".

Header Ads

  ಬೆಂಗಳೂರು ವ್ಯಕ್ತಿ ಬಳಿಯಿದ್ದ ಶ್ವಾನಕ್ಕೆ - ಶ್ವಾನ ಪ್ರಿಯರು ಫಿದಾ :- ಬರೋಬ್ಬರಿ 20 ಕೋಟಿ ಆಫರ್


ವಿಶ್ವದಾದ್ಯಂತ ಹಲವು ತಳಿಯ ಶ್ವಾನಗಳನ್ನ ನಾವು ನೋಡುತ್ತೇವೆ. ಒಂದಕ್ಕಿಂತ ಒಂದು ದುಬಾರಿ ಬೆಲೆಯದ್ದು ಇವೆ. ಈಗ 20 ಕೋಟಿ ಆಫರ್‌ನಿಂದಾಗಿ ಬೆಂಗಳೂರಿನ ಶ್ವಾನ ಸುದ್ದಿಯಾಗಿದೆ. ನಟ, ಕಡಬಮ್ ಕೆನಲ್ ಎಂಬ ವೆಬ್‌ಸೈಟ್ ಹಾಗೂ ಭಾರತೀಯ ಶ್ವಾನ ತಳಿ ಸಾಕಾಣೆಕಾರರ ಸಂಘದ ಅಧ್ಯಕ್ಷರೂ ಆಗಿರುವ ಸತೀಶ್ ಎಂಬುವವರು ಇಷ್ಟೊಂದು ದುಬಾರಿ ಬೆಲೆಯ ಶ್ವಾನದ ಯಜಮಾನ

ಹೈದರಾಬಾದ್ ಬಿಲ್ಡರ್‌ವೊಬ್ಬರು   ಬರೋಬ್ಬರಿ 20 ಕೋಟಿ ಆಫರ್ ನೀಡಿದ್ದಾರೆ. ಆದ್ರೆ ಭಾರತೀಯ ಶ್ವಾನ ತಳಿಗಾರರ ಸಂಘದ ಅಧ್ಯಕ್ಷ ಎಸ್. ಸತೀಶ್ ತಮ್ಮ ಪ್ರೀತಿಯ ಶ್ವಾನವನ್ನು ತಾವೇ ಸಾಕುವ ಯೋಜನೆಯಿಂದ ಆಫರ್ ಅನ್ನು ನಿರಾಕರಿಸಿದ್ದಾರೆ . ಒಂದೂವರೆ ವರ್ಷದ ಕಕೇಷ್ಯನ್ ಶೆಫರ್ಡ್ (Caucasian Shepherd) ಶ್ವಾನವು ಬರೋಬ್ಬರಿ 100 ಕೆ.ಜಿ ತೂಕವಿದೆ. ನೋಡಲು ಸಿಂಹದಂತೆಯೇ ಕಾಣುವ ಈ ಶ್ವಾನದ ತಲೆಬುರುಡೆ ಗಾತ್ರವು 38 ಇಂಚುಗಳಿದ್ದು, ಭುಜಗಳು 34 ಇಂಚುಗಳಿವೆ. ಅಲ್ಲದೇ ಶ್ವಾನದ ಕಾಲುಗಳು 2 ಲೀಟರ್ ಜ್ಯೂಸ್ ಬಾಟಲಿ ಗಾತ್ರದಷ್ಟು ದೊಡ್ಡದಾಗಿದೆ. ಕಕೇಷ್ಯನ್ ಶ್ವಾನವು ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ. ಅಲ್ಲದೇ ಅತ್ಯುತ್ತಮ ಶ್ವಾನವಾಗಿ 32 ಪದಗಳನ್ನು ಬಾಚಿಕೊಂಡಿದೆ. ಇದೊಂದು ಗಾರ್ಡಿಯನ್ ಶ್ವಾನವಾಗಿದ್ದು, ಸಾಮಾನ್ಯವಾಗಿ ರಷ್ಯಾ (Russia), ಟರ್ಕಿ(Turkey), ಅರ್ಮೇನಿಯಾ ( Armenia), ಸರ್ಕಾಸಿಯಾ (Circassia), ಹಾಗೂ ಜಾರ್ಜಿಯಾ( Georgia)ದಲ್ಲಿ ಕಾಣಲು ಸಿಗುವುದು. ಆದರೆ ಭಾರತದಲ್ಲಿ ಈ ತಳಿಯ ಶ್ವಾನ ಕಾಣಲು ಸಿಗುವುದು ತೀರಾ ಅಪರೂಪ.
Powered by Blogger.