ಶ್ರೀ ಮಣಿಕಂಠ ಸೇವಾ ಸಮಿತಿ, ವಸಯಿ : 21ನೇ ವರ್ಷದ ಶ್ರೀ ಅಯ್ಯಪ್ಪ ಮಹಾಪೂಜೆಯು ಭಕ್ತರ ಸಹಕಾರದಿಂದ ಯಶಸ್ವಿಗೊಂಡಿದೆ : ಕರ್ನೂರು ಶಂಕರ್ ಆಳ್ವ
(ಚಿತ್ರ, ವರದಿ : ದಿನೇಶ್ ಕುಲಾಲ್)
ಶ್ರೀ ಮಣಿಕಂಠ ಸೇವಾ ಸಮಿತಿ, ವಸಯಿ ಇದರ 21ನೇ ವರ್ಷದ ಅಯ್ಯಪ್ಪ ಮಹಾಪೂಜೆಯು ಡಿ 16 ಶುಕ್ರವಾರ, ಅರ್ನ ಸ್ವರ್ಣ ಬಾಂಕ್ವೆಟ್ ಹಾಲ್, ದತ್ತನಿ ಮಾಲ್, ಸ್ಕಾರ್ಟ್ ಬಾಜರ್ ಹತ್ತಿರ, ವಸಯಿ (ಪ) ಇಲ್ಲಿ ಶ್ರೀ ಜಯಶೀಲ ಗುರುಸ್ವಾಮಿ ಮೀರಾರೋಡ್ ಇವರ ದಿವ್ಯ ಹಸ್ತ ಮಹಾಮಂಗಳಾರತಿಯೊಂದಿಗೆ ಭಕ್ತಿ ಸಂಭ್ರಮದೊಂದಿಗೆ ಸಂಪನ್ನಗೊಂಡಿದೆ.
ಬೆಳಿಗ್ಗೆ ಗಣಹೋಮ ಕೃಷ್ಣ ಭಟ್ ನಾಲಾಸೋಪಾರಾ ಅವರಿಂದ ನಡೆಯಿತು. ಅನಂತರ ಮೀರಾರೋಡ್ ಲಕ್ಷ್ಮೀನಾರಾಯಣ ಭಜನಾ ಮಂಡಳಿಯ ಸದಸ್ಯರಿಂದ ಮತ್ತು ಸ್ಥಳೀಯ ಮಹಿಳೆಯರಿಂದ ಭಜನೆ ನಡೆಯಿತು.
ಬಳಿಕ ಚಂದ್ರಶೇಖರ ಬಂಗೇರ ಮತ್ತು ವಿಶ್ವನಾಥ ಬಂಗೇರ ಅವರಿಂದ ಹೂವಿನಿಂದ ಸಿಂಗರಿಸಲ್ಪಟ್ಟ ಅಲಂಕಾರ ಮಂಟಪದಲ್ಲಿ ಕಲಿಯುಗ ವರದ ಶ್ರೀ ಅಯ್ಯಪ್ಪ ಸ್ವಾಮಿಗೆ ಮಹಾ ಮಂಗಳಾರತಿಯನ್ನು ಜಯಶೀಲ ಗುರುಸ್ವಾಮಿಯವರು ನಡೆಸಿದರೆ, ಅಪಾರ ಸಂಖ್ಯೆಯ ಅಯ್ಯಪ್ಪ ವೃತಾಧಾರಿಗಳ ಶರಣು ಘೋಷದೊಂದಿಗೆ 21ನೇ ವಾರ್ಷಿಕ ಮಹಾಪೂಜೆ ಸಂಪನ್ನಗೊಂಡಿದೆ.
