".

Header Ads

ಸಚಿವ ಸುನಿಲ್ ಕುಮಾರ್ ಸ್ನೇಹ ಮಿಲನ, ಶ್ರೀನಿವಾಸ ಕಲ್ಯಾಣೋತ್ಸವದ ಜಂಟಿ ಕಾರ್ಯಕ್ರಮದ ಸಮಾಲೋಚನಾ ಸಭೆ


ಕಾರ್ಯುಕ್ರಮಗಳ ಯಸಸ್ಸಿ ನಮ್ಮೆಲ್ಲರ ಜವಾಬ್ಧಾರಿ - ಎರ್ಮಾಳ್ ಹರೀಶ್ ಶೆಟ್ಟಿ

(ಚಿತ್ರ ವರದಿ  ದಿನೇಶ್ ಕುಲಾಲ್)

ಮುಂಬಯಿ : ಕಾರ್ಕಳದ ಜನಪ್ರಿಯ ಶಾಸಕ ನಮ್ಮೆಲ್ಲರ ಆತ್ಮೀಯರಾಗಿರುವ ಸುನಿಲ್ ಕುಮಾರ್ ರವರ ಸಾಧನೆಗಳು ಮತ್ತು ಅವರ ಸೇವಾ ಕಾರ್ಯಗಳನ್ನು ನಾವೆಲ್ಲ ತುಳು ಕನ್ನಡಿಗರು ಬಹಳ ಹತ್ತಿರದಿಂದ ಕಂಡಿದ್ದೇವೆ ಅವರನ್ನು ಮುಂಬಯಿಯಲ್ಲಿ ಅಭಿನಂದಿಸುವುದು ಮುಂಬಯಿಯ ಜನತೆಗೆ ಅಭಿಮಾನ, ಇದಕ್ಕೆ ನಮ್ಮೆಲ್ಲರ ಉಪಸ್ಥಿತಿ ಅಗತ್ಯ ಹಾಗೂ ಫೆ, 5 ರಂದು ಬೊರಿವಲಿ ಪಶ್ಚಿಮದ ಚಿಕ್ಕುವಾಡಿಯ ಶ್ರೀ ಬಾಳಾ ಸಾಹೇಬ್ ಠಾಕ್ರೆ ಉದ್ಯಾನದಲ್ಲಿ ನಡೆಯಲಿರುವ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮವು ಲಕ್ಷ ಭಕ್ತರನ್ನು ಒಗ್ಗೂಡಿಸುವ ಯೋಜನೆಯಿದೆ. ಅದಕ್ಕೆ ಸಹಸ್ರ ಸಂಖ್ಯೆಯಲ್ಲಿ ತುಳು ಕನ್ನಡಿಗರು ಪಾಲ್ಗೊಳ್ಳಬೇಕು . ಈ ಎರಡು ಕಾರ್ಯುಕ್ರಮಗಳ ಯಸಸ್ಸಿಗ್ಗೆ ನಾವೆಲ್ಲರೂ ಜವಾಬ್ಧಾರರಾಗೆಬೇಕೆಂದು   ಸಂಸದ ಗೋಪಾಲ ಶೆಟ್ಟಿಯವರ ತುಳು ಕನ್ನಡಿಗರ ಅಭಿಮಾನಿಗಳ ಬಳಗದ ಅಧ್ಯಕ್ಷರಾದ ಎರ್ಮಾಳ್ ಹರೀಶ್ ಶೆಟ್ಟಿ ನುಡಿದರು.


