".

Header Ads

ವಜ್ರ ಮಹೋತ್ಸವದ ಸಂಭ್ರಮದಲ್ಲಿ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ, ಬಿರ್ಲಾ ಗೇಟ್ ಶಹಾಡ್

ಜ.29 ರಂದು ಉಲ್ಲಾಸನಗರದಲ್ಲಿ ವಜ್ರ ಮಹೋತ್ಸವದ ಅದ್ಧೂರಿ ಸಮಾರೋಪ

ಹತ್ತೊಂಬತ್ತನೆಯ ದಶಕದಲ್ಲಿ ಕರಾವಳಿ ಕನ್ನಡಿಗರು ತಮ್ಮ ಬದುಕನ್ನು ಕಟ್ಟಿ ಕೊಳ್ಳಲು ಅಶ್ರಯಿಸಿದ್ದು  ಮಾಯಾನಗರಿ ಮುಂಬಯಿಯನ್ನು. ಮುಂಬಯಿ ಪ್ರತಿಯೊಬ್ಬರಿಗೂ ಆಶ್ರಯ ನೀಡಿದೆ. ಇಲ್ಲಿ ಕ್ಯಾಂಟೀನ್, ಹೋಟೆಲ್ ಗಳಲ್ಲಿ ಕೆಲಸ ಮಾಡಿ ರಾತ್ರಿ ಶಾಲೆಯಲ್ಲಿ ಕಲಿತು ಸಣ್ಣ ಪುಟ್ಟ ಕಂಪನಿ, ಬ್ಯಾಂಕ್, ನಲ್ಲಿ ಕೆಲಸ ಗಿಟ್ಟಿಸಿ ಕೊಂಡು ತಮ್ಮ ದಿನ ನಿತ್ಯದ ದಿನಚರಿಯೊಂದಿಗೆ ತಾಯ್ನಾಡಿನಲ್ಲಿ ಮನೆ, ಮನೆಯಲ್ಲಿ ದಿನನಿತ್ಯ ನಡೆಯುತ್ತಿರುವ  ಭಜನೆ ಯನ್ನು ಇಲ್ಲಿಯೂ ಸಂಘಟಿತರಾಗಿ ಮಾಡುತ್ತಾ ದೇವರ ಹೆಸರಿನಲ್ಲಿ ಭಜನಾ ಮಂದಿರ, ಶನೀಶ್ವರ ಗ್ರಂಥ ಪಾರಾಯಾಣ, ದೇವಾಸ್ಥಾನವನ್ನು ನಿರ್ಮಿಸಿ ಭಕ್ತಿಯಿಂದ ಪೂಜಿಸಿದರು ಕಾಲಕ್ರಮೇಣ ಮುಂಬಯಿಯ ನೆರೆಯ ಜಿಲ್ಲೆಯಾದ ಥಾಣೆ ಜಿಲ್ಲೆಗೆ ವಲಸೆ ಬಂದ ನಮ್ಮವರು ( ತುಳು- ಕನ್ನಡಿಗರು )ಇಲ್ಲಿಯೂ ಜಾತಿ,ಮತ,ಬೇಧವಿಲ್ಲದೆ ಸಂಘಟಿಗರಾಗಿ  ನಮ್ಮತನವನ್ನು ಬಿಟ್ಟು ಕೊಡಲಿಲ್ಲ. ಥಾಣೆ ಜಿಲ್ಲೆಯ ಗ್ರಾಮೀಣ ಪ್ರದೇಶವಾದ ಕಲ್ಯಾಣ್, ಡೊಂಬಿವಲಿ, ಶಹಾಡ್, ಭಿವಂಡಿ ಪರಿಸರದಲ್ಲಿ ಎನ್.ಆರ್.ಸಿ, ಐ.ಡಿ.ಐ, ಅಮರ್ ಡೈ, ಸೆಂಚುರಿ ರೇಯಾನ್, ಹರ್ಮನ್ ಮೊಹತ್ತಾ  ಇಂತಹ  ಪ್ರಸಿದ್ಧ ಕಂಪನಿಗಳು ಕಾರ್ಯ ನಿರ್ವಹಿಸುತ್ತಿದ್ದು ಈ ಕಂಪನಿಯಲ್ಲಿ ಒಂದಿಷ್ಟು ಮಂದಿ ನಮ್ಮವರು ಕೆಲಸಕ್ಕೆ ಸೇರಿಕೊಂಡರು.

