".

Header Ads

Cyber Crime : 1000 ಕೋಟಿ ರೂ ಆಸ್ತಿ ಜಪ್ತಿ :ಕೇಂದ್ರ ಸರ್ಕಾರ


 ಅಕ್ರಮ ಹಣ ತಡೆ ಕಾಯ್ದೆ 2002 ಅಡಿಯಲ್ಲಿ ಸೈಬರ್, ಕ್ರಿಪ್ಟೊ ಅಪರಾಧಕ್ಕೆ ಸಂಬಂಧಿಸಿದಂತೆ ಒಂದು ಸಾವಿರ ಕೋಟಿಗೂ ಹೆಚ್ಚು ರೂಪಾಯಿ ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

 
ಹಣಕಾಸು ಸಚಿವಾಲಯವು ಭಾರತ ಸರ್ಕಾರದ ಪ್ರಮುಖ ಸಚಿವಾಲಯವಾಗಿದೆ  ,ಲೋಕಸಭೆಯಲ್ಲಿಂದು ಹಣಕಾಸು ಸಚವಾಲಯ ಈ ಕುರಿತು ಲಿಖಿತ ಮಾಹಿತಿ ಒದಗಿಸಿದೆ. ಇದರ ಜತೆಗೆ ಇದೇ ರೀತಿಯ ಕಂಪನಿಗಳು ಜಿಎಸ್ ಟಿ ವಂಚಿಸಿದ್ದು, ಏಪ್ರಿಲ್ 2019ರಿಂದ ನವೆಂಬರ್ 2022ರವರೆಗೆ 22,936 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದೆ.
 
ಆನ್ ಲೈನ್ ಗೇಮಿಂಗ್ ಕಂಪನಿಗಳು ಒಳಗೊಂಡಂತೆ ಈ ರೀತಿಯ ಕಂಪನಿಗಳಿಂದ ಜಿಎಸ್ ಟಿ ವಂಚಿಸಿರುವ ತನಿಖೆ ನಡೆಯುತ್ತಿದೆ.
ಇಂತಹ ಕಂಪನಿಗಳನ್ನು ರದ್ದುಗೊಳಿಸುವ ಬಗ್ಗೆ ಕ್ರಮಕೈಗೊಂಡಿರುವ ಕುರಿತು ಕೇಳಿರುವ ಪ್ರಶ್ನೆಗೆ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗಿದೆ ಎಂದು ಹಣಕಾಸು ಖಾತೆಯ ಸಹಾಯಕ ಸಚಿವ ಪಂಕಜ್ ಚೌಧರಿ ತಿಳಿಸಿದರು.




Powered by Blogger.