ಜ.12 ಮತ್ತು 13 ರಂದು ಸೊಯಿಪಕಲ್ಲು ನಾಗ ಕನ್ನಿಕಾ ಶ್ರೀ ರಕ್ತೇಶ್ವರೀ ದೈವದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ
ಮಂಜೇಶ್ವರ : ಮಜಿಬೈಲ್ ಸೊಯಿಪಕಲ್ಲು ಶ್ರೀ ನಾಗಕನ್ನಿಕಾ ಶ್ರೀ ರಕ್ತೇಶ್ವರೀ ವನದ ನಾಗದೇವರ ಮತ್ತು ರಕ್ತೇಶ್ವರೀ ದೈವದ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಜ.12 ರಿಂದ 13 ರ ವರೆಗೆ ವಿವಿಧ ದಾರ್ಮಿಕ, ಸಾಂಸ್ಕೃತಿಕ, ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಜ.12 ರಂದು ಬಲ್ಲಂಗುಡೇಲು ಶ್ರೀ ಪಾಡಂಗರೇ ಭಗವತಿ ಕ್ಷೇತ್ರದ ವಠರದಿಂದ ಶ್ರೀ ಕ್ಷೇತ್ರಕ್ಕೆ ಹೊರೆಕಾಣಿಕೆ ಮೆರವಣಿಗೆ ಹೊರಡಲಿರುವುದು.ಹೊರೆಕಾಣಿಕೆಯ ಚಾಲನೆಯನ್ನು ಬಲ್ಲಂಗುಡೇಲು ಕ್ಷೇತ್ರದ ಶ್ರೀ ನಾರಾಯಣ ಭಗವತಿ ಪೂಜಾರಿಯವರು ನೀಡಲಿದ್ದರೆ. ಜ.13 ರಂದು ಬೆಳಿಗ್ಗೆಯಿಂದ ಶ್ರೀ ನಾಗಕನ್ನಿಕಾ ದೇವರ ಶ್ರೀ ರಕ್ತೇಶ್ವರೀ ದೈವದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಮಧ್ಯಾಹ್ನ ದೇವರಿಗೆ ಮಾಹ ಪೂಜೆ ಅನ್ನಸಂತರ್ಪಣೆ ಜರಗಲಿರವುದು.ಮಧ್ಯಾಹ್ನ 12.30 ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಯೋಗನಂದ ಸರಸ್ವತಿ ಸ್ವಾಮೀಜಿ ಕೊಂಡೆವೂರು ಇವರು ಆಶೀರ್ವಾಚನ ನೀಡಲಿದ್ದರೆ.ಮುಂಬೈಯ ಹೇರಂಬ ಇಂಡಸ್ಟ್ರೀಸ್ ನ ಅಧ್ಯಕ್ಷರಾದ ಸಮಾಜ ಸೇವಕ ಶ್ರೀ ಸದಾಶಿವ ಕೆ.ಶೆಟ್ಟಿ ಕುಳೂರು ಕನ್ಯಾನ ಇವರನ್ನು ಗಣ್ಯತಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಗುವುದು.ಮಧ್ಯಾಹ್ನ 1.30 ರಿಂದ ಇಂಚಾರ ಮೆಲೋಡಿಸ್ ತಂಡದವರಿಂದ ಭಕ್ತಿ ಗಾನ ಜರಗಲಿದೆ.
ಸೊಯಿಪಕಲ್ಲು ಗುಳಿಗ ಬನದಲ್ಲಿ ವರ್ಷವಾದಿ ಕೋಲ ಜ.19 ಜ.20 ರಂದು ಗುಳಿಗ ಬನದ ವಾರ್ಷಿಕ ಕೋಲವು ಜ.19 ರಂದು ರಾತ್ರಿ 8 ಕ್ಕೆ ಜರಗಲಿರುವುದು.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಜ.19 ರಂದು ಸಂಜೆ 5.30 ಕ್ಕೆ ಶ್ರೀ ವಿಷ್ಣು ಯಕ್ಷಬಳಗ ಮಜಿಬೈಲ್ ಇವರಿಂದ "ಎಕಾದಶಿ ದೇವಿ ಮಹಾತ್ಮೆ" ಯಕ್ಷಗಾನ ತಾಳಮದ್ದಳೆ ಹಾಗೂ ಜ.20 ರಂದು ರಾತ್ರಿ 8.30 ರಿಂದ ಬಪ್ಪನಾಡು ಮೇಳದವರಿಂದ "ಭಂಡಾರ ಚಾವಡಿ" ಎಂಬ ತುಳು ಯಕ್ಷಗಾನ ಬಯಲಾಟ ಜರಗಲಿರುವುದೆಂದು ಸೇವಾ ಸಮಿತಿಯ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

.jpg)
Post a Comment