".

Header Ads

ಶ್ರೀ ಗುರುದೇವ ನಿತ್ಯಾನಂದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಶ್ರದ್ದೆ ಭಕ್ತಿಯಿಂದ ಜರುಗುತ್ತಿರುವ 3 ನೇ ಭಜನಾ ಸಪ್ತಾಹ

ಮುಂಬಯಿ ಉಪನಗರ ಅಂಧೇರಿ ಸಾಕಿನಾಕಾದ ತಿಲಕ್ ನಗರದಲ್ಲಿರುವ ಶ್ರೀ ಗುರುದೇವ ನಿತ್ಯಾನಂದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಶ್ರೀ ದೇವಾದತ್ತ ಭುವಾಜಿ ( ನಾರಾಯಣ ಆರ್ ಶೆಟ್ಟಿ) ಮತ್ತು ಶ್ರೀಮತಿ ಮೀನಾಕ್ಷಿ ಎನ್ ಶೆಟ್ಟಿ ಯವರ ಸವಿ ನೆನಪಿನ ಪ್ರಯುಕ್ತ 3 ನೇ   ಭಜನಾ ಸಪ್ತಾಹ 2022 ಡಿಸೆಂಬರ್ 25 ರ ಬೆಳಿಗ್ಗೆ 6 ಗಂಟೆ ಯಿಂದ ಪ್ರಾರಂಭವಾಗಿದೆ ಇದು 2023 ಜನವರಿ 1 ರ ಬೆಳಿಗ್ಗೆ 6 ಗಂಟೆಯವರಗೆ ಜರುಗಲಿರುವುದು.










































ಮುಂಬಯಿ ನಗರದಲ್ಲಿ ಪ್ರಥಮವಾಗಿ ಮತ್ತು ಎರಡು ಸಲ ಭಜನಾ ಸಪ್ತಾಹವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದ ಶ್ರೀ ಗುರುದೇವ ನಿತ್ಯಾನಂದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಇದೀಗ 3 ನೇ ಬಾರಿಗೆ ಒಂದು ವಾರಗಳ ಕಾಲ  ನಡೆಯಲಿರುವ ಈ ಅಹೋರಾತ್ರಿ ಭಜನಾ ಸಪ್ತಾಹದಲ್ಲಿ ಮುಂಬಯಿ ಮಹಾನಗರ, ಉಪನಗರಗಳ ಭಜನಾ ಮಂಡಳಿಗಳಲ್ಲದೆ ತವರೂರ ಭಜನಾ ಮಂಡಳಿಗಳು ಆಗಮಿಸಿ ಹರಿನಾಮ ಸಂಕೀರ್ತನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 

