".

Header Ads

921 ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆಗೆ ಟಾಟಾ ಮೋಟರ್ಸ್ ಜೊತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಒಪ್ಪಂದ


ಭಾರತದ ಅತಿದೊಡ್ಡ ವಾಣಿಜ್ಯ ವಾಹನಗಳ ತಯಾರಿಕಾ ಸಂಸ್ಥೆಯಾದ ಟಾಟಾ ಮೋಟರ್ಸ್, ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಶನ್, ಬೆಂಗಳೂರು ನಗರದಲ್ಲಿ 921 ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆಗಾಗಿ ತನ್ನ ಸಂಪೂರ್ಣ ಮಾಲೀಕತ್ವದ ಅಧೀನ ಸಂಸ್ಥೆಯಾದ ಟಿಎಮ್‌ಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸಲ್ಯೂಶನ್ಸ್ ಲಿ.,ಯೊಂದಿಗೆ ನಿಶ್ಚಿತ ಒಪ್ಪಂದಕ್ಕೆ ಸಹಿ ಹಾಕಿದೆ  ಎಂದು ನಿನ್ನೆ ಘೋಷಿಸಿತು.

ಒಪ್ಪಂದದ ಭಾಗವಾಗಿ, ಟಿಎಮ್‌ಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸಲ್ಯೂಶನ್ಸ್ ಲಿ., 12 ವರ್ಷಗಳವರೆಗೆ , 921 ಯೂನಿಟ್‌ಗಳ 12-ಮೀಟರ್ ಲೋ-ಫ್ಲೋರ್ ಎಲೆಕ್ಟ್ರಿಕ್  ಬಸ್‌ಗಳನ್ನು ಸರಬರಾಜು ಮಾಡಿ, ಕಾರ್ಯಾಚರಣೆ ನಡೆಸಿ ನಿರ್ವಹಿಸುತ್ತದೆ. ಟಾಟಾ ಸ್ಟಾರ್ ಬಸ್ ಎಲೆಕ್ಟ್ರಿಕ್ ದೀರ್ಘಕಾಲ ಇರುವಂತಹ ಮತ್ತು ಆರಾಮದಾಯಕ ಪ್ರಯಾಣಕ್ಕಾಗಿ ಅತ್ಯುತ್ಕೃಷ್ಟ ವಿನ್ಯಾಸ ಮತ್ತು ವರ್ಗದಲ್ಲೇ ಅತ್ಯುತ್ತಮವಾದ ಅಂಶಗಳೊಂದಿಗೆ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ವಾಹನವಾಗಿದೆ.

ಈ ಘೋಷಣೆಯ ಬಗ್ಗೆ ಮಾತನಾಡುತ್ತಾ, ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಶನ್‌ನ ವ್ಯವಸ್ಥಾಪಕ ನಿರ್ದೇಶಕಿ, ಶ್ರೀಮತಿ ಜಿ. ಸತ್ಯವತಿ, ಐಎಎಸ್, “ಬೆಂಗಳೂರಿನಲ್ಲಿ 921 ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆಗಾಗಿ ಟಿಎಮ್‌ಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸಲ್ಯೂಶನ್ಸ್ ಲಿ.,ಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದಕ್ಕೆ ನಮಗೆ ಬಹಳ ಹರ್ಷವಾಗುತ್ತಿದೆ.  
  ಟಾಟಾ ಮೋಟರ್ಸ್‌ನ ಅತ್ಯಾಧುನಿಕ ಸಂಶೋಧನೆ ಮತ್ತು ಅಭಿವೃದ್ಧಿ ಘಟಕಗಳು, ಬ್ಯಾಟರಿ ಎಲೆಕ್ಟ್ರಿಕ್, ಹೈಬ್ರಿಡ್, ಸಿಎನ್‌ಜಿ, ಎಲ್‌ಎನ್‌ಜಿ, ಮತ್ತು ಹೈಡ್ರೋಜನ್ ಫ್ಯುಯೆಲ್ ಸೆಲ್ ಟೆಕ್ನಾಲಜಿ ಒಳಗೊಂಡಂತೆ ಪರ್ಯಾಯ ಇಂಧನ ತಂತ್ರಜ್ಞಾನದ ಶಕ್ತಿಯಿರುವ ವಿನೂತನ ಸಂಚಾರ ಪರಿಹಾರಗಳನ್ನು ಇಂಜಿನಿಯರ್ ಮಾಡಲು ನಿರಂತರವಾಗಿ ಕೆಲಸಮಾಡುತ್ತಿವೆ.

ಇಂದಿನವರೆಗೂ ಟಾಟಾ ಮೋಟರ್ಸ್, ಭಾರತದ ಅನೇಕ ನಗರಗಳಾದ್ಯಂತ 730ಕ್ಕಿಂತ ಹೆಚ್ಚಿನ ಎಲೆಕ್ಟ್ರಿಕ್ ಬಸ್‌ಗಳನ್ನು ಸರಬರಾಜು ಮಾಡಿದ್ದು, ಇವೆಲ್ಲವೂ, 95%ಗಿಂತ ಹೆಚ್ಚಿನ ಅಪ್‌ಟೈಮ್‌ನೊಂದಿಗೆ, ಸಂಘಟಿತವಾಗಿ 55 ದಶಲಕ್ಷ ಕಿಲೋಮೀಟ್‌ಗಳನ್ನು ಪೂರೈಸಿವೆ.





Powered by Blogger.