".

Header Ads

ಕಾರ್ಕಳ,ಸುದ್ದಿ: - ನಾಳೆ (ಜನವರಿ 08) ನಡೆಯಲಿದೆ ಮಿಯ್ಯಾರು ಲವ-ಕುಶ ಜೋಡುಕರೆ ಕಂಬಳ


ಮಿಯ್ಯಾರು ಕಂಬಳ ಸಮಿತಿ, ನವೋದಯ ಗ್ರಾಮ ವಿಕಾಸ ಚಾರಿಟೇಬಲ್‌ ಟ್ರಸ್ಟ್‌ ಮಂಗಳೂರು ಹಾಗೂ ಯುವಜನ ಸೇವಾ ಕ್ರೀಡಾ ಇಲಾಖೆ ಜಂಟಿ ಸಹಕಾರದಲ್ಲಿ   ಪ್ರತಿ ವರ್ಷದಂತೆ ಜನವರಿ ತಿಂಗಳಿನಲ್ಲಿ ನಡೆಯಬೇಕಾಗಿದ್ದ  ಮಿಯ್ಯಾರು ಲವ-ಕುಶ ಜೋಡುಕರೆ ಕಂಬಳ  ಜನವರಿ 08  (ನಾಳೆ )ರಂದು ನಡೆಯಲಿದೆ.

ಬೆಳಗ್ಗೆ ಸಚಿವ ವಿ. ಸುನೀಲ್‌ ಕುಮಾರ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು  ಹಾಗೂ ಸಂಜೆ ನೂತನ ಸಭಾವೇದಿಕೆ ಉದ್ಯಾಟನೆ ಮತ್ತು ಸಭಾ ಕಾರ್ಯಕ್ರಮದ ಉದ್ವಾಟನೆಯನ್ನು ಸಚಿವರಾದ ಸಿ ಆನಂದಸಿಂಗ್‌ ನೆರವೇರಿಸಲಿದ್ದಾರೆ.
  ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ,
ಹಾಗೂ ಚಣಿಲ ತಿಮ್ಮಪ್ಪ ಶೆಟ್ಟಿ,  ಮಣಿರಾಜ್‌ ಶೆಟ್ಟಿ ,ಕೋಟ ಶ್ರೀನಿವಾಸ ಪೂಜಾರಿ,   ಎಂ  ವೀರಪ್ಪಮೊಯ್ಸಿ,  ಎಸ್‌ ಅಂಗಾರ , ಡಾ. ಎಂ.ರಾಜೇಂದ್ರಕುಮಾರ  ಉಮಾನಾಥ ಕೋಟ್ಯಾನ್‌  ಮೊದಲಾದ ಗಣ್ಯರು ಆಗಮಿಸಲಿದ್ದಾರೆ.

Powered by Blogger.