ಶ್ರೀ ವಿಘ್ನೇಶ್ವರ ಭಜನಾ ಮಂಡಳಿ ಬೋರಿವಲಿ, ಶ್ರೀ ರಾಧಾಕೃಷ್ಣ ಭಜನಾ ಮಂಡಳಿ ಡೊಂಬಿವಲಿ, ಶ್ರೀ ಬ್ರಹ್ಮಲಿಂಗೇಶ್ವರಿ ಪೂಜಾ ಸಮಿತಿ ಭಾಂಡೂಪ್, ಶ್ರೀ ರಾಜರಾಜೇಶ್ವರಿ ಮಿತ್ರ ಭಜನಾ ಮಂಡಳಿ ಪೊಳಲಿ, ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಪೊಳಲಿ, ದತ್ತಾತ್ರೇಯ ದುರ್ಗಂಬಿಕಾ ಭಕ್ತ ವೃಂದ ಅಸಲ್ಪ, ಶ್ರೀ ವಿದ್ಯಾದಾಯಿನಿ ಭಜನಾ ಮಂಡಳಿ ಫೋರ್ಟ್, ಶ್ರೀ ಗೀತಾಂಬಿಕ ಭಜನಾ ಮಂಡಳಿ ಅಸಲ್ಪ, ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಸಾಕಿನಾಕಾ, ರೋಹಿತಾಕ್ಷ ಶೆಟ್ಟಿ ಮತ್ತು ಬಳಗ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಮರೋಲ್ ಪೈಪ್ ಲೈನ್, ಶ್ರೀ ವರದ ಸಿದ್ದೀವಿನಾಯಕ ಭಜನಾ ಮಂಡಳಿ ಡೊಂಬಿವಲಿ, ಓಂ ಶಕ್ತಿ ಭಜನಾ ಮಂಡಳಿ ಕಲ್ಯಾಣ್, ಶ್ರೀ ಶನೀಶ್ವರ ಭಜನಾ ಮಂಡಳಿ ನೆರುಲ್, ಶ್ರೀ ಜಗದಂಬಾ ಕಾಲಭೈರವ  ಮಹಿಳಾ ಭಜನಾ ಮಂಡಳಿ ಜೊಗೇಶ್ವರಿ, ಸಾಫಲ್ಯ ಸೇವಾ ಸಂಘ ಭಜನಾ ಮಂಡಳಿ, ಶ್ರೀ ಅಯ್ಯಪ್ಪ ಭಜನಾ ಮಂಡಳಿ ಫೋರ್ಟ್, ಪಂಡಿತ್ ಕಿರಣ್ ಕಾಮತ್ ಮತ್ತು ಬಳಗ,  ಶ್ರೀ ಜಗದಂಬಾ ಕಾಲಭೈರವ  ಭಜನಾ ಮಂಡಳಿ ಜೊಗೇಶ್ವರಿ, ಶ್ರೀ ನಿತ್ಯಾನಂದ ಭಜನಾ ಮಂಡಳಿ ಸಾಕಿನಾಕ, ಶ್ರೀ ವಿಜಯ್ ಶೆಟ್ಟಿ ಮೂಡುಬೆಳ್ಳೆ, ಶ್ರೀ ನಿತ್ಯಾನಂದ ಮಹಿಳಾ ಭಜನಾ ಮಂಡಳಿ ಭಾಂಡೂಪ್, ಶ್ರೀ ಗುರುರಾಜ್ ಮಾನವ ಜಾಗೃತಿ ಕೇಂದ್ರ ವಸೈ, ಶ್ರೀ ಭ್ರಮರಾಂಬಿಕ ಭಜನಾ ಮಂಡಳಿ ಡೊಂಬಿವಲಿ, ಶ್ರೀ ಶನೀಶ್ವರ ಭಜನಾ ಮಂಡಳಿ ಬಟ್ಟಿಪಾಡ ಭಾಂಡೂಪ್, ಶ್ರೀ ಭ್ರಮರಾಂಬಿಕ ಭಜನಾ ಮಂಡಳಿ ಸಾಕಿನಾಕ, ಶ್ರೀ ಆದಿತ್ಯ ಖವನೇಕಾರ್ ಮತ್ತು ಬಳಗ, ಸ್ನೇಹಲ್ ಸುನಿಲ್ ಪಾಟೀಲ್ ಮತ್ತು ಬಳಗ, ಶ್ರೀ ಮಣಿಕಂಠ ಭಕ್ತ ವೃಂದ ಸಾಕಿನಕ, ಶ್ರೀ ವಿಠ್ಠಲ ಭಜನಾ ಮಂಡಳಿ ಮಿರಾರೋಡ್, ಶ್ರೀ ಮಹಾಶೇಷ ರುಂಡಮಾಲಿನಿ ಭಜನಾ ಮಂಡಳಿ ಪೊವಾಯಿ, ಶ್ರೀ ಪಶ್ಚಿಮ ವಿಭಾಗ ನವರಾತ್ರೋತ್ಸವ ಮಂಡಳಿ ಡೊಂಬಿವಲಿ, ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ ಕೋಪರ್, ಶ್ರೀ ಅಯ್ಯಪ್ಪ ಭಜನಾ ಮಂಡಳಿ ಅಜ್ಜೆಪಾಡ ಡೊಂಬಿವಲಿ, ಶ್ರೀ ಮಹತೋಬಾರ ಶನೀಶ್ವರ ಭಜನಾ ಮಂಡಳಿ ಮಲಾಡ್, ಶ್ರೀ ಮಹಾಕಾಳಿ ಭಜನಾ ಮಂಡಳಿ ಸಂತಕ್ರೂಜ್, ಮೊದಲಾದ ಮಂಡಳಿಗಳು ಹರಿನಾಮ ಸಂಕರ್ತನೆಯನ್ನು ಭಕ್ತಿಯಿಂದ ನಡೆಸಿಕೊಟ್ಟಿದ್ದು, ಇನ್ನುಳಿದ ದಿನಗಳಲ್ಲಿ ಇನ್ನಷ್ಟು ಮಂಡಳಿಗಳು ಈ ಭಜನ ಸಪ್ತಾಹ ದಲ್ಲಿ ಬಾಗಿಯಾಗಲಿವೆ.

ಎಲ್ಲಾ ಭಕ್ತಾದಿಗಳು, ಭಜನಾ ಪ್ರೀಯರು ಈ ಅಖಂಡ ಹರಿನಾಮ ಸಂಕೀರ್ತನ ಸಪ್ತಾಹದ ಇನ್ನುಳಿದ ದಿನಗಳಲ್ಲಿ ಪಾಲ್ಗೊಂಡು ತೀರ್ಥ ಪ್ರಸಾದ ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಗುರುದೇವ ನಿತ್ಯಾನಂದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಪರವಾಗಿ ಶ್ರೀ ನಿತ್ಯಪ್ರಕಾಶ್ ಎನ್ ಶೆಟ್ಟಿ ಹಾಗೂ ಶ್ರೀಮತಿ ರಾಜೇಶ್ವರಿ ಎಮ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Powered by Blogger.