  ಈ ಕಂಪನಿಯಲ್ಲಿ ಸೇರಿಕೊಂಡ ಕಲ್ಯಾಣ್, ಶಹಾಡ್ ಪರಿಸರದ ತುಳು- ಕನ್ನಡಿಗರು ಒಗ್ಗಟ್ಟಾಗಿ ಸದ್ಗುರು ಶ್ರೀ ನಿತ್ಯಾನಂದ ಮಿತ್ರ ಭಜನಾ ಮಂಡಳಿಯನ್ನು ಸ್ಥಾಪಿಸಿ ಶ್ರೀ ನಿತ್ಯಾನಂದ ಸ್ವಾಮೀಜಿಯ ಭಾವಚಿತ್ರ ವನ್ನಿರಿಸಿ ಭಜನೆಯನ್ನು ಪ್ರಾರಂಬಿಸಿದರು ತದನಂತರ ಶ್ರೀ ದೇವಿಯ ಮೂರ್ತಿಯನ್ನಿಟ್ಟು ಪೂಜಿಸಿ ಬಿರ್ಲಾ ಗೇಟ್ ಶಹಾಡ್ ಪರಿಸರದಲ್ಲಿ ಶ್ರೀ ಮೂಕಾಂಬಿಕಾ ದೇವಿ ದೇವಾಸ್ಥಾನ ನಿರ್ಮಿಸಿ ಭಯಭಕ್ತಿಯಿಂದ ಪೂಜಿಸಲು ಪ್ರಾರಂಭಿಸಿದರು ದೇವಾಸ್ಥಾನದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ರಚಿಸಿ  ಭಕ್ತರ ಸಹಕಾರದಿಂದ ಪರಿಸರದ ಜಾಗವನಹಾಗೂ ಪಡೆದು ಶಿಲಾಮಯ ದೇವಾಸ್ಥಾನವನ್ನು  ನಿರ್ಮಿಸಿ 2015 ರಲ್ಲಿ ಅದ್ಧೂರಿ ಅಷ್ಟಬಂದ,ಬ್ರಹ್ಮಕಲಶ ಮಹೋತ್ಸವ ನೆರವೇರಿಸಲಾಯಿತು. 22-2-2022 ರಲ್ಲಿ ದೇವಸ್ಥಾನದ ಸಭಾಗ್ರಹದಲ್ಲಿ ವಜ್ರ ಮಹೋತ್ಸವದ ಉದ್ಘಾಟನೆಯು ಅದ್ಧೂರಿಯಾಗಿ ನಡೆದಿದ್ದು ಆ ದಿನದಿಂದ ಈ ತನಕ ಅನೇಕ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರ ನಡೆದಿದ್ದು.

ಜನವರಿ 29 ರ ಭಾನುವಾರ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾಗೇಟ್ ಶಹಾಡ್ ಇದರ ವಜ್ರ ಮಹೋತ್ಸವದ ಅದ್ಧೂರಿ ಸಮಾರೋಪ ಸಮಾರಂಭ ಕಾರ್ಯಕ್ರಮವು ಉಲ್ಲಾಸ ನಗರ 3 ರಲ್ಲಿರುವ ಟೌನ್ ಹಾಲ್ ನಲ್ಲಿ ನವಶಕ್ತಿ ವೇದಿಕೆ ಶಶಿಧರ ಶೆಟ್ಟಿ ಬರೋಡ ಇವರ ಪ್ರಾಯೋಜಕತ್ವದ( ನವ ಶಕ್ತಿ ವೇದಿಕೆ) ಭವ್ಯ ಮಂಟಪದಲ್ಲಿ ಬೆಳಿಗ್ಗೆ10.00 ರಿಂದ ರಾತ್ರಿ 10.00 ರ ತನಕ ವಿವಿಧ ಧಾರ್ಮಿಕ, ನಾಟಕ,  ಸಾಂಸ್ಕೃತಿಕ, ನೃತ್ಯ,  ಕಾರ್ಯಕ್ರಮಗಳೊಂದಿಗೆ ಧಾರ್ಮಿಕ ಸಭೆ, ದಾನಿಗಳ ಸನ್ಮಾನ, ಗೌರವಾರ್ಪಣೆ, ವಜ್ರ ಮಹೋತ್ಸವದ ಸವಿನೆನಪಿಗಾಗಿ ಗೌ.ಪ್ರ.ಕಾರ್ಯದರ್ಶಿ ಜಗದೀಶ್ ಶೆಟ್ಟಿ ಬೆಳಂಜೆಯವರ ಸಂಪಾದಕತ್ವದಲ್ಲಿ ' ಶ್ರೀ ನಿತ್ಯಾ- ಅಂಬಿಕಾ' ಸ್ಮರಣೆ ಸಂಚಿಕೆ ಬಿಡುಗಡೆಗೊಳ್ಳಲಿದೆ ಹಾಗೂ ಕಾರ್ತಿಕ್ ಕ್ಯಾಟರರ್ಸ್ ನ ಪ್ರಾಯೋಜಕತ್ವದಲ್ಲಿ ಮದ್ಯಾಹ್ನ, ರಾತ್ರಿ, ಅನ್ನ ಸಂತರ್ಪಣೆ ಚಾ, ತಿಂಡಿಯೊಂದಿಗೆ ನಡೆಯಲಿದೆ.

