".

Header Ads

ಶ್ರೀ ಸದ್ಗುರು ನಿತ್ಯಾನಂದ ಆಶ್ರಮ ಗೋರೆಗಾಂವ್ ಪೂರ್ವ : ಜ. 24 ಮತ್ತು 25 ರಂದು 58ನೇ ವಾರ್ಷಿಕ ಮಹೋತ್ಸವ


ಜ. 24 ಮತ್ತು 25 ರಂದು 58ನೇ ವಾರ್ಷಿಕ ಮಹೋತ್ಸವ 

ಮುಂಬಯಿ : ಗೋರೆಗಾಂವ್ ಪೂರ್ವದ ಸಹಕಾರ್ ವಾಡಿ, ವಿರ್ವಾಣಿ ಇಂಡಸ್ಟ್ರಿಯಲ್ ಎಸ್ಟೇಟ್  ಬಳಿಯ ನಿತ್ಯಾನಂದ ಆಶ್ರಮದ 58ನೇ ವಾರ್ಷಿಕ ಮಹೋತ್ಸವ ಹಾಗೂ ಗುರುಮೂರ್ತಿ ಅಭಿಷೇಕ ಕಾರ್ಯಕ್ರಮ ಜ.  24 ಮತ್ತು 25ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.  ಜ, 24ರಂದು  ಉದ್ಘಾಟನೆ ಹಾಗೂ ದಿನಪೂರ್ತಿ ಮತ್ತು ರಾತ್ರಿ ಏಕಹಾ ಭಜನೆ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳು, 25ರಂದು ಬೆಳಿಗ್ಗೆ ಏಕಹಾ ಭಜನೆ ಮಂಗಳೋತ್ಸವ, ನಂತರ ಸ್ವಾಮಿ ಮೂರ್ತಿ ಅಭಿಷೇಕ ಮತ್ತು ಪಾದುಕ ಪೂಜೆ, ತೀರ್ಥ ಪ್ರಸಾದ ವಿತರಣೆ, ಮಧ್ಯಾಹ್ನ ಮಹಾಪ್ರಸಾದ ಭೋಜನ ಅನ್ನ ಸಂತರ್ಪಣೆ, ರವೀಂದ್ರ ಸುಂದರ್ ಶೆಟ್ಟಿ ಮತ್ತು ಸಹೋದರವು ಮತ್ತು ಫ್ಯಾಮಿಲಿ. ಸಂಜೆ ಸತ್ಯ ನಾರಾಯಣ ಮಹಾಪೂಜಾ ಮತ್ತು ತೀರ್ಥ ಪ್ರಸಾದ ವಿತರಣೆ. ಅನಂತರ ತುಳು ಯಕ್ಷಗಾನ "ಅಮರಶಿಲ್ಪಿ ಶಂಭು ಕಲ್ಕುಡ" ಶ್ರೀ ನಾರಾಯಣಗುರು ಯಕ್ಷಗಾನ ಮಂಡಳಿ ಇವರಿಂದ. 

ಧಾರ್ಮಿಕ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾರತ್ ಬ್ಯಾಂಕಿನ ನಿರ್ದೇಶಕ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಉಪಾಧ್ಯಕ್ಷ  ಸೂರ್ಯಕಾಂತ್ ಜಯ ಸುವರ್ಣ,  ಗೌರವ ಅತಿಥಿಗಳಾಗಿ  ಸಮಾಜ ಸೇವಕ ನ್ಯಾ. ಶಶಿಧರ್ ಕಾಪು,  ಮಾಜಿನಗರಸೇವಕ ಸ್ವಪ್ನಿಲ್ ತೆಂಬಾವಲ್ಕರ್,  ಕುಲಾಲ ಸಂಘ ಮುಂಬೈಯ ಅಧ್ಯಕ್ಷ ರಘು ಮೂಲ್ಯ ಪಾದೆಬೆಟ್ಟು  ಆಗಮಿಸಲಿದ್ದಾರೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕಾಗಿ ಆಶ್ರಮದ ಗೌರವಾಧ್ಯಕ್ಷರಾದ ಮೋಹನ್ ಪೂಜಾರಿ, ಅಧ್ಯಕ್ಷರಾದ ರಘು ಮೂಲ್ಯ ಮುಖ್ಯ ಸಂಚಾಲಕರಾದ ಡಾ. ಶೈಲೇಶ್ ಜಿ,  ಉಪಾಧ್ಯಕ್ಷ ಬಾಲಕೃಷ್ಣ ಬಂಗೇರ,  ಗೌರವ ಪ್ರಧಾನ ಕಾರ್ಯದರ್ಶಿ ಸಂತೋಷ್ ಸಾಲ್ಯಾನ್, ಕೋಶಾಧಿಕಾರಿ ಗಣೇಶ್ ಮೂಲ್ಯ,  ಜೊತೆ ಕಾರ್ಯದರ್ಶಿ ಶಶಿಕಲಾ ಎಸ್. ಕೋಟ್ಯಾನ್, ಜೊತೆ ಕೋಶಾಧಿಕಾರಿ ಬಬಿತಾ ಜೆ ಕೋಟ್ಯಾನ್ ಹಾಗೂ ಸಮಿತಿಯ ಮತ್ತು ಉಪಸಮಿತಿಗಳ ಸರ್ವ ಸದಸ್ಯರು ವಿನಂತಿಸಿದ್ದಾರೆ.
Powered by Blogger.