ಜನವರಿ 2024 ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಮುಖ್ಯ ಪ್ರಾಣ ಪ್ರತಿಷ್ಠಾಪನೆ: ಪೇಜಾವರ ಶ್ರೀ
ಉಡುಪಿಯ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2024ರ ಜನವರಿ ತಿಂಗಳು ಮಕರ ಸಂಕ್ರಾಂತಿಯ ನಂತರ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನೆರವೇರಲಿದೆ. ಕಂಬಗಳು ಹಾಗೂ ಸುತ್ತಲಿನ ಗೋಡೆಯನ್ನು ಕಟ್ಟುವ ಕೆಲಸ ನಡೆಯುತ್ತಿದೆ. ಈಗಾಗಲೇ ಐದಾರು ಅಡಿಗಳಷ್ಟು ಎತ್ತರಕ್ಕೆ ಬಂದಿದೆ. 2023ರ ಅಂತ್ಯಕ್ಕೆ ಎಲ್ಲ ಕೆಲಸಗಳು ಮುಕ್ತಾಯವಾಗಲಿವೆ. ಮುಂಬರುವ ಜನವರಿಯಲ್ಲಿ ಸಂಕ್ರಾಂತಿ ಹಬ್ಬದ ನಂತರ ಶುಭ ಮುಹೂರ್ತದಲ್ಲಿ ಮುಖ್ಯ ಪ್ರಾಣ ಪ್ರತಿಷ್ಠಾಪನಾ ಕಾರ್ಯ ನೆರವೇರಲಿದೆ ಎಂದು ತಿಳಿಸಿದರು.



Post a Comment