ಅಂದು ಬೆಳಿಗ್ಗೆ ನಡೆಯುವ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಅಶೀರ್ವಚನ ನೀಡಲು ಬ್ರಹ್ಮ ಶ್ರೀ ಶಂಕರನಾರಾಯಣ ತಂತ್ರಿ ಅತಿಥಿಗಳಾಗಿ ತುಳು ಸಂಘ ಬರೋಡ ಇದರ ಅಧ್ಯಕ್ಷ ಶಶಿಧರ ಶೆಟ್ಟಿ, ಘನ್ಸೋಲಿ ಮೂಕಾಂಬಿಕಾ ದೇವಿ ದೇವಾಸ್ಥಾನದ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ, ನೆರೂಲ್ ಶನಿ ಮಂದಿರದ ಧರ್ಮದರ್ಶಿ  ರಮೇಶ್ ಪೂಜಾರಿ,ಉಲ್ಲಾಸನಗರ ಶಾಸಕ ಕುಮಾರ್ ಐಲಾನಿ, ಉಲ್ಲಾಸ ನಗರ ಬಿಜೆಪಿ ಅಧ್ಯಕ್ಷ ಜಮ್ನು ಪುರುಸ್ವಾಮಿ,  ಉಲ್ಲಾಸ ನಗರ ಶಿವಸೇನಾ ಶಹರ್ ಪ್ರಮುಖ ದೀಲಿಪ್ ಗಾಯಕ್ವಾಡ್, ದೇವಾಸ್ಥಾನ ವಿಶ್ವಸ್ಥರುಗಳಾದ ಡಾ. ಸುರೇಂದ್ರ ವಿ.ಶೆಟ್ಟಿ, ಪ್ರಭಾಕರ್ ಜೆ.ಶೆಟ್ಟಿ, ವಾಮನ್ ಎಮ್.ಶೆಟ್ಟಿ, ಮತ್ತು ಕೃಷ್ಣ ಜಿ.ಮಾತ್ರೆ, ಥಾಣೆ ಮಹಾನಗರ ಪಾಲಿಕೆ ಮಾಜಿ ಮೇಯರ್ ಮೀನಾಕ್ಷಿ ಶಿಂಧೆ, ಓಂ ಶಕ್ತಿ ಮಹಿಳಾ ಸಂಸ್ಥೆ ಕಲ್ಯಾಣ್ ಇದರ ಗೌ.ಅಧ್ಯಕ್ಷೆ ಚಿತ್ರಾ ಆರ್.ಶೆಟ್ಟಿ,  ಕುಲಾಲ ಸಂಘದ ಮಾಜಿ ಅಧ್ಯಕ್ಷ ದೇವದಾಸ್  ಕುಲಾಲ್,  ಕೆ.ಡಿ.ಎಂ.ಸಿ. ನಗರ ಸೇವಕ ಸಂಜಯ್ ಹರಿಭಾವು ಪಾಟೀಲ, ದೇವಾಸ್ಥಾನದ ಅಧ್ಯಕ್ಷರಾದ ಇನ್ನ ಬಗ್ಗರಗುತ್ತು ಕರುಣಾಕರ ಶೆಟ್ಟಿ, ಕಾರ್ಯದ್ಯಕ್ಷ ಚಂದ್ರಕಾಂತ್ ಎಸ್. ಶೆಟ್ಟಿ ಪಾಂಗಾಳ, ವಜ್ರ ಮಹೋತ್ಸವ ಸಮಿತಿಯ ಗೌರವ ಅದ್ಯಕ್ಷ ಮೂಡುಶೆಡ್ಡೆ ವಿಶ್ವನಾಥ ಶೆಟ್ಟಿ, ಅಧ್ಯಕ್ಷ ಪಡುಬಿದ್ರಿ ರಾಜೇಶ್ ಜಯ.ಶೆಟ್ಟಿ ಮತ್ತಿತರ ಪದಾಧಿಕಾರಿಗಳು ಈ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ.