ಡಿ. 29 ರಂದು ಕಾಂದಿವಲಿ ಪಶ್ಚಿಮದ ಮಹಾವೀರ್ ನಗರದಲ್ಲಿರುವ ಕಮಲಾ ವಿಹಾರ್ ಸ್ಪೋರ್ಟ್ಸ್ ಕ್ಲಬ್  ನಲ್ಲಿ ಮುಂಬಯಿಯಲ್ಲಿ  ಜ. 2 ರಂದು, ದಹಿಸರ್ ಚೆಕ್ನಾಕಾದ ಪ್ರಸಾದ್ ಇಂಟರ್ನೇಷನಲ್ ಹೋಟೇಲಿನ ಸಮೀಪದಲ್ಲಿರುವ ಲತಾ ಮಂಗೇಸ್ಕರ್ ನಾಟ್ಯಗ್ರಹದಲ್ಲಿ ನಡೆಯಲಿರುವ ಕರ್ನಾಟಕ ಸರಕಾರದ ಮಾನ್ಯ ಮಂತ್ರಿಗಳಾದ  ವಿ ಸುನಿಲ್ ಕುಮಾರ್ ರವರಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ಮತ್ತು ಫೆ, 5 ರಂದು ಬೊರಿವಲಿ ಪಶ್ಚಿಮದ ಚಿಕ್ಕುವಾಡಿಯ ಶ್ರೀ ಬಾಳಾ ಸಾಹೇಬ್ ಠಾಕ್ರೆ ಉದ್ಯಾನದಲ್ಲಿ ನಡೆಯಲಿರುವ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದ ಬಗ್ಗೆ ಚರ್ಚಿಸಿ ಅದರ ರೂಪರೇಷೆಗಳನ್ನು ನಿರ್ಮಿಸಲು ತುಳು ಕನ್ನಡಿಗರ ಸಮಾಲೋಚನಾ ಸಭೆಯನ್ನು ನಡೆಸಲಾಗಿದ್ದು ಈ ಸಭೆಯಲ್ಲಿ ಮಾತನಾಡುತ್ತಾ ಎರ್ಮಾಳ್ ಹರೀಶ್ ಶೆಟ್ಟಿ ಯವರು ಸುನಿಲ್ ಕುಮಾರ್ ಅವರು ಎಲ್ಲರಿಗೂ ಬೇಕಾದವರು, ಅವರಿಗೆ ಇಲ್ಲಿ ಅನೇಕ ಅಭಿಮಾನಿಗಳಿದ್ದು ಈ ಕಾರ್ಕಕ್ರಮಕ್ಕೆ ರಾಜ್ಯ ಹಾಗೂ ಕೇಂದ್ರದ ಮಂತ್ರಿಗಳು ಆಗಮಿಸಲಿದ್ದು ಈ ಎರಡೂ ಕಾರ್ಯಕ್ರಮಗಳಿಗೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಸಹಕರಿಸಬೇಕು ಎಂದರು.

ಸುನಿಲ್ ಕುಮಾರ್ ಅಭಿಮಾನಿ ಬಳಗದ ಪ್ರಮುಖ ಸಂಘಟಕರಾದ ಮಹೇಶ್ ಶೆಟ್ಟಿ ತೆಳ್ಳಾರ್ ಮಾತನಾಡುತ್ತಾ ಕೊರೋನಾ ಸಮಯದಲ್ಲಿ ಮುಂಬಯಿಗರಿಗೆ ಊರಿಗೆ ಹೋಗಲು ಕರ್ನಾಟಕ ಸರಕಾರವು ಕೆಲವು ನಿರ್ಬಂದಗಳನ್ನು  ಜಾರಿಗೆ ತಂದಿದ್ದು ಅದರಿಂದ ಮುಂಬಯಿ ತುಳು ಕನ್ನಡಿಗರಿಗೆ ನಮ್ಮ ಬೇಡಿಕೆ ಮೇರೆಗೆ ಯಾವುದೇ ಅನಾನುಕೂಲವಿಲ್ಲದೆ ಮುಂಬ ತುಳು ಕನ್ನಡಿಗರಿಗೆ ಅನುಕೂಲತೆ ಮಾಡಿಸಿಕೊಡುವಲ್ಲಿ ಅವರು ದುಡಿದಿದ್ದು ಮಾತ್ರವಲ್ಲ ಕಾರ್ಕಳದ ಅಭಿವೃದ್ದಿಯ ರೂವಾರಿಯಾದ ಕರ್ನಾಟಕದ ಸಚಿವರಾದ  ಸುನಿಲ್ ಕುಮಾರ್ ಅವರನ್ನು ನಾವೆಲ್ಲರೂ ಅಧಿಕ ಸಂಖ್ಯೆಯಲ್ಲಿ ಸೇರಿ ಅಭಿನಂದಿಸೋಣ ಎಂದರು.

