ಗುಂಡ್ಲುಪೇಟೆಯಲ್ಲಿ ಹಕ್ಕಿ ಜ್ವರ ಆತಂಕ: 100ಕ್ಕೂ ಹೆಚ್ಚು ಕೋಳಿ ಸಾವು
ನೆರೆಯ ರಾಜ್ಯ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗುಂಡ್ಲುಪೇಟೆ ತಾಲೂಕಿನ ಗಡಿಭಾಗದಲ್ಲಿ ಪಶುಪಾಲನಾ ಇಲಾಖೆ ನಿಗಾವಹಿಸಿದ್ದರು ಸಹ, ತಾಲೂಕಿನ ಕಾಡಂಚಿನ ಗ್ರಾಮ ಮೇಲುಕಾಮನಹಳ್ಳಿ ಸುತ್ತಮುತ್ತಲಿನಲ್ಲಿ ಸಾಕು ಕೋಳಿಗಳು ಸಾಮೂಹಿಕವಾಗಿ ಸಾವನ್ನಪ್ಪುತ್ತಿವೆ.
ಗ್ರಾಮದಲ್ಲಿ ಅನೇಕರು ಮನೆಗಳಲ್ಲಿ ನಾಟಿ ತಳಿಯ ಕೋಳಿಗಳನ್ನು ಸಾಕಿ ಮಾರಾಟ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಹದಿನೈದು ದಿನಗಳಿಂದ ಕೋಳಿಗಳು ಆರೋಗ್ಯವಾಗಿದ್ದಂತೆ ಕಂಡುಬಂದರೂ ಅಲ್ಲಲ್ಲಿ ಸಾಯುತ್ತಿದೆ. ಇದರಿಂದಾಗಿ ಗ್ರಾಮದಲ್ಲಿ ಸುಮಾರು ಈವರೆಗೆ ನೂರಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿದೆ.

Post a Comment