್ಶನ ಮುಂದುವರಿದಿದ್ದು, ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಒಟ್ಟು ಏಳು ಮಂದಿ ಫೈನಲ್‌ ಪ್ರವೇಶಿಸಿದ್ದಾರೆ.

 ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದ ವಂಶಜ್‌, ವಿಶ್ವನಾಥ್‌ ಸುರೇಶ್ ಮತ್ತು ಆಶೀಶ್‌ ಅವರು ಪ್ರಶಸ್ತಿ ಸುತ್ತು ತಲುಪಿದರು.

ಮಹಿಳೆಯರ ವಿಭಾಗದಲ್ಲಿ ಕೀರ್ತಿ (+81 ಕೆ.ಜಿ), ಭಾವನಾ ಶರ್ಮಾ (48 ಕೆ.ಜಿ), ದೇವಿಕಾ ಘೋರ್ಪಡೆ (52 ಕೆ.ಜಿ) ಮತ್ತು ರವೀನಾ (63 ಕೆ.ಜಿ) ಅವರು ಫೈನಲ್‌ಗೆ ಲಗ್ಗೆಯಿಟ್ಟರು.

Powered by Blogger.