ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜ ಕಲ್ಯಾಣ ಯೋಜನೆ ಯಡಿಯಲ್ಲಿ ವೈದ್ಯಕೀಯ ಮತ್ತು ವಿವಾಹ ಕಾರ್ಯಕ್ಕೆ ಸಹಾಯ ಹಸ್ತ
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜ ಕಲ್ಯಾಣ ಯೋಜನೆಯಡಿ ಈ ತಿಂಗಳು ಸುಮಾರು 35 ಲಕ್ಷದಿಂದ 40 ಲಕ್ಷ ರೂಪಾಯಿವರೆಗೆ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳಿಗೆ ವಿವಿಧ ರೀತಿಯಲ್ಲಿ ಸಹಕಾರವನ್ನು ನೀಡುತ್ತಾ ಬಂದಿದ್ದು ಅರ್ಜಿದಾರರಿಗೆ ಅಗತ್ಯವಾಗಿ ವೈದ್ಯಕೀಯ ಮದುವೆ ಮತ್ತಿತರ ಕಾರ್ಯಗಳಿಗೆ ಸಹಾಯ ಹಸ್ತವನ್ನು ನೀಡುವುದಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಮತ್ತು ಪದಾಧಿಕಾರಿಗಳು ತಡ ಮಾಡದೆ ಸಮಯದಲ್ಲಿ ನೀಡುತ್ತಾ ಬಂದಿದ್ದಾರೆ. ಈ ಈ ಬಾರಿ ಅಗತ್ಯ ಇರುವ ಫಲಾನುಭವಿಗಳಿಗೆ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಕೂಡಲೇ ಸ್ಪಂದಿಸಿ ಅವರಿಗೆ ಅಗತ್ಯ ಇರುವ ಮೊತ್ತವನ್ನು ನೀಡಿದ್ದಾರೆ .
ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯರಾದ ರಾಧಾಕೃಷ್ಣ ಶೆಟ್ಟಿ ಚೆಲ್ಯಡ್ಕ ಅಧ್ಯಕ್ಷರು ಬಂಟರ ಸಂಘ ವಿಟ್ಲ ವಲಯ ಇವರ ಶಿಫಾರಸ್ಸಿನ ಮೇರೆಗೆ ಬಂಟ್ವಾಳದ ವಿಟ್ಲ ಕಸಬಾ ಗ್ರಾಮದ ನಿವಾಸಿ ಕ್ರಿಶ್ ಶೆಟ್ಟಿ ಯವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಅದರ ತುರ್ತು ಚಿಕಿತ್ಸೆಗೆ ಮಂಜೂರು ಮಾಡಿದ ಧನಸಹಾಯದ ಚೆಕ್ಕನ್ನು ಅಧ್ಯಕ್ಷರ ಸೂಚನೆಯಂತೆ ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್ ಇವರು ಪಲಾನುಭವಿಯ ತಂದೆ ವಸಂತ್ ಶೆಟ್ಟಿಯವರಿಗೆ ಒಕ್ಕೂಟದ ಕಚೇರಿಯಲ್ಲಿ ಹಸ್ತಾ0ತರಿಸಿದರು.*
: *ಮೂಡಬಿದ್ರೆಯ ಪಡುಕೊಣಾಜೆ ಗ್ರಾಮದ ನಿವಾಸಿ ವಿನಯ್ ಶೆಟ್ಟಿಯವರ ಕೈ ಮೂಳೆ ಮುರಿತವಾಗಿದ್ದು ಅದರ ಶಸ್ತ್ರಚಿಕಿತ್ಸೆಗೆ ಮಂಜೂರಾದ ಧನಸಹಾಯದ ಚೆಕ್ಕನ್ನು ಒಕ್ಕೂಟದ ಕಚೇರಿಯಲ್ಲಿ ಹಸ್ತಾ0ತರಿಸಿದರು.ಈ ಸಂಧರ್ಭದಲ್ಲಿ ಒಕ್ಕೂಟದ ಆಹ್ವಾನಿತ ಸದಸ್ಯರಾದ ರವಿ ಶೆಟ್ಟಿ ಜತ್ತಬೆಟ್ಟು, ಮತ್ತು ಪಲಾನುಭವಿಯ ಕುಟುಂಬಸ್ಥರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬಂಟರ ಸಂಘ ವಿಟ್ಲ ವಲಯ ಇವರ ಶಿಫಾರಸ್ಸಿನ ಮೇರೆಗೆ ಬಂಟ್ವಾಳದ ಪೆರುವಾಯಿ ಗ್ರಾಮದ ನಿವಾಸಿ ವಿಠಲ್ ಶೆಟ್ಟಿಯವರ ಮಗಳ ಮದುವೆಗೆ ಮಂಜೂರಾದ ಧನಸಹಾಯದ ಚೆಕ್ಕನ್ನು ಒಕ್ಕೂಟದ ಕಚೇರಿಯಲ್ಲಿ ಹಸ್ತಾ0ತರಿಸಿದರು.
ಒಕ್ಕೂಟದ ಮಹಾ ಪೋಷಕ ಸದಸ್ಯರಾದ ಶಶಿಧರ್ ಶೆಟ್ಟಿ ಇನ್ನಂಜೆ ಯವರ ಶಿಫಾರಸ್ಸಿನ ಮೇರೆಗೆ ಉಡುಪಿಯ ಕಾಡುಬೆಟ್ಟು ಗ್ರಾಮದ ನಿವಾಸಿ ಭಾಸ್ಕರ್ ಶೆಟ್ಟಿಯವರ ಮಗಳ ಮದುವೆಗೆ ಮಂಜೂರಾದ ಧನಸಹಾಯದ ಚೆಕ್ಕನ್ನು ಒಕ್ಕೂಟದ ಕಚೇರಿಯಲ್ಲಿ ಹಸ್ತಾ0ತರಿಸಿದರು.
ಒಕ್ಕೂಟದ ವಿಶೇಷ ಆಹ್ವಾನಿತರಾದ ಪಟ್ಲ ಸತೀಶ್ ಶೆಟ್ಟಿಯವರ ಶಿಫಾರಸ್ಸಿನ ಮೇರೆಗೆ ಬಂಟ್ವಾಳದ ಕರೋಪಾಡಿ ಗ್ರಾಮದ ನಿವಾಸಿ ರಘುನಾಥ್ ರವರ ಮಗಳ ಮದುವೆಗೆ ಮಂಜೂರಾದ ಧನಸಹಾಯದ ಚೆಕ್ಕನ್ನು ಒಕ್ಕೂಟದ ಕಚೇರಿಯಲ್ಲಿ ಹಸ್ತಾ0ತರಿಸಿದರು.




Post a Comment