".

Header Ads

ಉಡುಪಿ: ಮದುವೆ ಮನೆಯಲ್ಲಿ ಯುವತಿ ಹೃದಯಾಘಾತದಿಂದ ಸಾವು..!

 


ಯುವಜನರಲ್ಲಿ ಇತ್ತೀಚೆಗೆ ಹೃದಯಾಘಾತವಾಗುವ ಪ್ರಕರಣ ಹೆಚ್ಚಳದಾಗುತ್ತಿದ್ದು,ಸಹಜವಾಗಿ ಆತಂಕ ಕೂಡ ಉಂಟಾಗಿದೆ. ಒತ್ತಡ, ಹೃದಯ ದೌರ್ಬಲ್ಯದ ಯುವ ಜನರು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ.   

ಉಡುಪಿ ಜಿಲ್ಲೆಯ ಕೊಳಲಗಿರಿಯ ಹಾವಂಜೆಯ ನಿವಾಸಿಯಾಗಿರುವ ಜ್ಯೋತ್ಸ್ನಾಲೂವಿಸ್‌ (23) ಮೃತ ಯುವತಿ. ಜ್ಯೋತ್ಸ್ನಾ ಅವರು ಬುಧವಾರ ರಾತ್ರಿ ಕೊಳಲಗಿರಿ ಹಾವಂಜೆಯ ತನ್ನ ಸಂಬಂಧಿಕರ ಮದುವೆ ಮನೆಗೆ ಬಂದಿದ್ದರು. ರಾತ್ರಿ ಹೊತ್ತಿಗೆ ಇತರರೆಲ್ಲ ಪಾನೀಯಗಳನ್ನು ಸೇವಿಸುತ್ತಾ, ನೃತ್ಯ ಮಾಡುತ್ತಿದ್ದರು.ಇದನ್ನು ನೋಡುತ್ತಾ ಕುರ್ಚಿಯಲ್ಲಿ ಕುಳಿತಿದ್ದ ಜ್ಯೋತ್ಸ್ನಾ ಅಲ್ಲೇ ಕುಸಿದು ಬಿದ್ದ ತಕ್ಷಣ ಸಂಬಂಧಿಕರು ಯುವತಿಯನ್ನು ಮಣೆಪಾಲ ಅಸ್ಪತ್ರೆಗೆ ದಾಖಲಿಸಿದ್ದರು. ಆದರೆ,ಚಿಕಿತ್ಸೆ ಫಲಿಸದೆ ಇಂದು ಮೃತಹಚ್ಟಿದ್ದಾರೆ.

 

Powered by Blogger.