ಭಾರತ-ಚೀನಾ ಯೋಧರ ನಡುವೆ ಮತ್ತೆ ಬಡಿದಾಟ
ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಗಡಿ ಕಾಯುತ್ತಿದ್ದ ಭಾರತ ಸೈನಿಕರನ್ನು ಚೀನಿ ಯೋಧರು ಕೆಣಕಿದ್ದಾರೆ. ಇದಕ್ಕೆ ಪ್ರತಿಯಾಗಿ ಭಾರತದ ಸೈನಿಕರು ತಿರುಗೇಟು ನೀಡಿದ್ದು, ಎರಡು ಕಡೆ ಸೈನಿಕರ ಮಧ್ಯೆ ಘರ್ಷಣೆ ನಡೆದಿದೆ.
ಒಂದೆಡೆ ಮಾತುಕತೆ ನಡೆಸುವುದಾಗಿ ಹೇಳುತ್ತಿರುವ ಚೀನಾ ಮತ್ತೆ ತನ್ನ ಕುತಂತ್ರ ಬುದ್ದಿ ಮುಂದುವರಿಸಿದೆ.
ಭಾರತೀಯ ಯೋಧರ ಜತೆ ಸಂಘರ್ಷ ನಡೆಸಲು 300 ಸೈನಿಕರೊಂದಿಗೆ ಚೀನಾ ಪಡೆ ತಯಾರಾಗಿ ಬಂದಿತ್ತು. ದಿಢೀರ್ ದಾಳಿಯಿಂದ ಕೆಲ ಕಾಲ ಭಾರತೀಯ ಸೇನೆ ತಬ್ಬಿಬ್ಬಾದರೂ ತಕ್ಷಣ ಸಿಡಿದೆದ್ದು ದಿಟ್ಟ ಪ್ರತ್ಯುತ್ತರ ನೀಡಿತು. ಪರಸ್ಪರ ಕಲ್ಲು ತೂರಾಟಗಳು ನಡೆದಿವೆ.
ಭಾರತೀಯ ಯೋಧರ ಧೈರ್ಯಕ್ಜೆ ಬೆಚ್ಚಿಬಿದ್ದ ಚೀನಾ ಯೋಧರು ಕಾಲ್ಕಿತ್ತರು. ಸಂಘರ್ಷದಲ್ಲಿ ಭಾರತದ ಯೋಧರಿಗಿಂತ ಚೀನಾ ಸೈನಿಕರೇ ಗಾಯಗೊಂಡಿದ್ದಾರೆ. ಭಾರತೀಯ ಯೋಧರನ್ನು ಗುವಾಹಟಿಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇದೇ ಪ್ರದೇಶದಲ್ಲಿ ಭಾರತೀಯ ಯೋಧರು ಚೀನಾ ಸೈನಿಕರನ್ನು ತಡೆದಿದ್ದರು. ಸುಮಾರು 200 ಪೀಪಲ್ಸ್ ಲಿಬರೇಶನ್ ಆರ್ಮಿ ಸೈನಿಕರನ್ನು ತಡೆದ ಭಾರತ ಹಿಂದಕ್ಕೆ ಕಳುಹಿಸಿತ್ತು. ಈ ಬಡಿದಾಟದಲ್ಲೂ ಭಾರತೀಯ ಯೋಧರು ಗಾಯಗೊಂಡಿದ್ದರು.




Post a Comment