".

Header Ads

ಫೆ.3ರಿಂದ ಸೆಂಟ್ರಲ್‌ ರೈಲ್ವೆಯ ಸಹಯೋಗದೊಂದಿಗೆ ಮುಂಬಯಿಯ ಲೋಕಮಾನ್ಯ ತಿಲಕ್‌ (LTT) ಹಾಗೂ ಸುರತ್ಕಲ್‌ ನಡುವೆ ವಿಶೇಷ ಸಾಪ್ತಾಹಿಕ ರೈಲು

 


ಪ್ರಯಾಣಿಕರ ಬೇಡಿಕೆಯ ಹಿನ್ನೆಲೆಯಲ್ಲಿ ಲೋಕಮಾನ್ಯ ತಿಲಕ್‌ ಹಾಗೂ ಸುರತ್ಕಲ್‌ ನಡುವೆ ವಿಶೇಷ ಸಾಪ್ತಾಹಿಕ ರೈಲನ್ನು ಫೆ.3ರಿಂದ  ಓಡಿಸಲು ಕೊಂಕಣ ರೈಲ್ವೆಯು ನಿರ್ಧರಿಸಿದೆ.

 ಅದರಂತೆ ರೈಲು ನಂ.01453 ಲೋಕಮಾನ್ಯ ತಿಲಕ್‌(ಟಿ)-ಸುರತ್ಕಲ್‌ ನಡುವಿನ ವಿಶೇಷ  ಸಾಪ್ತಾಹಿಕ ರೈಲು ಫೆ.3 ರಿಂದ
ಮಾ.31ರವರೆಗೆ ಪ್ರತಿ ಶುಕ್ರವಾರ ರಾತ್ರಿ 10:15ಕ್ಕೆ ಲೋಕಮಾನ್ಯ ತಿಲಕ್‌ ನಿಲ್ದಾಣದಿಂದ ಪ್ರಯಾಣ ಚಿಳಿಸಲಿದ್ದು, ಮರುದಿನ ಅಪರಾಹ್ನ 3:30ಕ್ಕೆ ಸುರತ್ಕಲ್‌ ನಿಲ್ದಾಣ ತಲುಪಲಿದೆ.

ಅದೇ ರೀತಿ ರೈಲು ನಂ.01454 ಸುರತ್ಮಲ್‌- ಲೋಕಮಾನ್ಯ ತಿಲಕ್‌ ವಿಶೇಷ ಸಾಪ್ತಾಹಿಕ ರೈಲು ಫೆ.4ರಿಂದ ಎ.1ರವರೆಗೆ ಪ್ರತಿ ಶನಿವಾರ ಸಂಜೆ 7:40ಕ್ಕೆ ಸುರತ್ಕಲ್‌ ನಿಲ್ದಾಣದಿಂದ ಪ್ರಯಾಣ ಬಿಳಿಸೆ ಮರುದಿನ ಅಪರಾಹ್ನ 2:25ಕ್ಕೆ ಲೋಕಮಾನ್ಯ ತಿಲಕ್‌ ನಿಲ್ದಾಣ ಮುಟ್ಟಲಿದೆ. 

ಹಾಗೂ ರೈಲು ಒಂದು ಟೂ ಟಯರ್‌ ಎಸಿ, ಮೂರು ಟ್ರಿ ಟಯರ್‌ ಎಸಿ, 8 ಸ್ಲೀಪರ್‌ ಕೋಚ್‌ ಸೇರಿದಂತೆ ಒಟ್ಟು 17 ಕೋಚ್‌ಗಳನ್ನು ಹೊಂದಿರುತ್ತದೆ.  ಮಾತ್ರವಲ್ಲದೆ ಕೊಂಕಣ ರೈಲು ಮಾರ್ಗದಲ್ಲಿ ಇನ್ನಷ್ಟು ವಿದ್ಯುತ್‌ ಚಾಲಿತ ರೈಲುಗಳನ್ನು ಓಡಿಸಲು ಕೊಂಕಣ ರೈಲ್ವೆ ಕ್ರಮಗಳನ್ನು ಕೈಗೊಂಡಿದೆ.

 

Powered by Blogger.