ಜ. 26 ರಂದು ಭಗವಾನ್ ಶ್ರೀ ನಿತ್ಯಾನಂದರ ಸಮಾಧಿ ದರ್ಶನ
ದೇವರನಾಡು ಕೇರಳದಲ್ಲಿ ಜನಿಸಿ ಕರಾವಳಿಯಾದಂತ್ಯ ತನ್ನ ಲೀಲೆಯನ್ನು ತೋರಿಸಿ ಶ್ರೀ ಕ್ಷೇತ್ರ ಗಣೇಶಪುರಿಯಲ್ಲಿ ಸಮಾಧಿಪಡೆದು ತನ್ನ ಭಕ್ತರನ್ನು ಹರಸುತ್ತಿರುವ ಭಗವಾನ್ ಶ್ರೀ ನಿತ್ಯಾನಂದರ ಸಮಾಧಿ ಕ್ಷೇತ್ರದಲ್ಲಿ ಜನವರಿ 26 ರಂದು ವಸಂತ ಪಂಚಮಿ ನಿಮಿತ್ತ ಸಮಾಧಿ ಹಾಗೂ ಭಗವಾನ್ ಶ್ರೀ ನಿತ್ಯಾನಂದರ ಮೂರ್ತಿ ಸ್ಪರ್ಶಿಸಿ ದರ್ಶನ ಪಡೆಯುವ ಸೌಭಾಗ್ಯವನ್ನು ಕಲ್ಪಿಸಲಾಗಿದೆ.
ಜನವರಿ 25 ರ ಬುಧವಾರ ಬೆಳಿಗ್ಗೆ 8.00 ಗೆ ಘಟಸ್ಥಾಪನೆಗೊಂಡು ಓಂ ನಮೋ ಭಗವತೇ ನಿತ್ಯಾನಂದಾಯ ಅಖಂಡ ನಾಮ ಸ್ಮರಣೆ ಪ್ರಾರಂಭ.
ಜನವರಿ 26 ಬೆಳಿಗ್ಗೆ 4.30 ರಿಂದ 5.30 ಮಹಾ ಅಭಿಷೇಕ, 6.09 ಗಂಟೆಗೆ ಆರತಿ, 7.30 ರಿಂದ ಶ್ರೀ ಶನೀಶ್ವರ ಮಹಾ ಯಜ್ಞ ಪ್ರಾರಂಭ ಮದ್ಯಾಹ್ನ 1.00 ಗಂಟೆಗೆ ಪೂರ್ಣಾಹುತಿ ಬೆಳಿಗ್ಗೆ 8.00 ಗಂಟೆಗೆ ಘಟ ವಿಸರ್ಜಿಸಿ ಓಂ ನಮೋ ಭಗವತೇ ಶ್ರೀ ನಿತ್ಯಾನಂದಾಯ ನಾಮಸ್ಮರಣೆ ಸಮಾಪ್ತಿ ಗೊಳ್ಳಲಿದೆ. ಸಂಜೆ 5.00 ಗಂಟೆಗೆ ಪಲ್ಲಕಿ ಮೆರವಣಿಗೆ ನಡೆಯಲಿದೆ. ಬೆಳಿಗ್ಗೆ 6.30 ರಿಂದ ರಾತ್ರಿ 9.00 ಗಂಟೆಯ ತನಕ ಸಮಾಧಿ ದರ್ಶನ ಮತ್ತು ಭಗವಾನ್ ನಿತ್ಯಾನಂದರ ಮೂರ್ತಿ ಚರಣ ಸ್ಪರ್ಶದ ಭಾಗ್ಯ ಭಕ್ತರಿಗೆ ಲಭಿಸಲಿದೆ ಎಂದು ಶ್ರೀ ಭಿಮೇಶ್ವರ ಸದ್ಗುರು ನಿತ್ಯಾನಂದ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

Post a Comment