".

Header Ads

ಕಾರ್ಕಳ,ಸುದ್ದಿ:,4 ಲಕ್ಷ ರೂ. ಮೌಲ್ಯದ. 108 ಗ್ರಾಂ ಚಿನ್ನಾಭರಣ ಹಾಗೂ 15,000 ರೂ.ನಗದನ್ನು ಕಳವು ಮಾಡಿ ಪರಾರಿ


ತಾಲೂಕಿನ ಈದು ಗ್ರಾಮದ ಗಂಗೆನೀರು ಹದಿನಡ್ಕ ಎಂಬಲ್ಲಿ ಮನೆಗೆ ನುಗ್ಗಿದ ಕಳ್ಳರು 4 ಲಕ್ಷ ರೂ. ಮೌಲ್ಯದ. 108 ಗ್ರಾಂ ಚಿನ್ನಾಭರಣ ಹಾಗೂ ನಗದು ಕಳವು ಮಾಡಿರುವ ಘಟನೆ ನಡೆದಿದೆ.

ಸಂಜೆಯಿಂದ  ಮುಂಜಾನೆಯ ಅವಧಿಯಲ್ಲಿ ತಾಲೂಕಿನ ಈದು ಗ್ರಾಮದ ಗಂಗೆನೀರು ಹದಿನಡ್ಕ ಎಂಬಲ್ಲಿನ ಹರಿಣಾಕ್ಷಿ ಎಂಬವರ ಮನೆಯ   ಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು ಮನೆಯ ಕೋಣೆಯಲ್ಲಿ ಇದ್ದ ಲಾಕರ್‌ ನಲ್ಲಿಟ್ಟಿದ್ದ ಸುಮಾರು 4,00,000 ರೂ. ಮೌಲ್ಯದ 105 ಗ್ರಾಂ  ಚಿನ್ನಾಭರಣ ಹಾಗೂ 15,000 ರೂ.ನಗದನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ ಎಂಬುದಾಗಿ ಹರಿಣಾಕ್ಷಿ ಅವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Powered by Blogger.