".

Header Ads

ಸಾಫಲ್ಯ ಸೇವಾ ಸಂಘದ 82ನೇ ವಾರ್ಷಿಕ ಸಂಭ್ರಮಾಚರಣೆ : ಒಗ್ಗಟ್ಟಿನಿಂದ ಬಲಿಷ್ಠ ಸಮಾಜವನ್ನು ಕಟ್ಟೋಣ - ಶ್ರೀನಿವಾಸ ಪಿ. ಸಾಫಲ್ಯ


ಮುಂಬಯಿ :  ನಮ್ಮ ಅಂದಿನ ಹಿರಿಯರು ಕಟ್ಟಿ ಬೆಳೆಸಿದ ಸಾಪಲ್ಯ ಸೇವಾ ಸಂಘದ ಇಂದು 82ನೇ ವರ್ಷವನ್ನು ಆಚರಿಸುತ್ತಿದ್ದು ಈ ಸಂದರ್ಭದಲ್ಲಿ ಸಂಘವನ್ನು ಕಟ್ಟಿ ಬೆಳೆಸಿದ ಹಿರಿಯರನ್ನು ನೆನಪಿಸುವುದು ನಮ್ಮ ಕರ್ತವ್ಯ. ಸಂಘವು ಹಲವಾರು ಯೋಜನೆಗಳನ್ನು ಕೈಗೊಂಡಿದ್ದು, ಸಂಘದ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಸಮಾಜ ಬಾಂಧವರೆಲ್ಲರೂ ಕೈಜೋಡಿಸುದರೊಂದಿಗೆ ಒಂದು ಬಲಿಷ್ಠವಾದ ಸಮಾಜವನ್ನು ನಾವೆಲ್ಲರೂ ಕಟ್ಟೋಣ ಎಂದು  ಸಾಪಲ್ಯ ಸೇವಾ ಸಂಘದ ಅಧ್ಯಕ್ಷರಾದ ಶ್ರೀನಿವಾಸ ಪಿ. ಸಾಫಲ್ಯ ನುಡಿದರು.





ಜ. 22ರಂದು ಕುರ್ಲಾದ ಬಂಟರ ಭವನದಲ್ಲಿ ಜರಗಿದ ಸಾಫಲ್ಯ ಸೇವಾ ಸಂಘದ 82ನೇ ವಾರ್ಷಿಕ ದಿನಾಚರಣೆಯ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀನಿವಾಸ ಸಾಫಲ್ಯರು ಇಂದಿನ ಈ ವೇದಿಕೆಯಲ್ಲಿ ಮುಂಬಯಿಯ ಮಾತ್ರವಲ್ಲ ಮುಂಬಯಿಯ ಹೊರಗಿನ ದೂರದ ಊರಿನಿಂದ ಗಣ್ಯ ವ್ಯಕ್ತಿಗಳು ಆಗಮಿಸಿ  ಉಪಸ್ಥಿತರಿದ್ದು ಅವರಿಗೆ ನಮ್ಮ ಸಂಘದ ಮೇಲಿನ ಪ್ರೀತಿಯನ್ನು ತೋರಿಸಿದ್ದಾರೆ. ಮನುಷ್ಯನ ಕೆಲವೇ ಸಮಯಗಳ ಬಾಳಿನಲ್ಲಿ ತನ್ನೊಂದಿಗೆ ತನ್ನ ಸಮಾಜವಿದೆ ಎಂಬುದನ್ನು ಅರಿತು ಸ್ವತಂತ್ರ ಪೂರ್ವದಲ್ಲಿ ನಮ್ಮ ಹಿರಿಯರು ಈ ಸಂಘವನ್ನು ಸ್ಥಾಪಿಸಿದರು. ಕಳೆದ ಆರು ವರ್ಷಗಳಿಂದ ಈ ಸಂಘವು ನಿರಂತರವಾಗಿ ಕ್ರಿಯಾಶೀಲವಾಗಿದೆ. ಬಡವರ ಕಣ್ಣೀರೊರಸುವ  ಕಾರ್ಯವನ್ನು ನಮ್ಮ ಸಂಘ  ಮಾಡಿದೆ. ಸಮಾಜದ ಮಹಿಳೆಯರಿಗೆ ಮನೆಯಲ್ಲಿ ಉದ್ಯೋಗವನ್ನು ಮಾಡಲು ಹೊಲಿಗೆ ಯಂತ್ರವನ್ನು ವಿತರಿಸಿದೆ. ನಮ್ಮ ಸಮಾಜದ ಮಕ್ಕಳಿಗೆ ವಿದ್ಯಾರ್ಜನೆಗೆ ನಮ್ಮ ಸಂಘವು ಸಹಕರಿಸುತ್ತಿದೆ.  ಅದಲ್ಲದೆ ಮಹಾರಾಷ್ಟ್ರದಲ್ಲಿ ಒಬಿಸಿ ಪಡೆಯುವಲ್ಲಿ ನಾವು ಯಶಸ್ವಿಯಾಗಿದ್ದೇವೆ.  ಇದೆಲ್ಲ ನಿಮ್ಮ ಸಹಕಾರದಿಂದ ಸಾಧ್ಯ, ಇದು ಇನ್ನೂ ಮುಂದುವರಿಯಲಿ ಎಂದರು.






ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಸಂಘದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಬೆಂಗಳೂರಿನ ನಿವೃತ್ತ ಕೆಎಎಸ್ ಅಧಿಕಾರಿ, ಆರ್ ನಾಗರಾಜ್ ಅವರು  ಸಾಫಲ್ಯ ಸೇವಾ ಸಂಘ ಬಹಳ ಹಳೆಯ ಸಂಘ, ನಮ್ಮ ಕರ್ನಾಟಕದಲ್ಲಿ ಇಂತಹ ಹಳೆಯ ಸಂಘ ಇರುವುದು ಅಪರೂಪ ಅಲ್ಲದೆ ಈ ಸಂಘವು  ಇಷ್ಟು ಎತ್ತರಕ್ಕೆ ಬೆಳೆದು ಇಲ್ಲಿ ನಮ್ಮ ಸಂಸ್ಕೃತಿಯನ್ನು ಕಾಪಾಡುತ್ತದೆ. ನಮ್ಮ ಪೂರ್ವಜರು ಆ ಕಾಲದಲ್ಲಿ ಮುಂಬಯಿಗಾಗಮಿಸಿ, ನಮ್ಮ ಸಮಾಜ ಬಾಂಧವರನ್ನು ಒಗ್ಗೂಡಿಸಿ ಒಂದು ಸಂಘಟನೆಯನ್ನು ಸ್ಥಾಪಿಸಿ, ಇದರ ಮೂಲಕ ಸಮಾಜದ ಸಂಸ್ಕೃತಿಯನ್ನು ಕಾಪಾಡುತ್ತಿರುವುದು , ಅಲ್ಲದೆ ನಾಡಿನ ಕಲೆಯನ್ನು ಉಳಿಸಿ ಬೆಳೆಸುವುದು ಕೆಲಸವನ್ನು ಇಲ್ಲಿ ಮಾಡಲಾಗುತ್ತದೆ. ಮುಂದೆ  ಸಾಪಲ್ಯ ಸೇವಾ ಸಂಘದ ಸಮುದಾಯ  ಭವನ ಹಾಗೂ ವಧು-ವರರ ಅನ್ವೇಷಣ ಕೇಂದ್ರ ಸ್ಥಾಪನೆಯಾಗಲಿ. ನಾವು ನಮ್ಮ ಸಂಸ್ಕೃತಿಯನ್ನು ಒಗ್ಗಟ್ಟಿನಿಂದ ಉಳಿಸೋಣ ಎಂದರು.

ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಇಂಟರ್ನ್ಯಾಷನಲ್ ಕಾಪರ್ ಅಸೋಸಿಯೇಷನ್ ಮುಂಬಯಿ ಇದರ ಸಲಹೆಗಾರರಾದ ಶಂಕರ ಸಫಲಿಗ ಅವರು ಮಾತನಾಡುತ್ತಾ, ನಾನು ಊರಿನಲ್ಲಿ ಇರುವಾಗ ಸಣ್ಣ ಪ್ರಾಯದಲ್ಲಿ ನಮ್ಮ ಸಮಾಜದ ಒಂದು ಸಂಘ ಇದೆ ಅಂತ ಆಗ ನನಗೆ ತಿಳಿದಿತ್ತು. ಯುವ ಜನಾಂಗಕ್ಕೆ ಅವರ ಪ್ರತಿಭೆಯನ್ನು ಪ್ರದರ್ಶಿಸುವ ಕಾರ್ಯವನ್ನು ಸಂಘವು ಮಾಡುತ್ತಿದೆ. ಯುವ ಜನಾಂಗವು ನಮ್ಮ ಭವಿಷ್ಯ. ಇಂದು ಇಲ್ಲಿ ಈ ವೇದಿಕೆಯಲ್ಲಿ ಎಲ್ಲರನ್ನು ಗುರುತಿಸಿ ಅವರನ್ನು ಅಭಿನಂದಿಸಿದ್ದು ನಿಜಕ್ಕೂ ಅಭಿಮಾನದ ಸಂಗತಿ ಆಗಿದೆ. ಯುವ ಜನಾಂಗಕ್ಕೆ ಪ್ರೋತ್ಸಾಹ ನೀಡೋಣ, ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರೋಣ ಇದರಿಂದ ಸಮಾಜ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.

ಗೌರವ ಅಥಿತಿ ಬೈಕಾಡಿ ವಾಸುದೇವ ರಾವ್ ಮಾತನಾಡುತ್ತಾ  ನಮ್ಮದು ಒಂದು ಸಣ್ಣ ಸಮಾಜ ಅನ್ನುದಕಿಂತ ನಮ್ಮದು ಬೃಹತ್ ಸಮಾಜವಾಗಿ ಎಲ್ಲರೂ ಒಗ್ಗಟ್ಟಿನಿಂದ ಕೂಡಿ ಈ ಸಮಾಜವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು. ಮನುಷ್ಯನಿಗೆ ಮೂರು ಹಂತಗಳಿಗೆ ಅರ್ನಿಂಗ್, ಲರ್ನಿಂಗ್ ಮತ್ತು ರಿಟರ್ನಿಂಗ್ ಇದನ್ನು ಅಳವಡಿಸಿಕೊಂಡಲ್ಲಿ ಇದು ಸಾಧ್ಯ. ಈ ಬಗ್ಗೆ ನಮ್ಮ ಅಧ್ಯಕ್ಷರನ್ನು ಅಭಿನಂದಿಸಬೇಕಾಗಿದೆ ಎಂದರು.

ಇನ್ನೋರ್ವ ಗೌರವ ಅತಿಥಿ ಎಸೋಸಿಯೇಟ್ ಉಪಾಧ್ಯಕ್ಷರು ಮತ್ತು ಮುಖ್ಯಸ್ಥ ಡಾಟಾ ಮ್ಯಾಟ್ರಿಕ್ಸ್ ಗ್ಲೋಬಲ್ ಸರ್ವಿಸಸ್ ಲಿಮಿಟೆಡ್ ನಾಸಿಕ್ ಸಂಜಯ್ ಮುಲ್ಕಿಕರ್ ಮಾತನಾಡುತ್ತಾ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ನಡೆದ ಇಂದಿನ ಸಮಾರಂಭವು ಬಹಳ ಉತ್ತಮವಾಗಿ ನಡೆದಿದೆ.  ಈ ಸಂಘವು ಸರಿಯಾದ ವ್ಯಕ್ತಿಗಳ ಕೈಯಲ್ಲಿದ್ದು ಉತ್ತಮ ಭವಿಷ್ಯದತ್ತ ಮುನ್ನಡೆಯುತ್ತಿದೆ.  ಯುವ ಜನಾಂಗಕ್ಕೆ ಮುಂದೆ ನಮ್ಮ ದೇಶದಲ್ಲಿ ಉದ್ದಿಮೆ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಅವಕಾಶವಿದೆ ಎಂದರು.