ಅಪರಾಹ್ನ 3.00 ಗಂಟೆಗೆ ಬಹುಮಾನ ವಿತರಣೆ ಧಾರ್ಮಿಕ ಸಭೆ, ಸಾಧಕರಿಗೆ, ಮಹಾ ದಾನಿಗಳಿಗೆ ಸನ್ಮಾನ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದ್ದು  ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಸರಾಂತ ಸಂಘಟಕ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಶ್ರೇಷ್ಠ ಸಂಘಟಕ, ತುಳು ಸಂಘ ಬರೋಡ ಇದರ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ ವಹಿಸಲಿದ್ದು ಅತಿಥಿಗಳಾಗಿ ಕಲ್ಯಾಣ್ ಶಾಸಕ  ವಿಶ್ವನಾಥ ಬೋಯಿರ್, ಥಾಣೆ ಜಿಲ್ಲಾ  ಭಾಜಪಾ ಅಧ್ಯಕ್ಷ ಭಿವಂಡಿ ಸಂತೋಷ ಶೆಟ್ಟಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಬಿಲ್ಲವ ಮಹಾಮಂಡಲದ ಅದ್ಯಕ್ಷ ರಾಜಶೇಖರ ಕೋಟ್ಯಾನ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಬಿಲ್ಲವರ ಅಸೋಸಿಯೇಷನ್ ಅಧ್ಯಕ್ಷ ಹರೀಶ್ ಜಿ.ಅಮೀನ್, ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಧ್ಯಕ್ಷ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಬಂಟರ ಸಂಘದ ಉಪಾಧ್ಯಕ್ಷ ಮೂಂಡ್ಕೂರು ರತ್ನಾಕರ್ ಶೆಟ್ಟಿ, ಬಂಟರ ಸಂಘ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಉಮಾ ಕೆ.ಶೆಟ್ಟಿ, ಕರ್ನಾಟಕ ಸಂಘ ಡೊಂಬಿವಲಿ ಅಧ್ಯಕ್ಷ ದಿವಾಕರ ಶೆಟ್ಟಿ ಇಂದ್ರಾಳಿ, ಕೆ.ಡಿ.ಎಂ.ಸಿ ನಗರ ಸೇವಕ ದಯಾಶಂಕರ ಪಿ. ಶೆಟ್ಟಿ, ಜಯಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅದ್ಯಕ್ಷ ಎಲ್.ವಿ.ಅಮೀನ್, ಥಾಣೆ ಬಂಟ್ಸ್  ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ ವೇಣುಗೋಪಾಲ ಎಲ್. ಶೆಟ್ಟಿ,  ಭಾರತ್ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಸೂರ್ಯಕಾಂತ್ ಜೆ.ಸುವರ್ಣ, ಬೆಂಗಳೂರು ತುಳು ಕೂಟದ ಅಧ್ಯಕ್ಷ ದೇವೇಂದ್ರ ಹೆಗ್ಡೆ,  ಭಾರತ್ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಎನ್.ಟಿ.ಪೂಜಾರಿ,  ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಆಶಾ ಮನೋಹರ ಹೆಗ್ಡೆ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಜೊತೆ ಕಾರ್ಯದರ್ಶಿ ಪ್ರವೀಣ್ ಭೋಜ ಶೆಟ್ಟಿ, ಹೋಟೆಲ್ ಉದ್ಯಮಿಗಳಾದ ಅಶೋಕ ಶೆಟ್ಟಿ, ಹಾಲಾಡಿ ಆದರ್ಶ ಶೆಟ್ಟಿ, ಅಂಬರ್ನಾಥ ಜಯದೀಪ್ ಕನ್ಸ್ಟರಕ್ಷನ್ ನ ಮಾಲಕ ಜಗದೀಶ್ ಆರ್.ಬಂಜನ್, ಬಂಟರ ಸಂಘ ಮುಂಬಯಿ ಭಿವಂಡಿ- ಬದ್ಲಾಪುರ ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷ  ರವೀಂದ್ರ ವೈ.ಶೆಟ್ಟಿ, ಬಿಲ್ಲವರ ಅಸೋಸಿಯೇಷನ್ ಕಲ್ಯಾಣ್ ಸ್ಥಳೀಯ ಕಚೇರಿಯ ಕಾರ್ಯಧ್ಯಕ್ಷ ಸದಾಶಿವ ಜಿ.ಸುವರ್ಣ ಮೊದಲಾದವರು ಉಪಸ್ಥಿತರಿರುವರು.

