ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ವಿಧಿವಶ .ಸಾಮಾನ್ಯರಂತೆ ನಡೆದ ಒಂದು ಪ್ರಧಾನಿ ತಾಯಿಯ ಅಂತ್ಯಕ್ರೀಯೆ .
ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ವಿಧಿವಶರಾಗಿದ್ದಾರೆ.
ಅಹಮದಾಬಾದ್(ಗುಜರಾತ್): ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ, ಶತಾಯುಷಿ ಹೀರಾಬೆನ್ ವಿಧಿವಶರಾಗಿದ್ದಾರೆ.ಅನಾರೋಗ್ಯದ ಹಿನ್ನೆಲೆಯಲ್ಲಿ ಇಲ್ಲಿನ ಯು.ಎನ್.ಮೆಹ್ತಾ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಆ್ಯಂಡ್ ರೀಸರ್ಚ್ ಸೆಂಟರ್ ಆಸ್ಪತ್ರೆಗೆ ಕಳೆದ ಬುಧವಾರ ಹೀರಾಬೆನ್ ಅವರನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 100 ವರ್ಷ ವಯಸ್ಸಾಗಿತ್ತು.ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ನಿಧನಕ್ಕೆ ಗಣ್ಯರು ಕಂಬನಿ ಮಿಡಿಯುತ್ತಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಪೂಜ್ಯ ತಾಯಿ ಹೀರಾಬೆನ್ ಅವರು ಇಹಲೋಕ ತ್ಯಜಿಸಿದ ಸುದ್ದಿ ತಿಳಿದು ಅತ್ಯಂತ ಬೇಸರವಾಯಿತು. ದೇಶಕ್ಕೆ ಹೆಮ್ಮೆ ತಂದ ಪುತ್ರನಿಗೆ ಜನ್ಮ ನೀಡಿದ ಮಹಾತಾಯಿಗೆ ಸದ್ಗತಿ ಕೋರುತ್ತೇನೆ. ಪ್ರಧಾನಿಯವರಿಗೆ, ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ ಎಂದು ಟ್ವೀಟ್ ಮಾಡಿದ್ದಾರೆ.
ಸಮಾನ್ಯರಲ್ಲಿ ಸಾಮಾನ್ಯರಂತೆ ನಡೆದ ಒಂದು ಪ್ರಧಾನಿ ತಾಯಿಯ ಅಂತ್ಯಕ್ರೀಯೆ .
ಬೆಳಗ್ಗೆ 6.00 ಗಂಟೆ ಹೊತ್ತಿಗೆ ವಿಷಯ ಗೊತ್ತಾಯ್ತು. 9:30 ಅಷ್ಟು ಹೊತ್ತಿಗೆ ಎಲ್ಲಾ ಕೆಲಸಗಳೂ ಮುಗಿದೋಯ್ತು... ಕೇವಲ 3:30 ಗಂಟೆ ಅಷ್ಟೇ...ದೇಶದ ಜನಪ್ರಿಯ ಪ್ರದಾನಿಯೊಬ್ಬರ ತಾಯಿಯ ಅಂತ್ಯಕ್ರಿಯೆ ಯಾವುದೇ ಪ್ರಚಾರ, ಆಡಂಬರವಿಲ್ಲದೆ ಮುಗಿದೋಯ್ತು...!
ಬೆಳ್ಳಗ್ಗಿನಿಂದ ಸಂಜೆವರೆಗಿನ ಮಾಧ್ಯಮಗಳ ಲೈವ್ ಇಲ್ಲ..
ದೊಡ್ಡ ದೊಡ್ಡ ವ್ಯಕ್ತಿಗಳ ಭೇಟಿಗೆ ಅವಕಾಶ ಇಲ್ಲ ...
ದೊಡ್ಡ ಮಟ್ಟದಲ್ಲಿ ಶವಯಾತ್ರೆಗೆ ವ್ಯವಸ್ಥೆ ಇಲ್ಲ...
ರಸ್ತೆ ಹೆದ್ದಾರಿಗಳ ಟ್ರಾಫಿಕ್ ಜಾಮ್ ಇಲ್ಲ..
ಸಾರ್ವಜನಿಕ ದರ್ಶನಕ್ಕಾಗಿ ವ್ಯವಸ್ಥೆ ಇಲ್ಲ...
ಮಗನ ಅಭಿಮಾನಿಗಳ ಘೋಷಣೆಗಳ ಕೂಗಿಲ್ಲ...
ಅಂತ್ಯಸಂಸ್ಕಾರಕ್ಕಾಗಿ ಎಕರೆಗಟ್ಟಲೆ ಜಾಗದ ನೆಲಸಮ ಇಲ್ಲ...
ಶವದ ಮೇಲೆ ರಾಷ್ಟ್ರಧ್ವಜದ ಹೊದಿಕೆ ಇಲ್ಲ...
ಅಗ್ನಿಸ್ಪರ್ಶಕ್ಕೆ ಶ್ರೀಗಂಧದ ಕಟ್ಟಿಗೆಗಳಿಲ್ಲ...

Post a Comment