ಹಂಪಿ ಉತ್ಸವ 2023: ಗಾಯಕ ಕೈಲಾಶ್ ಖೇರ್ ಮೇಲೆ ಬಾಟಲಿ ಎಸೆತ
ಕನ್ನಡ ಗೀತೆ ಹಾಡಲಿಲ್ಲವೆಂದು ಗಾಯಕ ಕೈಲಾಶ್ ಖೇರ್ ಅವರ ಮೇಲೆ ಹಂಪಿ ಉತ್ಸವ ಸಂದರ್ಭ ಕೆಲ ಕಿಡಿಗೇಡಿಗಳು ಬಾಟಲಿ ಎಸೆದ ಅಹಿತಕರ ಘಟನೆ ನಡೆದಿದೆ.
ಹಂಪಿ ಉತ್ಸವದ ಸಮಾರೋಪ ಸಮಾರಂಭದ ವೇಳೆ ಪ್ರೇಕ್ಷಕರ ಗ್ಯಾಲರಿಯಿಂದ ಕೈಲಾಶ್ ಖೇರ್ ಮೇಲೆ ನೀರಿನ ಬಾಟಲಿ ಎಸೆಯಲಾಗಿದೆ. ಆದರೂ ಇದಕ್ಕೆ ಹಿಂಜರಿಯದ ಗಾಯಕ ಕೈಲಾಶ್ ಅವರು ತಮ್ಮ ಗಾಯನವನ್ನು ಮುಂದುವರೆಸಿದ್ದರೆಂದು ತಿಳಿದುಬಂದಿದೆ.
ಈ ಸಂಬಂಧ ಪೊಲೀಸರು ಇಬ್ಬರನ್ನು ಬಂಧನಕ್ಕೊಳಪಡಿಸಿದ್ದು, ವಿಚಾರಣೆ ನಡೆಸುತ್ತಿರುವುದಾಗಿ ವರದಿಯಾಗಿದೆ.

Post a Comment