".

Header Ads

ಅಯೋಧ್ಯೆ ರಾಮ ಮಂದಿರದ ರಾಮಸೀತೆಯ ವಿಗ್ರಹಕ್ಕೆ ನೇಪಾಳದ ಗಂಡಕೀ ನದಿಯಿಂದ 40 ಟನ್ ತೂಕದ ಶಿಲೆ

 

ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ. ಕೋಟ್ಯಂತರ ಜನರ ಕನಸು ಈಗ ನನಸಾಗಿದೆ."ರಾಮನ ಜನ್ಮಸ್ಥಳ"ವಾಗಿದೆ. ವಿಷ್ಣುವಿನ 7 ನೇ ಅವತಾರವಾದ ರಾಮನ ಜನ್ಮಸ್ಥಳವಾಗಿರುವ ಸ್ಥಳಕ್ಕೆ ನೀಡಲಾದ ಹೆಸರು. ರಾಮನ ಜನ್ಮಸ್ಥಳ ಇರುವ ಸ್ಥಳವು "ಅಯೋಧ್ಯೆ" ಎಂಬ ನಗರದಲ್ಲಿ ಸರಾಯು ನದಿಯ ದಡದಲ್ಲಿದೆ .ಸುಮಾರು 500 ವರ್ಷಗಳ ಸುದೀರ್ಘ  ಹೋರಾಟದ ನಂತರ, ಅಂತಿಮವಾಗಿ ಅಯೋಧ್ಯೆಯಲ್ಲಿ ಭೂಮಿಪೂಜೆ ಸಮಾರಂಭದ ಮೂಲಕ ರಾಮಮಂದಿರದ ಅಡಿಪಾಯವನ್ನು ಹಾಕಲಾಯಿತು. 
ಈಗ ಅಯೋಧ್ಯೆ ರಾಮ ಮಂದಿರದ ರಾಮಸೀತೆಯ ವಿಗ್ರಹಕ್ಕೆ ನೇಪಾಳದ ಗಂಡಕೀ ನದಿಯಿಂದ 40 ಟನ್ ತೂಕದ ಶಿಲೆಯನ್ನು ಬಳಸಲಾಗಿತ್ತದೆ.ಇದು ಬರೋಬ್ಬರಿ 60 ಮಿಲಿಯನ್ ವರ್ಷದ ಹಳೆಯದೆಂದು ಅಂದಾಜಿಸಲಾಗಿದೆ.ಕಲ್ಲನ್ನು ತೆಗೆಯುವ ಮುನ್ನ ನದಿಗೆ ಕ್ಷಮೆ ಪೂಜೆ ನೆರವೇರಿಸಲಾಯ್ತು.ಇದೆ ಜನವರಿ 31 ರಂದು ಗೋರಖ್ಪುರದ ಗಡಿಯ ಮೂಲಕ ಶಿಲಾ ಕಲ್ಲುಗಳನ್ನು ಹೊತ್ತ ಟ್ರಕ್ ಉತ್ತರ ಪ್ರದೇಶ ತಲುಪಿ ಫೆಬ್ರವರಿ 2 ರಂದು ಅಯೋಧ್ಯೆಗೆ ತಲುಪಬಹುದೆಂದು ಅಂದಾಜಿಸಲಾಗಿದೆ.

Powered by Blogger.