".

Header Ads

ಶ್ರೀ ದತ್ತಾತ್ರೇಯ ದುರ್ಗಂಬಿಕ ದೇವಸ್ಥಾನದ 58ನೇ ವಾರ್ಷಿಕ ಪೂಜಾ ಮಹೋತ್ಸವ


ಮುಂಬೈಯ ಉಪ ನಗರ ಘಾಟಿಕೋಪರ್ ಪಶ್ಚಿಮ ಅಸಲ್ಫಾದ ಶ್ರೀ ದತ್ತಾತ್ರೇಯ ಮಿತ್ರ ಭಜನಾ ಮಂಡಳಿ ಸಂಚಾಲಿತ ಶ್ರೀ ದತ್ತಾತ್ರೇಯ ದುರ್ಗಂಬಿಕ ದೇವಸ್ಥಾನದ 58ನೇ ವಾರ್ಷಿಕ ಪೂಜಾ ಮಹೋತ್ಸವವು ಬ್ರಹ್ಮಶ್ರೀ ಕೊಯ್ಯರು ನಂದ ಕುಮಾರ ತಂತ್ರಿಗಳವರ ನೇತೃತ್ವದ ಲ್ಲಿ  ಇದೇ ಜನವರಿ 27 ರಿಂದ ಮೊದಲ್ಗೊಂಡು 29 ರ ತನಕ ನಡೆಯುತ್ತಿದೆ. 

ಜನವರಿ 27 ರಂದು ದೇವತಾ ಪ್ರಾರ್ಥನೆ, ತೋರಣ ಪ್ರತಿಷ್ಠೆ, ಗಣಪತಿ ಹೋಮ, ನವಕ ಕಳಶ ಪ್ರಧಾನ ಹೋಮ, ಧ್ವಜಾರೋಹಣ, ಮಹಾಪೂಜೆ, ಚಾಮುಂಡಿ ಪರ್ವ ಸೇವೆ, ನಡೆದು, ಸಂಜೆ ಸುದರ್ಶನ ಹೋಮ, ದೇವರ ಉತ್ಸವ, ಮಹಾರಂಗ ಪೂಜೆ, ನಿತ್ಯ ಬಲಿ ನಡೆಯಿತು.

ಜನವರಿ 28 ರ ಶನಿವಾರ ದೀಪ ಬಲಿ, ಕಲಶಾಭಿಷೇಕ, ಚಂಡಿಕ ಯಾಗ, ಪೂರ್ಣಾಹುತಿ ನಡೆದು ಮಹಾಪೂಜೆ ನಡೆಯಿತು.

ಮಾಡರ್ನ್ ಗ್ರೂಪ್ ಅಪ್ ಕಂಪೆನಿಯ ಸಿ ಎಂ ಡಿ ಶ್ರೀ ಜ್ಞಾನ್ ಪ್ರಕಾಶ್ ಸಿಂಗ್ ಮತ್ತು ಪರಿವಾರ ದ ವತಿಯಿಂದ ಅನ್ನ ಸಂತರ್ಪಣೆ ನಡೆಯುತ್ತದೆ.

ನಂತರ ಶ್ರೀ ಮಂಜುನಾಥ ಭಜನ ಪರಿಷತ್ ಮುಂಬಯಿ ಘಟಕ ಇವರಿಂದ ಭಜನೆ ನಡೆಯಲಿದೆ.

