".

Header Ads

ಉಡುಪಿ ಜಿಲ್ಲೆಯಾದ್ಯಂತ ಹೊಸ ವರ್ಷದ ಆಚರಣೆಗೆ ಮುನ್ನೆಚ್ಚರಿಕಾ ಕ್ರಮ !!! :- ಉಡುಪಿ ಜಿಲ್ಲಾ ಪೊಲೀಸ್‌

ನೋಡ ನೋಡುತ್ತಲೇ ಹೊಸವರುಷ ಬಂದೇ ಬಿಡ್ತು ಹೊಸ ವರುಷವನ್ನು   ಸ್ವಾಗತಿಸಲು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. 

ಈ ನಿಟ್ಟಿನಲ್ಲಿ  ಉಡುಪಿ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ  ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಉಡುಪಿ ಜಿಲ್ಲಾ ಪೊಲೀಸ್‌ ಇಲಾಖೆ ವತಿಯಿಂದ ಹೆಚ್ಚುವರಿಯಾಗಿ ಅಧಿಕಾರಿ ಹಾಗೂ  ಸಿಬ್ಬಂದಿಯವರನ್ನು ಬಂದೋಬಸ್ತ್‌ ಕರ್ತವ್ಯಕ್ಕೆ ನೇಮಿಸಿ, ಕೆಲವೊಂದು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

ಅದರಂತೆ ಡಿ.31 ರಿಂದ ಜ.1 ರ 1 ಗಂಟೆ ವರೆಗೆ   ಜಿಲ್ಲೆಯಾದ್ಯಂತ ಹೊಸ ವರ್ಷದ  ಆಚರಣೆ ನಡೆಸುವ ಸಮಯ ಕಾರ್ಯಕ್ರಮಗಳ ಸಂಘಟಕರು ಮತ್ತು ಸಾರ್ವಜನಿಕರು ನೀಡಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ.

 ಎಲ್ಲಾ ರೀತಿಯ ಆಚರಣೆಗಳು ಕೊಟ್ಟ   ಗಂಟೆಯ ಒಳಗಾಗಿ  ಮುಕ್ತಾಯಗೊಳ್ಳತಕ್ಕದ್ದು. ಹಾಗೂ  ಕಡ್ಡಾಯವಾಗಿ  ಕೋವಿಡ್‌ 19 ಗೆ ಸಂಬಂಧಪಟ್ಟಂತೆ ನೀಡಲಾದ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಹೊಸ ವರ್ಷಾಚರಣೆ ವೇಳೆ ತಪ್ಪದೇ ಪಾಲಿಸಬೇಕು ಎಂದು ತಿಳಿಸಲಾಗಿದೆ.

 ಹಾಗೂ ಒಳಾಂಗಣ ಕಾರ್ಯಕ್ರಮ, ಪಬ್ಬ್‌, ರೆಸ್ಟೋರೆಂಟ್ವ್‌ ಕ್‌, ರೆಸಾರ್ಟ್‌ ಮುಂತಾದ ಕಡೆಗಳಲ್ಲಿ ಅದರ ಅತಿಥಿಗಳ ಸಾಮರ್ಥ್ಯ ಮೀರದಂತೆ ಜನರು  ಇರುವಂತೆ ನೋಡಿಕೊಳ್ಳಬೇಕು.  ಸಾರ್ವಜನಿರಿಗೆ ಈವೆಂಟ್ಸ್‌ ಗಳನ್ನು ಆಯೋಜಿಸುವಾಗ ಸಂಬಂಧಪಟ್ಟ ಸ್ಥಳೀಯ ಪೊಲೀಸ್‌ ಠಾಣೆಗಳಿಗೆ  ಕಡ್ಡಾಯವಾಗಿ ಮಾಹಿತಿ ನೀಡಬೇಕು. ಹಾಗೂ ಕಾರ್ಯಕ್ರಮಗಳ ಆಯೋಜಕರು ಭದ್ರತಾ ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ಸ್ವಯಂಸೇವಕರು, ಪುರುಷ  ಮತ್ತು ಮಹಿಳಾ ಭದ್ರತಾ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕು. ಜೊತೆಗೆ ವಾಹನ ಪಾರ್ಕಿಂಗ್‌ಗೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಬೇಕು.

ಬಸ್‌ ಸ್ಟಾಂಡ್‌, ಸಮುದ್ರ ತೀರ, ರಸ್ತೆ, ಪುಟ್‌ ಪಾತ್‌, ಗಾರ್ಡನ್‌ ಮತ್ತು ಇತರೇ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆಯ ಯಾವುದೇ  ಕಾರ್ಯಕ್ರಮಗಳನ್ನು ನಡೆಸಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಅಮಲು ಅಥವಾ ಮದ್ಯದ ನಶೆಯಲ್ಲಿ ಆಚರಣೆ ಮಾಡುವವರ ವಿರುದ್ಧ ಹಾಗೂ  ಹೊಸ ವರ್ಷಾಚರಣೆಯ ನೆಪದಲ್ಲಿ ಜನರೊಂದಿಗೆ/ಮಹಿಳೆಯರೊಂದಿಗೆ ಅನುಚಿತ ವರ್ತನೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ  ಜರಗಿಸಲಾಗುವುದು. 

ಲೌಡ್‌ ಸ್ವೀಕರ್‌ ಗಳನ್ನು ಸರ್ವೋಚ್ಚ ನ್ಯಾಯಾಲಯ ಮತ್ತು ಸರ್ಕಾರದ ಆದೇಶಗಳನ್ನು ಉಲ್ಲಂಘನೆಯಾಗದಂತೆ ಮತ್ತು ಶಬ್ದ ಮಾಲಿನ್ಯ ಆಗದಂತೆ  ಧ್ವನಿವರ್ಧಕದ ಡೆಸಿಬಲ್‌ ಮಿತಿಯಲ್ಲಿ ಇಟ್ಟು ಆಚರಣೆ ನಡೆಸಬೇಕು. ವರ್ಷಾಚರಣೆ ಸಮಯ ಅಕ್ಕಪಕ್ಕದ ಜನರಿಗೆ ತೊಂದರೆಯಾಗದಂ್ಹತೆ ವಿಶೇಷವಾಗಿ  ಆಸ್ಪತ್ರೆ/ಅಪಾಟ್‌ಮ್ಮೆಣಟ್‌ಗಳಲ್ಲಿ ವಾಸಿಸುವ ಹಿರಿಯ ಜನರಿಗೆ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸೂಕ್ತ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ  ನೀಡಲಾಗಿದೆ.

Powered by Blogger.