ATMನಿಂದ ಹಣ ಡ್ರಾ ಮಾಡಿ ಕೊಟ್ಟು ವೃದ್ಧನಿಗೆ 2.50 ಲಕ್ಷ ರೂ ವಂಚಿಸಿದ ಸೆಕ್ಯೂರಿಟಿ ಗಾರ್ಡ್ .!
ಪೀಣ್ಯದ ಚಿಕ್ಕರಂಗಯ್ಯ ಕಳೆದ ವರ್ಷ ಖಾಸಗಿ ಕಂಪನಿಯಿಂದ ನಿವೃತ್ತಿಯಾಗಿದ್ದರು. ನಿವೃತ್ತಿ ಬಳಿಕ ಗ್ರಾಜುಟಿ ಪಂಡ್ ಅಂತಾ ಬಂದ ಹಣದಲ್ಲಿ ಹೇಗೋ ಜೀವನ ಸಾಗಿಸಬಹುದು ಅಂತಾ ಇದ್ದ ಇವರಿಗೆ ಮನೆ ಬಳಿಯ ಎಟಿಎಂನ ಸೆಕ್ಯೂರಿಟಿ ಗಾರ್ಡ್ ಚಳ್ಳೆಹಣ್ಣು ತಿನ್ನಿಸಿದ್ದಾನೆ. ಅನಕ್ಷರಸ್ಥರಾಗಿರೋ ಚಿಕ್ಕರಂಗಯ್ಯಗೆ ಎಟಿಎಂನಿಂದ ಹಣ ಡ್ರಾ ಮಾಡಲು ಕಷ್ಟವಾಗುತ್ತಿತ್ತು. ಹಾಗಾಗಿ ಹಣ ಡ್ರಾ ಮಾಡಿಕೊಡುವಂತೆ ತಮ್ಮ ಮನೆಯ ಬಳಿಯೇ ಇರುವ ಎಟಿಎಂನ ಸೆಕ್ಯೂರಿಟಿ ಗಾರ್ಡ್‍ಗೆ ಹೇಳುತ್ತಿದ್ದರು. ಹೀಗೆ ಇವರು ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋದಾಗಲೆಲ್ಲಾ ಸೆಕ್ಯೂರಿಟಿ ಗಾರ್ಡ್ ಹಣ ಡ್ರಾ ಮಾಡಿ ಕೊಟ್ಟು ಚಿಕ್ಕರಂಗಯ್ಯಗೆ ಗೊತ್ತಾಗದಂತೆ ಬರೋಬ್ಬರಿ 2.50 ಲಕ್ಷದಷ್ಟು ರೂ. ಖಾತೆಯಿಂದ ದೋಚಿರುವ ಘಟನೆ ನಡೆದಿದೆ.
Post a Comment