ಭಕ್ತರೆಲ್ಲರಿಗೂ ವಿಶೇಷವಾಗಿ ಪ್ರಾರ್ಥನೆ ನಡೆಸಿದ ಜಯಶೀಲ ಗುರುಸ್ವಾಮಿಯವರು, ವಸಯಿ ತಾಲೂಕಿನ ಪರಿಸರದ ಎಲ್ಲಾ ಆಯ್ಯಪ್ಪ ಭಕ್ತರು ಶ್ರದ್ಧೆಯಿಂದ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದೀರಿ. ಪೂಜೆಯಲ್ಲಿ ಪಾಲ್ಗೊಳ್ಳುವುದು ಮತ್ತು ನೋಡುವುದು ನಮ್ಮ ಬದುಕನ್ನು ಸಾರ್ಥಕಗೊಳಿಸುತ್ತದೆ. ಧಾರ್ಮಿಕ ಕಾರ್ಯಗಳಿಗೆ ನಾವು ಸದಾ ದಾನ ಧರ್ಮಗಳನ್ನು ಮಾಡುತ್ತಾ ಹೋದಾಗ ನಮ್ಮ ಪಾಪಕರ್ಮಗಳು ದೂರವಾಗುತ್ತದೆ ಎಂದರು.
ಪಾಲ್ಗೊಂಡ ಭಕ್ತರನ್ನು ಉದ್ದೇಶಿಸಿ ಕೃತಜ್ಞತೆಯನ್ನು ಸಲ್ಲಿಸಿದ ಮಣಿಕಂಠ ಸೇವಾ ಸಮಿತಿ ಗೌರವ ಅಧ್ಯಕ್ಷ ಕರ್ನೂರು ಶಂಕರ್ ಆಳ್ವ, ಅಯ್ಯಪ್ಪನ ಭಕ್ತರೆಲ್ಲರ ಸಹಕಾರದಿಂದ ಈ ಪುಣ್ಯಕಾರ್ಯವನ್ನು ನಡೆಸುವಂತಾಗಿದೆ. ಎಲ್ಲಾ ತುಳು ಕನ್ನಡಿಗರು ಒಗ್ಗಟ್ಟಾಗಿ ಈ ಸೇವೆಯಲ್ಲಿ ಪಾಲ್ಗೊಂಡಿದ್ದಾರೆ. ನಮ್ಮ ಬದುಕಿನಲ್ಲಿ ಧರ್ಮ ಜಾಗೃತಿಗೊಳ್ಳಲು ಧಾರ್ಮಿಕ ಸೇವೆಯಲ್ಲಿ ನಾವು ತೊಡಗಿಕೊಂಡಾಗ ಸಾಧ್ಯವಾಗುತ್ತದೆ. ಇಂದಿನ ಪೂಜಾ ಕಾರ್ಯದಲ್ಲಿ ದಾನಿಗಳು, ಅಯ್ಯಪ್ಪ ಭಕ್ತರು ಸಹಕಾರವನ್ನು ನೀಡಿದ್ದಾರೆ. ಅವರೆಲ್ಲರ ಸಹಕಾರದಿಂದ ಈ ಪೂಜೆ ಯಶಸ್ವಿಗೊಂಡಿದೆ ಎಂದು ನುಡಿದರು.
ಪಾಲ್ಗೊಂಡ ಎಲ್ಲಾ ಭಕ್ತರಿಗೆ, ದಾನಿಗಳಿಗೆ ಸಮಿತಿಯ ಗೌರವ ಅಧ್ಯಕ್ಷ ಕರ್ನೂರು ಶಂಕರ್ ಆಳ್ವ, ಅಧ್ಯಕ್ಷರು ಯಶೋಧರ್ ವಿ. ಕೋಟ್ಯಾನ್, ಉಪಾಧ್ಯಕ್ಷ ಎಕ್ಕಾರ್ ದಿನೇಶ್ ಹೆಗ್ಡೆ, ಕಾರ್ಯದರ್ಶಿ
ನಿತ್ಯಾನಂದ ಶೆಟ್ಟಿ, ಖಜಾಂಚಿ ರಾಧಕೃಷ್ಣ ಶೆಟ್ಟಿ, ಜೊತೆ ಖಜಾಂಚಿ ಸುಧೀರ್ ಸಾಲ್ಯಾನ್, ಪೂಜಾ ಸಮಿತಿ ಸಲಹಾಗಾರ ದಿನೇಶ್ ಭಂಡಾರಿ ಮತ್ತಿತರ ಸದಸ್ಯರು ಪ್ರಸಾದವನ್ನು ನೀಡಿ ಗೌರವಿಸಿದರು.
