ಉಡುಪಿ: - ಬೈಕ್ ಡಿವೈಡರ್‌ಗೆ ಢಿಕ್ಕಿ: ಇಬ್ಬರಿಗೆ ಗಾಯ ಓರ್ವ ವಿದ್ಯಾರ್ಥಿ ಮೃತ್ಯು
ಮಣಿಪಾಲದಲ್ಲಿ ಡಿವೈಡರ್‌ಗೆ ಬೈಕ್ ಢಿಕ್ಕಿ ಹೊಡೆದು ಎಂಐಟಿಯ ವಿದ್ಯಾರ್ಥಿ ನಿಖಿಲ್ ಎಂಬುವನು(23) ಸಾವನ್ನಪ್ಪಿದ್ದಾರೆ.
ಇವರು ಶಿವಮೊಗ್ಗ ಮೂಲದವರಾಗಿದ್ದು, ಮಣಿಪಾಲದಲ್ಲಿ ವ್ಯಾಸಂಗ ಮಾಡಿಕೊಂಡಿದ್ದರು. ಇಬ್ಬರು ವಿದ್ಯಾರ್ಥಿಗಳು ಬೈಕ್‌ನಲ್ಲಿ ಕೆಳ ಪರ್ಕಳ ಕಡೆಯಿಂದ ಉಡುಪಿ ಕಡೆಗೆ ತೆರಳುತ್ತಿದ್ದರು. . ಬೈಕ್ ಮಣಿಪಾಲದ ಟೈಗರ್ ಸರ್ಕಲ್‌ನ ಬಳಿ ಆರೋಪಿ ಬೈಕ್ ಅನ್ನು ಅತೀ ವೇಗದಿಂದ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದಿದೆ.
ಈ ವೇಳೆ 3 ಮಂದಿ ಬೈಕ್‌ನಿಂದ ಕೆಳಗೆ ಬಿದ್ದಿದ್ದಾರೆ. ನಿಖಿಲ್ ಒಬ್ಬನ ತಲೆಯ ಹಿಂಭಾಗಕ್ಕೆ ಗಂಭೀರ ಗಾಯವಾಗಿದ್ದು ಪ್ರಜ್ಞೆ ಇರಲಿಲ್ಲ. ಉಳಿದ ಇಬ್ಬರಿಗೂ ಗಾಯ ಉಂಟಾಗಿತ್ತು. ಸ್ಥಳೀಯರು ಗಾಯಾಳುಗಳನ್ನು ಆ್ಯಂಬುಲೆನ್ಸ್‌ನಲ್ಲಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ನಿಖಿಲ್ ಅದಾಗಲೇ ಸಾವನ್ನಪ್ಪಿದ್ದರು. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Post a Comment