ಬೆಳಿಗ್ಗೆ ನಡೆದ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ  ಗೌರವ ಅತಿಥಿಗಳಾಗಿ  ದುಬೈಯ ನಟ, ನಿತ್ಯ ಸಂಯೋಜಕ ಗೌತಮ್ ಬಂಗೇರ, ದುಬಾಯಿಯ ಉಕ್ಲೀಪ್ ಮಿಡ್ಲ್ ಈಷ್ಟ್ ಇದರ ಡಿಜಿಟಲ್ ವ್ಯವಹಾರ ನಿರ್ದೇಶಕ ಹರ್ಷದ್ ಸಫಲಿಗ, ದಿ. ಸದಾನಂದ ಸಫಲಿಗ ಅವರ ಸುಪುತ್ರಿ ಚೇತನಾ ವಿಜಯ್ ಅಮೀನ್,  ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕಿನ ಹಿರಿಯ ವ್ಯವಸ್ಥಾಪಕರಾದ ಸಂಜನಾ ಮೋಹನ್ ಕುಂಜತ್ತೂರು,  ಭಾರತ್ ಬ್ಯಾಂಕಿನ ಕಾರ್ಯನಿರ್ವಾಹಕ ಅಧಿಕಾರಿ ನಿಶಾ ಕೆಲ್ಲಪುತ್ತಿಗೆ, ವೆರಿಟಾಸ್ ಇಂಡಿಯಾ ಲಿ. ನ ಕಾರ್ಯನಿರ್ವಾಹಕರಾದ ತೇಜಸ್ ಸಾಲಿಯಾನ್,  ಹಾಟ್ ಸ್ಟಾರ್ ಇದರ ಕಾರ್ಯನಿರ್ವಾಹಕ ನಿಶಾಂತ್ ಬಂಗೇರ, ಪ್ರಾಜೆಕ್ಟ್ ಲೀಡರ್ ವೈಬ್ರರ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್,  ಸನತ್ ಶೇರಿಗಾರ್, ಜನರಲ್ ಮೀಲ್ಸ್  ಇದರ ಹಿರಿಯ ಕಾರ್ಯನಿರ್ವಹಣಾ ಅಧಿಕಾರಿ ದೃಷ್ಟಿ ಸಾಲಿಯಾನ್, ನೀಲ್ ಪಾಟಿಲ್ ಡಿಜಿಟಲ್ ಇದರ ಸಹಾಯಕ ಉಪಾಧ್ಯಕ್ಷ ರೋಹಿತ್ ಸಾಲಿಯಾನ್ ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ರೋಹಿತ್ ಸಾಲಿಯಾನ್ ಇವರನ್ನು ಗೌರವಿಸಲಾಯಿತು.

ಯಕ್ಷಗಾನ ಕಲಾವಿದರಾದ ಶೈಲೇಶ್ ಪುತ್ರ ಪ್ರಭಾಕರ್ ಬಂಗೇರ ಮತ್ತು ಗೋವಿಂದ್ ಸಫಲಿಗ ಇವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸೂರತ್ ನ ಹೋಟೇಲು ಉದ್ಯಮಿ ಭೋಜ ಸಫಲಿಗ, ಸಾಪಲ್ಯ ಸೇವಾ ಸಂಘದ ಉಪಾಧ್ಯಕ್ಷರಾದ ಕೃಷ್ಣಕುಮಾರ್ ಬಂಗೇರ, ಕೋಶಾಧಿಕಾರಿ ಹೇಮಂತ್ ಸಫಲಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಕಲಾ ಬಂಗೇರ, ಯುವ ವಿಭಾಗದ ಕಾರ್ಯಧ್ಯಕ್ಷೆ ಸಂಧ್ಯಾ ಪುತ್ರನ್  ಹಾಗೂ ಇತರ ಗಣ್ಯರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಶೋಭಾ ಬಂಗೇರ, ಯುವ ವಿಭಾಗದ ಮಾಜಿ ಕಾರ್ಯಾಧ್ಯಕ್ಷ ರವಿಕಾಂತ್ ಸಫಲಿಗ, ಇನ್ನೋರ್ವ ಮಾಜಿ ಕಾರ್ಯಾಧ್ಯಕ್ಷ ಪ್ರತಿಕ್ ಕರ್ಕೇರ ಇವರನ್ನು ಸನ್ಮಾನಿಸಲಾಯಿತು. ಉಷಾ ಸಫಲಿಗ ಅವರು ಪರಿಚಯಿಸಿದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಸುನಿತಾ ಎಂ ಶೆಟ್ಟಿ ಇವರನ್ನು ಸನ್ಮಾನಿಸಿದ್ದು ಡಾ. ಜಿ. ಪಿ. ಕುಸುಮಾ ಅವರು ಸನ್ಮಾನ ಪತ್ರವನ್ನು ವಾಚಿಸಿದರು. 
 .

ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಆದರ್ಶ ಬಿ ಅತ್ತಾವರ್ ಇವರನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಗಣ್ಯರು ಸನ್ಮಾನಿಸಿದರು. ಸನ್ಮಾನ ಪತ್ರವನ್ನು ನಿಶಾ ಬಂಗೇರ ವಾಚಿಸಿದರು.