ಪೂಜೆಯಲ್ಲಿ ಬಂಟರ ಸಂಘ ಮುಂಬೈಯ ಟ್ರಸ್ಟಿ ವಿರಾರ್ ಶಂಕರ್ ಬಿ. ಶೆಟ್ಟಿ, ವಸಾಯಿ ತಾಲೂಕು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ನಾಗರಾಜ ಶೆಟ್ಟಿ, ಮಾಜಿ ಅಧ್ಯಕ್ಷ ಜಗನ್ನಾಥ್ ಎನ್. ರೈ, ಮೀರಾ - ಡಹಾಣು ಬಂಟ್ಸ್ ನ ಅಧ್ಯಕ್ಷ ಪ್ರಕಾಶ್ ಹೆಗ್ಡೆ, ವಸಯಿ ಕರ್ನಾಟಕ ಸಂಘದ ಅಧ್ಯಕ್ಷ ಪಾಂಡು ಎಲ್. ಶೆಟ್ಟಿ, ತುಳುಕೂಟ ಫೌಂಡೇಶನ್ ನಾಲಾಸೋಪಾರಾ ಅಧ್ಯಕ್ಷ ಶಶಿಧರ್ ಕೆ. ಶೆಟ್ಟಿ ಇನ್ನಂಜೆ, ವಿರಾರ್- ನಾಲಾಸೋಪಾರಾ ಕರ್ನಾಟಕ ಸಂಸ್ಥೆಯ ಅಧ್ಯಕ್ಷ ಸದಾಶಿವ ಕರ್ಕೇರ ಸ್ವಾಮಿ , ಜೀವದಾನಿ ಯಕ್ಷಕಲಾ ವೇದಿಕೆಯ ಅಧ್ಯಕ್ಷ ಮಂಜುನಾಥ್ ಶೆಟ್ಟಿ ಕೊಡ್ಲಾಡಿ. ಉಪಾಧ್ಯಕ್ಷ ಅಶೋಕ್ ಕೆ ಶೆಟ್ಟಿ, ಕಟೀಲು ಶ್ರೀ ಯಕ್ಷಕಲಾ ವೇದಿಕೆ ವಸಯಿಯ ಅಧ್ಯಕ್ಷ ದೇವೇಂದ್ರ ಬುನ್ನನ್ , ಹೋಟೆಲ್ ಉದ್ಯಮಿಗಳಾದ ರಮೇಶ್ ವಿ. ಶೆಟ್ಟಿ ಕಾಪು, ಮೋಹನ್ ಬಿ. ಶೆಟ್ಟಿ, ಮೋಹನ್ ವಿ. ಶೆಟ್ಟಿ ಕಾಪು, ಬಿಲ್ಲವರ ಅಸೋಸಿಯೇಷನ್ ನ ವಸಯಿ ಸ್ಥಳೀಯ ಕಚೇರಿಯ ಕಾರ್ಯಧ್ಯಕ್ಷ ಕರುಣಾಕರ್ ಅಮೀನ್, ಉದ್ಯಮಿ ದಯಾನಂದ ಪೂಜಾರಿ ಇನ್ನ, ಪ್ರಕಾಶ್ ಶೆಟ್ಟಿ ಕಲ್ಯಾಣ್, ರಂಜನ್ ಶೆಟ್ಟಿ, ಶ್ರೀಮತಿ ಪ್ರವೀಣ ಪ್ರಕಾಶ್ ಶೆಟ್ಟಿ ಕಲ್ಯಾಣ್, ಉಷಾ ಶ್ರೀಧರ್ ಶೆಟ್ಟಿ ಮತ್ತಿತರ ಉದ್ಯಮಿಗಳು ಹೋಟೆಲ್ ಮಾಲಕರು ಚಾಲಕರು ಅಯ್ಯಪ್ಪ ವ್ರತಧಾರಿಗಳು ಭಕ್ತರು, ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಮಹಾ ಪ್ರಸಾದ ಅನ್ನ ಸಂತರ್ಪಣೆಯನ್ನು ಸ್ವೀಕರಿಸಿದರು.











Post a Comment