ಈ ಸಂಧರ್ಭದಲ್ಲಿ' ಶ್ರೀ ನಿತ್ಯಾ- ಅಂಬಿಕಾ' ಸ್ಮರಣ ಸಂಚಿಕೆಯನ್ನು ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಗೊಳಿಸಲಾಗುವುದು ಹಾಗೂ ಇದರ ಜೊತೆಗೆ ಹಿರಿಯ ಮಾರ್ಗದರ್ಶಕಿ ಶ್ರೀಮತಿ ಶಾಂಭವಿ ಎಸ್.ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳಾದ ಮೂಡುಶೆಡ್ಡೆ ವಿಶ್ವನಾಥ ಶೆಟ್ಟಿ, ದಯಾಶಂಕರ ಶೆಟ್ಟಿ, ಚಂದ್ರಕಾಂತ ಎಸ್.ಶೆಟ್ಟಿ, ಕೃಷ್ಣ ಜಿ.ಪೂಜಾರಿ, ಚಂದ್ರಹಾಸ್ ಎನ್.ಶೆಟ್ಟಿ, ಗೋಪಾಲ ಎಸ್.ಹೆಗ್ಡೆ, ಕೆ.ಮೋನಪ್ಪ ಪೂಜಾರಿ, ಡಾ.ಸೂರಜ್ ನಾಯರ್, ಮೊದಲಾದವರನ್ನು ಹಾಗೂ  ಮಹಾದಾನಿಗಳನ್ನು ಮತ್ತು ದಾನಿಗಳನ್ನು ವಿಶೇಷವಾಗಿ ಸನ್ಮಾನಿಸಲಾಗುವುದು.

ಸಂಜೆ 5.00 ಗಂಟೆಯಿಂದ ಲಯನ್ ಕಿಶೋರ್ ಡಿ.ಶೆಟ್ಟಿ ಯವರ ನಿರ್ದೇಶನದಲ್ಲಿ ಲಲಿತ ಕಲಾವಿದರು ಮಂಗಳೂರು ಇವರಿಂದ ಗರುಡ ಪಂಚಮಿ ತುಳು ನಾಟಕ ಪ್ರದರ್ಶನ ನಡೆಯಲಿದೆ.

