".

Header Ads

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಅನ್ಯ ಜಾತಿಯವರಿಗೂ ಸಹಾಯ ಹಸ್ತ


ಕಿನ್ನಿಗೋಳಿ  ಜಾಗತಿಕ ಬಂಟರ ಸಂಘಗಳ ಒಕ್ಕೂಟ ವತಿಯಿಂದ ಬಂಟರಿಗೆ ಮಾತ್ರವಲ್ಲದೆ ಅನ್ಯಜಾತಿಯವರಿಗೂ ಸಹಾಯಹಸ್ತ ನೀಡಲಾಗುತ್ತಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು.

ಕಿನ್ನಿಗೋಳಿ - ಬಳ್ಕುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಲಕೃಷ್ಣ ಅವರ ಮನೆಗೆ ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ಭೇಟಿ ನೀಡಿದರು. ಬಾಲಕೃಷ್ಣ ಅವರ ಮನೆ ತೀರ ಹದಗೆಟ್ಟಿದ್ದು, ಮನೆ ನಿರ್ಮಾಣಕ್ಕೆ ಸಹಕಾರ ನೀಡಿದರು.

ಕಿನ್ನಿಗೋಳಿ ಬಳ್ಕುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕರ್ನಿರೆಯ ಬಳ್ಕುಂಜೆ ಪಂಚಾಯತ್ ನ ಸಿಬ್ಬಂದಿಯಾದ ಜೆಸಿಂತರವರ ನಿರ್ಮಾಣ ಹಂತದ ಮನೆಗೆ ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಭೇಟಿ ನೀಡಿ ಬಂಟರ ಸಂಘದ ವತಿಯಿಂದ ಸಹಕಾರ  ನೀಡಿದರು.

ಕಿನ್ನಿಗೋಳಿ ಬಳ್ಕುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕರ್ನಿರೆಯ ಗುಲಾಬಿಯವರ ನಿರ್ಮಾಣ ಹಂತದ ಮನೆಗೆ ಜಾಗತಿಕ ಬಂಟರ ಸಂಘದ ವತಿಯಿಂದ ಸಹಕಾರ  ನೀಡಿದರು.

ಈ ಸಂದರ್ಭದಲ್ಲಿ ಜಾಗತಿಕ ಬಂಟರ ಸಂಘದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಪುರುಶೋತ್ತಮ ಶೆಟ್ಟಿ, ವನಜಾ ಕೋಟ್ಯಾನ್, ಪ್ರಭಾಕರ ಶೆಟ್ಟಿ ಕರ್ನಿರೆ, ಪ್ರಸಾದ್ ಶೆಟ್ಟಿ, ಹರಿಶ್ಚಂದ್ರ ಶೆಟ್ಟಿ, ಮೋಹನ್ ಶೆಟ್ಟಿ, ರವೀಂದ್ರ ಶೆಟ್ಟಿ, ರವಿ ಶೆಟ್ಟಿ ಜತ್ತಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.

Powered by Blogger.