ಬರಹಗಾರರಾದ ಜಿ. ಎಸ್. ಗುರುಪುರ  ಮತ್ತು ಜಯಾನಂದ ಪೆರಾಜೆ ಇವರನ್ನು ಸನ್ಮಾನಿಸಲಾಗಿದ್ದು ಸನ್ಮಾನ ಪತ್ರವನ್ನು ಕುಸುಮಾ ಬಂಗೇರ ಮತ್ತು ಕಿರಣ್ ಕುಮಾರ್ ವಾಚಿಸಿದರು.
ಸಾಮಾಜಿಕ ಕಾರ್ಯಕರ್ತರಾದ ಭಾಸ್ಕರ್ ಎಡಪದವು ಮತ್ತು ರಾಮದಾಸ್ ಸೋಮೇಸ್ವರ ಇವರನ್ನು ಸನ್ಮಾನಿಸಲಾಗಿದ್ದು ಸನ್ಮಾನ ಪತ್ರವನ್ನು ರಾಜೇಶ್ ಪುತ್ರನ್ ಮತ್ತು ಅನುಸೂಯ ಸೋಮೇಶ್ವರ ಓದಿದರು.
ಕಲಾ ಕ್ಷೇತ್ರದಲ್ಲಿ ಮಿಂಚುತ್ತಿರುವ ಚೈತ್ರಾ ಕಲ್ಲಡ್ಕ, ಸಮತಾ ಅಮೀನ್, ಗೌತಮ್ ಬಂಗೇರ ಮತ್ತು ಸುನಿತಾ ಜೆ. ಉಳ್ಳಾಲ್ ಇವರನ್ನು ಗಣ್ಯರು ಸನ್ಮಾನಿಸಿದ್ದು ಸನ್ಮಾನ ಪತ್ರವನ್ನು ವಿಮಲ ಬಂಗೇರ, ಪ್ರತಿಭಾ ಸಫಲಿಗ  ಪ್ರಮಿಳಾ ಶೇರಿಗಾರ್ ಮತ್ತು ವಾಣಿ ಪ್ರಸ್ತುತಪಡಿಸಿದರು.
ಅಲ್ಲದೆ ಜಗನ್ನಾಥ ಕರ್ಕೇರ ದಂಪತಿ, ಲೀಲಾಧರ ಬಂಗೇರ ದಂಪತಿ, ಕೃಷ್ಣ ಕುಮಾರ್ ಬಂಗೇರ ದಂಪತಿ ಸನ್ಮಾನ ಪತ್ರವನ್ನು ಪದ್ಮಿನಿ ಬಂಗೇರ, ಸುಲೋಚನಾ ಸಫಲಿಗ, ಲಕ್ಷಿ ಮೆಂಡನ್ ಓದಿದರು.
ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶೋಭಾ ಬಂಗೇರ ಅವರು ಸಂಘದ ಚಟುವಟಿಕೆಗಳ ಮಾಹಿತಿ ಇತ್ತರು.
ನವೆಂಬರ್ ತಿಂಗಳಲ್ಲಿ ನಡೆದ ಸಾಪಲ್ಯ ಕ್ರೀಡಾಕೂಟದಲ್ಲಿ ಬಹುಮಾನ ವಿಜೇತರಾದವರಿಗೆ ಪ್ರಶಸ್ತಿ ಹಾಗೂ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು. ವಿಜೇತರ ಹೆಸರನ್ನು ಪ್ರಮೀಳಾ ಸೇರಿಗಾರ್ ಮತ್ತು ನಿಧಿ ಪುತ್ರನ್ ವಾಚಿಸಿದರು. 
ಮನೋರಂಜನೆಯ ಅಂಗವಾಗಿ ಸಂಘದ ಕಲಾವಿದರಿಂದ ವೈವಿದ್ಯಮಯ ಮನರಂಜನೆಗಳು, ಸಮೂಹ ನೃತ್ಯ, ಏಕವ್ಯಕ್ತಿ ನೃತ್ಯ, ಸಾಂಪ್ರದಾಯಿಕ ನೃತ್ಯಗಳು, ಫ್ಯಾಶನ್ ಶೋ, ಹಾಡುಗಾರಿಕೆ ಮುಂತಾದವುಗಳನ್ನು ಪ್ರದರ್ಶಿಸಲಾಯಿತು. ಶೈಲೇಶ್ ಪುತ್ರನ್ ಮಾರ್ಗದರ್ಶನದಲ್ಲಿ ಮಹಿಷ ಮರ್ಧಿನಿ ಸಂಘದ ಸದಸ್ಯರಿಂದ ಮಹಿಷ ಮರ್ಧಿನಿ ಯಕ್ಷಗಾನ ಪ್ರದರ್ಶನವಿತ್ತು.

