ವಸೈ ಜೀವದಾನಿ ಯಕ್ಷಕಲಾ ವೇದಿಕೆಯ ಸ್ನೇಹ ಸಮ್ಮಿಲನ
ಮಕ್ಕಳು ವಿದ್ಯೆಯೊಂದಿಗೆ ಸಂಸ್ಕೃತಿಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು : ಮಂಜುನಾಥ್ ಶೆಟ್ಟಿ ಕೊಡ್ಲಾಡಿ
ವಸೈಯ ಜೀವದಾನಿ ಯಕ್ಷಕಲಾ ವೇದಿಕೆಯ ಸ್ನೇಹ ಸಮ್ಮಿಲನ ಇತ್ತೀಚಿಗೆ ವಸೈ ಪಶ್ಚಿಮದ ಡಿ ಸಿ ಕ್ಲಬ್ಬಿನ ಸಭಾಂಗಣದಲ್ಲಿ ಯಕ್ಷಕಲ ವೇದಿಕೆಯ ಅಧ್ಯಕ್ಷ ಮಂಜುನಾಥ್ ಶೆಟ್ಟಿ ಕೊಡ್ಲಾಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಆರನೇ ವರ್ಷದ ವಾರ್ಷಿಕ ಸಂಭ್ರಮ ಕಾರ್ಯಕ್ರಮವು ಯಶಸ್ವಿಯ ನಿಟ್ಟಿನಲ್ಲಿ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸಂಸ್ಥೆಯ ಅದ್ಯಕ್ಷರಾದ ಮಂಜುನಾಥ ಶೆಟ್ಟಿ ಕೊಡ್ಲಾಡಿ ಹಾಗೂ ಅವರ ಧರ್ಮ ಪತ್ನಿ ಜಯಂತಿಯ ಎಮ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.
ಹಾಗೂ ಸಂಸ್ಥೆಯ ಕಾರ್ಯದರ್ಶಿ ನವೀನ್ ಅಂಚನ್ ಅವರ ತಂದೆ-ತಾಯಿಯರಾದ ಎಜೇಂದ್ರ
ಅಂಚನ್ ಹಾಗೂ ಅವರ ಧರ್ಮ ಪತ್ನಿ ಪದ್ಮಾವತಿಯವರನ್ನು ಗೌರವಿಸಲಾಯಿತು.
ಸನ್ಮಾನವನ್ನು ಸ್ವೀಕರಿಸಿದ ಮಂಜುನಾಥ್ ಶೆಟ್ಟಿ ಕೊಡ್ಲಾಡಿ ಮಾತನಾಡುತ್ತಾ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ನಮ್ಮ ನಾಡಿನ ಶ್ರೀಮಂತಕಲೆ ಯಕ್ಷಗಾನದ ಅಭಿರುಚಿ ಬೆಳೆಯಬೇಕು ಯಕ್ಷಗಾನದ ಮೂಲಕ ಅವರು ಧಾರ್ಮಿಕ ವಿಚಾರಗಳು ಹೆಚ್ಚು ಬೆಳೆಸುವಂತಾಗಬೇಕು ಎನ್ನುವ ನಿಟ್ಟಿನಲ್ಲಿ ಜೀವದಾನಿ ಯಕ್ಷ ಕಲಾವಿದಿಕೆ ಯಕ್ಷಗಾನ ತರಬೇತಿಯನ್ನು ನೀಡುತ್ತಿದೆ ,ಮಕ್ಕಳು ವಿದ್ಯೆಯನ್ನು ಪಡೆದರೆ ಸಾಲದು ಸಂಸ್ಕಾರವನ್ನು ಪಡೆಯಬೇಕು ಎಂದು ನುಡಿದರು.
ವೇದಿಕೆಯಲ್ಲಿ ಯಕ್ಷ ಕಲಾ ವೇದಿಕೆಯ ಪದಾಧಿಕಾರಿಗಳಾದ ರಮೇಶ್ ವಿ. ಶೆಟ್ಟಿ ಕಾಪು, ಪ್ರಕಾಶ ಹೆಗಡೆ., ಅಶೋಕ್ ಕೆ. ಶೆಟ್ಟಿ, ರಾಧಾಕೃಷ್ಣ ಶೆಟ್ಟಿ, ಮೋಹನ್ ಬಿ ಶೆಟ್ಟಿ, ಅಜೆಕಾರು ಬಾಲಕೃಷ್ಣ ಶೆಟ್ಟಿ, ಕರ್ನೂರು ಶಂಕರ್ ಆಳ್ವ, ಸಮಾಜ ರತ್ನ ಲ| ಶಂಕರ್ ಕೆ. ಟಿ., ಯಶೋಧ ನಾಗರಾಜ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ನಾಗರಾಜ್ ಶೆಟ್ಟಿ ನಿರೂಪಿಸಿ ವಂದಿಸಿದರು.


Post a Comment