".

Header Ads

ಮಧ್ಯಪ್ರದೇಶ-ರಾಜಸ್ಥಾನದಲ್ಲಿ 3 ಯುದ್ಧ ವಿಮಾನ ಪತನ: ಬೆಂಕಿ ಹೊತ್ತಿ ಉರಿದು ಕೆಳಗೆ ಬಿದ್ದ ಪ್ಲೇನ್​, ಓರ್ವ ಪೈಲೆಟ್​ ಸಾವು


ಒಂ
ದೇ ದಿನದಲ್ಲಿ ವಾಯಪಡೆಯು 3 ಯುದ್ಧ ವಿಮಾನಗಳು ಅಪಘಾತಕ್ಕೀಡಾಗಿ ಪತನಗೊಂಡಿವೆ. ಮಧ್ಯಪ್ರದೇಶದಲ್ಲಿ ಎರಡು ಮತ್ತು ರಾಜಸ್ಥಾನದಲ್ಲಿ ಒಂದು ಯುದ್ಧ ವಿಮಾನ ಪತನಗೊಂಡಿದೆ ಎಂದು ತಿಳಿದುಬಂದಿದೆ. ಭರತ್​ಪುರ, ಮೊರೆನಾ: ಒಂದೇ ದಿನದಲ್ಲಿ ವಾಯಪಡೆಯು 3 ಯುದ್ಧ ವಿಮಾನಗಳು ಅಪಘಾತಕ್ಕೀಡಾಗಿ ಪತನಗೊಂಡಿವೆ.
ಮಧ್ಯಪ್ರದೇಶದಲ್ಲಿ ಎರಡು ಮತ್ತು ರಾಜಸ್ಥಾನದಲ್ಲಿ ಒಂದು ಯುದ್ಧ ವಿಮಾನ ಪತನಗೊಂಡಿದೆ ಎಂದು ತಿಳಿದುಬಂದಿದೆ. ಮಧ್ಯಪ್ರದೇಶದ ಮೊರೇನಾದ ಬಳಿ 2 ಯುದ್ಧ ವಿಮಾನಗಳು ಪತನವಾಗಿದೆ. ಸುಖೋಯ್ - 30 ಹಾಗೂ ಮಿರಾಜ್ 2000 ಯುದ್ಧ ವಿಮಾನಗಳು ಪತನವಾಗಿದೆ. ಮಧ್ಯಪ್ರದೇಶದ ಗ್ವಾಲಿಯರ್ ಏರ್ಬೇಸ್ನಿಂದ ಹೊರಟಿದ್ದ ಯುದ್ಧ ವಿಮಾನಗಳು ಪತನಗೊಂಡಿವೆ ಎಂದು ತಿಳಿದುಬಂದಿದೆ, ಆದರೆ, ಈ ಅವಘಡಕ್ಕೆ ಕಾರಣ ಈವರೆಗೆ ತಿಳಿದುಬಂದಿಲ್ಲ.

ಇನ್ನು, ಸ್ಥಳದಲ್ಲಿ ಶೋಧ ಹಾಗೂ ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ರಕ್ಷಣಾ ಮೂಲಗಳು ಮಾಹಿತಿ ನೀಡಿವೆ. ಎರಡೂ ಯುದ್ಧ ವಿಮಾನಗಳು ಡಿಕ್ಕಿ ಹೊಡೆದುಕೊಂಡಿದ್ದು, ಈ ಬಗ್ಗೆ ತನಿಖೆ ಮಾಡಲಾಗುವುದು ಎಂದು ಭಾರತೀಯ ವಾಯುಪಡೆ ತಿಳಿಸಿದೆ. ಸುಖೋಯ್ - 30 ಯುದ್ಧ ವಿಮಾನದಲ್ಲಿ ಇಬ್ಬರು ಪೈಲಟ್ಗಳಿದ್ದರು. ಈ ಪೈಕಿ, ಒಬ್ಬರನ್ನು ರಕ್ಷಿಸಲಾಗಿದ್ದು, ಅವರು ಬದುಕುಳಿದಿದ್ದಾರೆ.

ಅಲ್ಲದೆ, ಮಿರಾಜ್ 2000 ವಿಮಾನದಲ್ಲಿ ಒಬ್ಬರು ಪೈಲಟ್ ಇದ್ದು, ಅವರು ಸಹ ಬದುಕುಳಿದಿದ್ದಾರೆಂದು ತಿಳಿದುಬಂದಿದೆ. ಈ ಇಬ್ಬರು ಪೈಲಟ್ಗಳಿಗೆ ಗಾಯಗಳಾಗಿದ್ದು, ಓರ್ವ ಪೈಲೆಟ್ ಸಾವನ್ನಪ್ಪಿದ್ದಾರೆಂದು ಎಂದು ವರದಿಗಳು ತಿಳಿಸಿವೆ. ಇಬ್ಬರು ಪೈಲಟ್ಗಳು ಸುರಕ್ಷಿವಾಗಿರುವ ಬಗ್ಗೆ ಮೊರೆನಾ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದು, ಇಬ್ಬರನ್ನು ಸುರಕ್ಷಿತವಾಗಿ ಯುದ್ಧ ವಿಮಾನಗಳಿಂದ ಕಾಪಾಡಲಾಗಿದೆ ಎಂದು ತಿಳಿದುಬಂದಿದೆ. ಯುದ್ಧ ವಿಮಾನವೊಂದರ ಅವಶೇಷ ಪತ್ತೆಯಾಗಿದ್ದು, ಮಧ್ಯ ಪ್ರದೇಶದ ಮೊರೆನಾ ಬಳಿ ಎರಡು ಯುದ್ಧ ವಿಮಾನಗಳು ಪತನವಾಗಿರುವ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮಾಹಿತಿ ನೀಡಲಾಗಿದೆ.

 
Powered by Blogger.