ತಿರುಪತಿ ದೇವಸ್ಥಾನದಿಂದ ಆಪ್ ಬಿಡುಗಡೆ
ಜಿಯೋ ಕಂಪೆನಿಯೊಂದಿಗೆ ಹಲವಾರು ಕೋಟಿ ರೂಪಾಯಿಗಳನ್ನು ವ್ಯಯಿಸಿ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
ದರ್ಶನ ಟಿಕೆಟ್ ಬುಕಿಂಗ್, ವಸತಿ ಬುಕಿಂಗ್, ಇ-ಹುಂಡಿ ಮುಂತಾದ ವಿವಿಧ ಯಾತ್ರಿ ಸೇವೆಗಳು ವೆಂಕಟೇಶ್ವರನ ಭಕ್ತರಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಜಿಯೋ ಪ್ಲಾಟ್‌ಫಾರ್ಮ್‌ಗಳ ಪ್ರತಿನಿಧಿಗಳು ಟಿಟಿಡಿಯ ಮೊಬೈಲ್ ಅಪ್ಲಿಕೇಶನ್‌ನ ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಶುಕ್ರವಾರದಂದು ದೇವಸ್ತಾನಮ್ಸ್ ಮ್ಯಾನೇಜ್‌ಮೆಂಟ್‌ಗೆ ಪ್ರಸ್ತುತಪಡಿಸಿದ್ದಾರೆ.
ದೇವಸ್ತಾನದ ಅಧಿಕಾರಿಗಳು ಜಿಯೋ ಪ್ರತಿನಿಧಿಗಳನ್ನು ಅಭಿನಂದಿಸಿದರು. ವಿಶ್ವ ದರ್ಜೆಯ ಮೊಬೈಲ್ ಅಪ್ಲಿಕೇಶನ್ ಅನ್ನು ಹೊರತರಲು ಬೆಂಬಲವನ್ನು ನೀಡಿದ್ದಕ್ಕಾಗಿ ರಿಲಯನ್ಸ್ ಗ್ರೂಪ್‌ಗೆ ಧನ್ಯವಾದ ಅರ್ಪಿಸಿದರು.

Post a Comment