".

Header Ads

 ಮುಂಬೈ :,- ನಿರ್ಮಾಪಕ ನಿತಿನ್ ಮನ್​​​ಮೋಹನ್ ನಿಧನ

 




 ನಿರ್ಮಾಪಕ ನಿತಿನ್ ಮನ್​​​ಮೋಹನ್ ನಿಧನ - ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಕೊನೆಯುಸಿರು- ಆಘಾತದಲ್ಲಿ ಅಭಿಮಾನಿ ಬಳಗ.

ಖ್ಯಾತ ಚಲನಚಿತ್ರ ನಿರ್ಮಾಪಕ ನಿತಿನ್ ಮನ್ಮೋಹನ್ ಇಂದು ನಿಧನರಾಗಿದ್ದಾರೆ. ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಅವರು ಇಂದು ಕೊನೆಯುಸಿರೆಳೆ ದಿದ್ದಾರೆ. ವರದಿಗಳ ಪ್ರಕಾರ, ಹಲವಾರು ಆರೋಗ್ಯ ಸಮಸ್ಯೆ ಹಿನ್ನೆಲೆ ನಿತಿನ್ ಮನ್ಮೋಹನ್ ಆಸ್ಪತ್ರೆಯಲ್ಲಿಸುಮಾರು 15 ದಿನಗಳ ಕಾಲ ವೆಂಟಿಲೇಟರ್ನಲ್ಲಿದ್ದರು. 

ತೀವ್ರ ಹೃದಯಾಘಾತದಿಂದ ಬಳಲುತ್ತಿದ್ದಅವರನ್ನು ಡಿಸೆಂಬರ್ 3 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ 10 ಗಂಟೆಯ ಸುಮಾರಿಗೆ ಅವರ ಮೆದುಳಿನ ಅಸಹಜ ಪರಿಸ್ಥಿತಿ ನಂತರ ನಿಧನರಾದರು ಎಂದು ಅವರ ಮಗಳು ಪ್ರಾಚಿ ಮಾಹಿತಿ ನೀಡಿದ್ದಾರೆ. ವಿಷಯ ಕೇಳಿದ ಚಿತ್ರರಂಗ ಮತ್ತು ಅಭಿಮಾನಿ ಬಳಗ ಆಘಾತಕ್ಕೊಳಗಾಗಿದ್ದಾರೆ. 

 

Powered by Blogger.