ಈ ಅದ್ಧೂರಿ ವಜ್ರ ಮಹೋತ್ಸವ ಸಮಾರೋಪ ಕಾರ್ಯಕ್ರಮದಲ್ಲಿ ಸರ್ವ ಸದ್ಬಕ್ತರು, ಶ್ರೀ ಮೂಕಾಂಬಿಕಾ ದೇವಿಯ ಭಕ್ತರು, ಸಂಸ್ಥೆಯ ಅಭಿಮಾನಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿ ಶ್ರೀ ಮೂಕಾಂಬಿಕಾ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ನಿತ್ಯಾನಂದ ಮಿತ್ರ ಭಜನಾ ಮಂಡಳಿ ಬಿರ್ಲಾ ಗೇಟ್ ಶಹಾಡ್ ಸಂಚಾಲಕತ್ವದ   ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಇದರ ಅಧ್ಯಕ್ಷರಾದ ಇನ್ನ ಬಗ್ಗರಗುತ್ತು ಕರುಣಾಕರ ಜೆ.ಶೆಟ್ಟಿ,  ಕಾರ್ಯದ್ಯಕ್ಷರಾದ ಚಂದ್ರಕಾಂತ ಎಸ್.ಶೆಟ್ಟಿ ಪಾಂಗಾಳ,ವಜ್ರ ಮಹೋತ್ಸವ ಸಮಿತಿಯ ಗೌ.ಅದ್ಯಕ್ಷ ಮತ್ತು ಟ್ರಸ್ಟಿ ಮೂಡುಶೆಡ್ಡೆ ವಿಶ್ವನಾಥ ಶೆಟ್ಟಿ, ಅಧ್ಯಕ್ಷ ಪಡುಬಿದ್ರಿ ರಾಜೇಶ್ ಜಯ ಶೆಟ್ಟಿ, ಉಪಾಧ್ಯಕ್ಷ ಮತ್ತು ಕಾರ್ಯಕ್ರಮ ಸಮಿತಿಯ ಕಾರ್ಯಧ್ಯಕ್ಷ  ಅನಿಲ್ ಎಸ್.ಶೆಟ್ಟಿ ಐರೋಲಿ, ಉಪಾಧ್ಯಕ್ಷರಾದ ಸಂತೋಷ ಎಚ್.ಶೆಟ್ಟಿ, ಜಯರಾಮ ಹೆಗ್ಡೆ, ಕಾರ್ಯದರ್ಶಿ ಜಗದೀಶ್ ಎಂ.ಶೆಟ್ಟಿ ಬೆಳಂಜೆ, ಕೋಶಾಧಿಕಾರಿ ಯುವರಾಜ ಕೆ.ಪೂಜಾರಿ, ಮಹಿಳಾ ವಿಭಾಗದ ಕಾರ್ಯದ್ಯಕ್ಷೆ ಪ್ರವೀಣಾ ಪಿ.ಪೂಜಾರಿ, ಯುವ ವಿಭಾಗದ ಕಾರ್ಯದ್ಯಕ್ಷ ದೀಪಕ್ ಎಸ್.ಬಂಗೇರ, ಜೊತೆ ಕಾರ್ಯದರ್ಶಿಯರಾದ ಪ್ರೇಮ್ ಕುಮಾರ್ ಎಸ್.ರೈ, ವಸಂತ ಶೆಟ್ಟಿ, ಜೊತೆ ಕೋಶಾಧಿಕಾರಿ ಗಳಾದ ಮನ್ಮತ್ ಎಸ್.ಶೆಟ್ಟಿ, ಸದಾನಂದ ಐ.ಸಾಲ್ಯನ್, ಸೊವಿನಿಯರ್ ಸಮಿತಿಯ ಕಾರ್ಯಧ್ಯಕ್ಷ ಮತಗತು ಸಲಹೆಗಾರ ಸುಬ್ಬಯ್ಯ ಎ.ಶೆಟ್ಟಿ, ಸ್ವಾಗತ ಸಮಿತಿಯ ಕಾರ್ಯದ್ಯಕ್ಷ ಸುಬೋಧ್ ಡಿ.ಭಂಡಾರಿ,ವಜ್ರ ಮಹೋತ್ಸವ ಸಮಿತಿಯ ಮುಖ್ಯ ಸಲಹೆಗಾರ ಮತ್ತು ಟ್ರಸ್ಟಿ, ತಾಳಿಪಾಡಿ ಗುತ್ತು ಚಂದ್ರಹಾಸ ಎನ್.ಶೆಟ್ಟಿ, ದೇವಾಸ್ಥಾನದ ಟ್ರಸ್ಟಿಗಳಾದ ಡಾ. ಸುರೇಂದ್ರ ವಿ.ಶೆಟ್ಟಿ, ಪ್ರಭಾಕರ್ ಜೆ.ಶೆಟ್ಟಿ, ವಮಾನ್ ಎಂ.ಶೆಟ್ಟಿ, ಕೃಷ್ಣ ಜಿ.ಮಾತ್ರೆ, ದಯಾಶಂಕರ ಪಿ.ಶೆಟ್ಟಿ, ಕೃಷ್ಣ ಜಿ.ಪೂಜಾರಿ, ಸಲಹೆಗಾರರಾದ ಚಿತ್ರ ಆರ್.ಶೆಟ್ಟಿ , ಸುದೀರ್ ಜೆ.ಶೆಟ್ಟಿ, ದಯಾನಂದ ವಿ.ಶೆಟ್ಟಿ, ಪ್ರಕಾಶ್ ಆರ್.ಶೆಟ್ಟಿ, ಗೋಪಾಲ ಎಸ್.ಹೆಗ್ಡೆ, ಜಯಪ್ರಸಾದ್ ಎಸ್.ಶೆಟ್ಟಿ, ಕೆ.ಮೋನಪ್ಪ ಪೂಜಾರಿ, ಸುಧನ್ನ ಅರ್.ಶೆಟ್ಟಿ, ಸತೀಶ್.ಎನ್‌.ಶೆಟ್ಟಿ, ಉದಯ ಕೆ.ಶೆಟ್ಟಿ, ವಜ್ರ ಮಹೋತ್ಸವ ಸಮಿತಿಯ ಸಲಹೆಗಾರರು,ಸಮಿತಿ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗ ಸೊವಿನರ್ ಸಮಿತಿ ಸದಸ್ಯರು, ಶ್ರೀ ನಿತ್ಯಾನಂದ ಭಜನಾ ಮಂಡಳಿಯ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Powered by Blogger.