".

Header Ads

ಉಡುಪಿ:- ಗ್ಯಾಸ್‌ ಸಿಲಿಂಡರ್‌ ಮಿತಿ: ಗೃಹ ಬಳಕೆಗೆ  ವಾರ್ಷಿಕ 15 ಗ್ಯಾಸ್‌ ಸಿಲಿಂಡರ್‌ ಮಾತ್ರ :ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ

 


ಗೃಹ ಬಳಕೆಗೆ  15 ಗ್ಯಾಸ್‌ ಸಿಲಿಂಡರ್‌ ಮಾತ್ರ  ಎಂಬ ನಿಯಮ ಜಾರಿಗೆ   

ಈ ಹಿಂದೆ ತಿಂಗಳಿಗೆ ಒಂದರಂತೆ 12 ಗ್ಯಾಸ್‌ ಸಿಲಿಂಡರ್‌ ವರ್ಷಕ್ಕೆ ಪಡೆಯುವ ನಿಯಮ ತಂದಾಗ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ಬಂದ ಹಿನ್ನೆಲೆಯಲ್ಲಿ ನಿರ್ದಿಷ್ಟ ಮಿತಿಯನ್ನು ಕೇಂದ್ರ ಸರಕಾರ ತೆರವುಗೊಳಿಸಿತ್ತು. ಕೆಲವು ಕುಟುಂಬಗಳಿಗೆ ಎರಡು ತಿಂಗಳಿಗೆ ಒಂದು ಗ್ಯಾಸ್‌ ಸಿಲಿಂಡರ್‌ ಬಳಕೆಗೆ ಸಾಕಾದರೆ ಇನ್ನು ಅನೇಕ ಕುಟುಂಬಗಳಿಗೆ ಪ್ರತೀ ತಿಂಗಳಿಗೆ ಎರಡರಿಂದ ಮೂರು ಗ್ಯಾಸ್‌ ಸಿಲಿಂಡರ್‌ ಬೇಕಾಗುತ್ತದೆ. ವಾರ್ಷಿಕ 12 ಸಿಲಿಂಡರ್‌ ಮಾತ್ರ ಎಂಬ ಮಿತಿ ಸಡಿಲಗೊಂಡ ಅನಂತರದಲ್ಲಿ ನಾವು ಕುಟುಂಬಕ್ಕೆ ಮಾಸಿಕ ಎಷ್ಟು ಬೇಕು ಅಷ್ಟು ಸಿಲಿಂಡರ್‌ ಮುಂಗಡ ಕಾದಿರಿಸಿಕೊಳ್ಳುತ್ತಿದ್ದೇವೆ. ಈಗ ಏಕಾಏಕಿ 15 ಸಿಲಿಂಡರ್‌ ಮಾತ್ರ ನೀಡಲಾಗುವುದು ಎಂಬ ನಿಯಮ ಮಾಡಿದ್ದಾರೆ.

 ಇದೀಗ ಮತ್ತೆ ವರ್ಷಕ್ಕೆ 15 ಸಿಲಿಂಡರ್‌ಗಳನ್ನು ಮಾತ್ರ ಪಡೆದುಕೊಳ್ಳಬೇಕು ಎಂಬ ನಿಯಮ ಬಂದಿರುವ ಹಿನ್ನೆಲೆಯಲ್ಲಿ 15 ಗ್ಯಾಸ್‌ ಸಿಲಿಂಡರ್‌ ಮಿತಿ ದಾಟಿರುವವರಿಗೆ ಗ್ಯಾಸ್‌ ಸಿಲಿಂಡರ್‌ ಬುಕ್‌ ಮಾಡಲು ಸಾಧ್ಯವಾಗುತ್ತಿಲ್ಲ ಮತ್ತು ಪೂರೈಕೆಯೂ ಆಗುತ್ತಿಲ್ಲ.

 
 ಈಗಾಗಲೇ 15 ಸಿಲಿಂಡರ್‌ ಈ ವರ್ಷ ಬಳಕೆ ಮಾಡಿದವರೆ ಮುಂದಿನ ಎಪ್ರಿಲ್‌ ತನಕ ಸಿಲಿಂಡರ್‌ ನೀಡಲಾಗುವುದಿಲ್ಲ ಎಂದೂ ಹೇಳಲಾಗುತ್ತಿದೆ. ಸರಿಯಾದ ಮಾಹಿತಿ ನೀಡದೆ ಇಂತಹ ನಿರ್ಬಂಧ ಹಾಕುವುದು ಸರಿಯಲ್ಲ. ಇದರಿಂದ ಅನೇಕ ಕುಟುಂಬಕ್ಕೆ ಸಮಸ್ಯೆಯಾಗಲಿದೆ ಎಂದು ಕೆಲವರು ಆಕ್ರೋಶ ಹೊರ ಹಾಕಿದ್ದಾರೆ.

 ವಾಣಿಜ್ಯ ಉದ್ದೇಶಕ್ಕೆ ಬಳಸುವ ಗ್ಯಾಸ್‌ ಸಿಲಿಂಡರ್‌ಗಳಿಗೆ ಯಾವುದೇ ಮಿತಿ ಇಲ್ಲ ಎಂದು ಬಾಲಾಜಿ ಗ್ಯಾಸ್‌ ಏಜೆನ್ಸಿ ಮಾಲಕ ರಾಘವೇಂದ್ರ ಆಚಾರ್ಯ ತಿಳಿಸಿದ್ದಾರೆ

Powered by Blogger.