ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ , ಮಲಾಡ್ ಪೂರ್ವ ಮಹಿಳಾ ವಿಭಾಗ : ಜ.29ರಂದು ಅರಿಶಿನ ಕುಂಕುಮ ಮತ್ತು ಪ್ರತಿಭಾ ಪುರಸ್ಕಾರ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಅಪ್ಪಾಜಿ ಪೌಂಡೇಶನ್ ವರ್ಲಿ ಇದರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಕವಿತಾ ಗೋಪಾಲ್ ಶೆಟ್ಟಿ ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶುಭ ಸುನೀಲ್ ಆಚಾರ್ಯ. ಪಾಲ್ಗೊಳ್ಳಲಿದ್ದಾರೆ
ಈ ಸಂದರ್ಭದಲ್ಲಿ ಸಿ. ಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಸ್ಥಳೀಯ ವಿದ್ಯಾರ್ಥಿ ಕುಮಾರಿ ಪ್ರೀತಿ.ಆರ್. ಪೂಜಾರಿ ಇವರಿಗೆ ಗೌರವ. ಹಾಗೂ ಸ್ಥಳೀಯ ವಿದ್ಯಾರ್ಥಿಗೆ ವಿದ್ಯಾರ್ಥಿ ವೇತನ. ನಡೆಯಲಿದೆ
ಪ್ರಾರಂಭದಲ್ಲಿ ಭಜನೆ ಬಳಿಕ ಅರಶಿನ ಕುಂಕುಮ ಕಾರ್ಯ ಕ್ರಮ ನಡೆಯಲಿದೆ, ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಸರದ ತುಳು ಕನ್ನಡಿಗ ಮಹಿಳೆಯರು ಭಾಗವಹಿಸಬೇಕೆಂದು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರತ್ನಾವತಿ. ಡಿ . ಕುಲಾಲ್, ಕಾರ್ಯದರ್ಶಿ ಶ್ರೀಮತಿ ಕುಮರೇಶ್ ಆಚಾರ್ಯ , ಕೋಶ ಧಿಕಾರಿ ಶೀಲಾ.ಎಂ. ಪೂಜಾರಿ ,ಉಪಾಧ್ಯಕ್ಷರಾದ,ಲಲಿತಾ ಎಸ್ ಗೌಡ, ಗೀತಾ ಜೆ ಮೆಂಡನ್,ಸಂಧ್ಯಾ ಎಸ್ ಪ್ರಭು, ಜೊತೆ ಕಾರ್ಯದರ್ಶಿ ಶೋಭಾ ಎಲ್. ರಾವ್, ಜೊತೆ ಕೋಶಾಧಿಕಾರಿ ನಳಿನಿ ಪಿ ಕರ್ಕೇರ ಮತ್ತು ಜಯಲಕ್ಷ್ಮಿ ಪಿ ನಾಯಕ್ , ಹಾಗೂ , ಮಹಿಳಾ ವಿಭಾಗದ ಸರ್ವ ಸದಸ್ಯೆಯರು ಮತ್ತು ಪೂಜಾ ಸಮಿತಿಯ ,ಪ್ರಧಾನ ಕಾರ್ಯದರ್ಶಿ ದಿನೇಶ್ ಪೂಜಾರಿ,ಕೋಶಾಧಿಕಾರಿ ಜಗನ್ನಾಥ್ ಮೆಂಡನ್ ಹಾಗು ಸಮಿತಿಯ ಸರ್ವ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.

Post a Comment