ವೇದಿಕೆಯಲ್ಲಿ ಸೂರತ್ ನ ಹೋಟೇಲು ಉದ್ಯಮಿ ಭೋಜ ಸಫಲಿಗ, ಸಾಪಲ್ಯ ಸೇವಾ ಸಂಘದ ಉಪಾಧ್ಯಕ್ಷರಾದ ಕೃಷ್ಣಕುಮಾರ್ ಬಂಗೇರ, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶೋಭಾ ಬಂಗೇರ. 
 ಕೋಶಾಧಿಕಾರಿ ಹೇಮಂತ್ ಸಫಲಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಕಲಾ ಬಂಗೇರ, ಯುವ ವಿಭಾಗದ ಕಾರ್ಯಧ್ಯಕ್ಷೆ ಸಂಧ್ಯಾ ಪುತ್ರನ್  ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮವನ್ನು ದಿನೇಶ್ ಸುವರ್ಣ ಅವರು ಕಾರ್ಯಕ್ರಮವನ್ನು ನಿರ್ವಹಿಸಿದ್ದು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉಷಾ ಮತ್ತು ವೈಷ್ಣವಿ ಸಫಲಿಗ ನಿರ್ವಹಿಸಿದರು. ಭಾಸ್ಕರ ಸಫಲಿಗ ಅವರು ಕೊನೇಗೆ ಧನ್ಯವಾದ ಸಮರ್ಪಿಸಿದರು.

ಉದ್ಘಾಟನೆಯ ಬಳಿಕ ಯುವ ವಿಭಾಗದ ಸದಸ್ಯರಿಂದ ವೈವಿಧ್ಯಮಯ ನೃತ್ಯಗಳು, ಕಿರು ನಾಟಕ, ನಡೆದು ಬೆಳಿಗ್ಗೆ ನಿಂದಲೇ ಸಭಾಂಗಣದಲ್ಲಿ ಸಮಾಜ ಬಾಂಧವರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಪ್ರೋತ್ಸಾಹವನ್ನು ನೀಡಿದ್ದರು. 
-------------------------------
ನಮ್ಮ ಸಂಸ್ಕೃತಿ ಹಾಗೂ ಮಾತೃಬಾಷೆಯನ್ನು ಉಳಿಸಿ ಬೆಳೆಸಿರಿ : ಡಾ ಸುನೀತಾ ಶೆಟ್ಟಿ
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ ಹಿರಿಯ ಸಾಹಿತಿ ಡಾ. ಸುನೀತ ಎಂ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು, 
ಸನ್ಮಾನಕ್ಕೆ ಉತ್ತರಿಸಿದ ಅವರು ಸಮಾಜದ ಸಾಧಕರನ್ನು ಗುರುತಿಸಿ ಅವರನ್ನು ಸನ್ಮಾನಿಸುದರೊಂದಿಗೆ ನನ್ನನ್ನೂ ಸನ್ಮಾನಿಸಿದ್ದು ಇದು ಒಂದು ಮರೆಯಲಾರದ ಘಟನೆ ಎಂದರು. ಸಾಪಲ್ಯ ಸಮಾಜದ ಯುವ ಜನಾಂಗ ಸಂಘವನ್ನು ಸಮಾಜವನ್ನು ಬಲಿಷ್ಠ ಗೊಳಿಸುವುದರಲ್ಲಿ ಅಪಾರ ಸಮವಹಿಸುತ್ತಿದ್ದಾರೆ, ನಮ್ಮ ಸಂಸ್ಕೃತಿ ಹಾಗೂ ಮಾತೃಬಾಷೆಯನ್ನು ಉಳಿಸಿ ಬೆಳೆಸಿರಿ ಎಂದರು
Powered by Blogger.