ಸಂಜೆ ತುಲಾಭಾರ ಸೇವೆ , ರಾತ್ರಿ ಮಂಗಳಾರತಿ, ದೇವರ ಉತ್ಸವ ಬಲಿ, ದೇವಿ ದರ್ಶನ, ಮೂಲಸ್ಥಾನ, ಯಾತ್ರೆ, ಭೂತ ಬಲಿ, ದೇವರ ಶಯನೋತ್ಸವ, ಕವಾಟ ಬಂಧನ ನಡೆದು ರಾತ್ರಿ 10.00 ಗಂಟೆಯಿಂದ ಶ್ರೀ ಗೀತಾಂಬಿಕ ಕೃಪಾ ಪೋಷಿತ ಯಕ್ಷಗಾನ ಮಂಡಳಿಯ ಹಾಗೂ ನುರಿತ ಕಲಾವಿದರ ಕೂಡುವಿಕೆಯಿಂದ ಶ್ರೀ ದೇವಿಮಹಾತ್ಮೆ ಯಕ್ಷಗಾನ ಮಾಸ್ಟರ್  ಶ್ರೀನಿವಾಸ ದೇವ್ ಪೂಜಾರಿ ಯವರ ಪ್ರಯೋಜಯಕತ್ವ ದಲ್ಲಿ  ನಡೆಯಲಿದೆ. 

ಜನವರಿ 29 ರ ರವಿವಾರ ಬೆಳಿಗ್ಗೆ ಕವಾಟೋದ್ಘಾಟನೆ, ಅಭಿಷೇಕ, ಪ್ರಸನ್ನ ಪೂಜೆ, ಚೂರ್ಣೋತ್ಸವ, ಬಟ್ಟಲು ಕಾಣಿಕೆ, ಸಂಜೆ ಅರಸಿನ ಕುಂಕುಮ, ದೇವರ ಉತ್ಸವ, ಓಕುಳಿ, ಅವಭೃತ ಸ್ನಾನ, ಧ್ವಜ ಅವರೋಹನ, ಮಹಾಪೂಜೆ ನಡೆದು ರಾತ್ರಿ 7 ಗಂಟೆಯಿಂದ ಚಾಮುಂಡಿ ದೈವದ ನೇಮೋತ್ಸವ ನಡೆಯಲಿದೆ.

ಜನವರಿ 30 ರ ಸೋಮವಾರ ಬೆಳಿಗ್ಗೆ ಸಂಪ್ರೋಕ್ಷಣೆ, ಮಹಾಮಂತ್ರಾಕ್ಷತೆ ನೆರವೇರಲಿದೆ.

ದೇವಸ್ಥಾನವು 2014 ರಲ್ಲಿ ಸುವರ್ಣ ಮಹೋತ್ಸವದ ಸಂಧರ್ಭದಲ್ಲಿ   ನಾಗ ಮಂಡಲವನ್ನು  ಯಶಸ್ವಿಯಾಗಿ  ಅಯೋಜಿಸಿದ್ದು ,ಪ್ರಥಮ ಬಾರಿ ಮುಂಬೈಯಲ್ಲಿ  ನಾಗ ಮಂಡಲ ನಡೆಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ . .ಶ್ರೀ ಕ್ಷೇತ್ರ ಅಸಲ್ಫ ಎಂದೇ  ಖ್ಯಾತಿಯಾಗಿರುವ ದೇವಸ್ಥಾನದ 58ನೇ ಪೂಜಾ ಮಹೋತ್ಸವದಲ್ಲಿ ಭಾಗಿಯಾಗಿ ಶ್ರೀ ದತ್ತಾತ್ರೇಯ, ಶ್ರೀ  ದುರ್ಗಮ0ಬಿಕೆ, ಶ್ರೀ ನಾಗ ದೇವರ, ಶ್ರೀ ಚಾಮುಂಡಿ ದೈವದ ಮತ್ತು ಪರಿವಾರ ದೇವರ ಕೃಪೆಗೆ ಪಾತ್ರರಾಗೋಣ.   

ದೇವಸ್ಥಾನದ ಧರ್ಮದರ್ಶಿ ದೇವು ಬಿ.ಪೂಜಾರಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು  3 ದಿನಗಳ ಕಾರ್ಯಕ್ರಮಗಳ ವಿವರ ನೀಡಿ ಮುಂಬೈ ಹಾಗೂ ಪರವೂರ ಶ್ರದಾಳುಗಳನ್ನು ಪೂಜಾ ಮಹೋತ್ಸವದಲ್ಲಿ ಭಾಗವಹಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ  ವಿನಂತಿಸಿದ್ದಾರೆ.

Powered by Blogger.