ಕಾಂದಿವಲಿ ಪಶ್ಚಿಮದ ಬಾಲಾಜಿ ಮಂದಿರದ ಪುರೋಹಿತರಾದ ಗುರುನಾಥ್ ಗುರೂಜಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಕಲ್ಯಾನ ಉತ್ಸವದ ಬಗ್ಗೆ ಅದರಲ್ಲಿ ಸೇರಿಕೊಂಡಾಗ ನಮ್ಮ ಬದುಕು ಪಾವನವಾಗುತ್ತದೆ ಎಂದರು.


ವೇದಿಕೆಯಲ್ಲಿ ಉಪಸ್ಥಿತರಿದ್ದ ಬಂಟರ ಸಂಘ ಮುಂಬಯಿಯ ಜೊತೆ ಕೋಶಾಧಿಕಾರಿ ಮುಂಡಪ್ಪ ಎಸ್ ಪಯ್ಯಡೆ, ಆಹಾರ್ ನ ಅಧ್ಯಕ್ಷರಾದ ಶಿವಾನಂದ ಶೆಟ್ಟಿ, ಉಪಾಧ್ಯಕ್ಷ ಡಾ. ಸತೀಶ್ ಶೆಟ್ಟಿ, ಬಂಟರ ಸಂಘ ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ನೆಟ್ಟಿ ಮುದ್ದಣ್ಣ ಶೆಟ್ಟಿ,  ಪ್ರಾದೇಶಿಕ ಸಮಿತಿಯ ಸಂಚಾಲಕ ರವೀಂದ್ರ ಶೆಟ್ಟಿ, ಬಿಲ್ಲವರ ಅಸೋಷಿಯೇಶನ ಕಾಂದಿವಲಿ ಸ್ಥಳೀಯ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ, ಬಾರತ್ ಬ್ಯಾಂಕಿನ ನಿರ್ದೇಶಕ ಗಂಗಾಧರ ಜೆ ಪೂಜಾರಿ, ಬಂಟರ ಸಂಘ ಮತ್ತು ಬೋರಿವಲಿಯ  ಮಾಜಿ ನಗರ ಸೇವಕ ಶಿವಾನಂದ ಶೆಟ್ಟಿ ಉಪಸ್ಥಿತರಿದ್ದು ಈ ಎರಡು ಭ್ರಹತ್ ಕಾರ್ಯಕ್ರಮಗಳ ಬಗ್ಗೆ ಸೂಕ್ತ ಸಲಹೆ ಸೂಚನೆಯಿತ್ತು  ತುಳು ಕನ್ನಡಿಗರು ಅಧಿಕ ಸಂಖೆಯಲ್ಲಿ ಬಾಗವಹಿಸುವಂತೆ ವಿನಂತಿಸಿದರು.

ಸಭೆಯಲ್ಲಿ ಚಾರ್ಕೋಪ್ ಕನ್ನಡ ಬಳಗದ ಅಧ್ಯಕ್ಷರಾದ ಕೃಷ್ನ ಶೆಟ್ಟಿ, ಬಿಲ್ಲವರ ಅಸೋಷಿಯೇಶನ ಕಾಂದಿವಲಿ ಸಮಿತಿಯ ಕಾರ್ಯಾಧ್ಯಕ್ಷ ಯೋಗೇಶ್ ಹೆಜ್ಮಾಡಿ, ತುಳು ಸಂಘ ಬೊರಿವಲಿ ಯ ಪ್ರಧಾನ ಕಾರ್ಯದರ್ಶಿ ರಜಿತ್ ಸುವರ್ಣ,  ವಿಜಯ ಭಂಡಾರಿ, ಪ್ರೇಮನಾಥ ಕೋಟ್ಯಾನ್ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ಸಭೆಯನ್ನು ರಘುನಾಥ್ ಎನ್. ಶೆಟ್ಟಿ  ಅವರು ನಿರ್ವಹಿಸಿದರು
Powered by Blogger.