ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂ, ಕ್ರೈಸ್ತರ ಮನೆಗಳು ಧ್ವಂಸ; ವಸ್ತುಗಳು ಬೀದಿಗೆ
ಕಳೆದ 70 ವರ್ಷಗಳಿಂದ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ವಾಸಿಸುತ್ತಿದ್ದ ಅಲ್ಪಸಂಖ್ಯಾತ ಸಮುದಾಯ, ಹಿಂದೂ ಮತ್ತು ಕ್ರಿಶ್ಚಿಯನ್ ಕುಟುಂಬದ ಮನೆಗಳನ್ನು ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ. ಕಂಟೋನ್ಮೆಂಟ್ ಪ್ರದೇಶದಲ್ಲಿ ಹಿಂದೂ ಕುಟುಂಬ, ಕ್ರಿಶ್ಚಿಯನ್ ಕುಟುಂಬ ಮತ್ತು ಶಿಯಾಗಳಿಗೆ ಸೇರಿದ ಕನಿಷ್ಠ ಐದು ಮನೆಗಳನ್ನು ನೆಲಸಮಗೈದು ವಸ್ತುಗಳನ್ನು ಬೀದಿಗೆಸೆಯಲಾಗಿದೆ.
ಸಮೀಪದ ದೇವಾಲಯವೊಂದರಲ್ಲಿ ಆಶ್ರಯ ಪಡೆಯುವಂತೆ ಹಿಂದೂ ಕುಟುಂಬಕ್ಕೆ ಒತ್ತಾಯಿಸಲಾಗಿದೆ. ಆದರೆ ಕ್ರಿಶ್ಚಿಯನ್ ಕುಟುಂಬ ಮತ್ತು ಶಿಯಾಗಳು ಯಾವುದೇ ಆಶ್ರಯವಿಲ್ಲದೆ ಬದುಕುವಂತೆ ಪೀಡಿಸಲಾಗಿದೆ. ಕಳೆದ 70 ವರ್ಷಗಳಿಂದಲೂ ಇಲ್ಲಿಯೇ ವಾಸಿಸುತ್ತಿರುವುದಕ್ಕೆ ದಾಖಲೆ ಎಲ್ಲವೂ ಇದೆ. ಮನೆ ಧ್ವಂಸಕ್ಕೂ ಮುನ್ನಾ ಯಾವುದೇ ನೋಟಿಸ್ ನೀಡಿಲ್ಲ, ಮನೆ ವಸ್ತು ಸಾಗಿಸಲು ಯಾವುದೇ ಸಮಯಾವಕಾಶ ನೀಡಲಿಲ್ಲ. ಕುಟುಂಬವನ್ನು ದೇವಾಲಯಕ್ಕೆ ಕರೆದೊಯ್ಯದೆ ಬೇರೆ ದಾರಿಯಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

Post a Comment